ಅರ್ಬನ್‍ಹಾತ್‍ನಲ್ಲಿ ದಸರಾ ಸಾಂಸ್ಕøತಿಕ ಉತ್ಸವಕ್ಕೆ ಚಾಲನೆ
ಮೈಸೂರು

ಅರ್ಬನ್‍ಹಾತ್‍ನಲ್ಲಿ ದಸರಾ ಸಾಂಸ್ಕøತಿಕ ಉತ್ಸವಕ್ಕೆ ಚಾಲನೆ

October 1, 2019

ಮೈಸೂರು,ಸೆ.30(ವೈಡಿಎಸ್)-ದಸರಾ ಮಹೋತ್ಸವದ ಅಂಗವಾಗಿ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಅರ್ಬನ್‍ಹಾತ್‍ನಲ್ಲಿ ಇಂದಿನಿಂದ 8 ದಿನ ಗಳ ಕಾಲ ಆಯೋಜಿಸಿರುವ `ದಸರಾ ಸಾಂಸ್ಕøತಿಕ ಉತ್ಸವ’ಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ದಸರಾ ಪ್ರವಾಸೋದ್ಯಮ ಉಪ ಸಮಿ ತಿಯು ಅನಿಕೇತನ ಸಂಸ್ಥೆ ಸಹ ಯೋಗ ದಲ್ಲಿ ಆಯೋಜಿಸಿರುವ ಉತ್ಸವಕ್ಕೆ ಜಿಲ್ಲಾಧಿ ಕಾರಿ ಅಭಿರಾಂ ಜಿ.ಶಂಕರ್ ಚಾಲನೆ ನೀಡಿ ದರು. ನಂತರ ಅರ್ಬನ್‍ಹಾತ್ ಆವರಣ ದಲ್ಲಿ ನೂತನವಾಗಿ ಆರಂಭಿಸಿರುವ ಉಡುಪಿ ಪ್ಯಾಲೇಸ್ ಫುಡ್‍ಕೋರ್ಟ್ ಅನ್ನು ಉದ್ಘಾ ಟಿಸಿದರು. ಅರ್ಬನ್‍ಹಾತ್‍ನಲ್ಲಿ ಈಗಾಗಲೇ ಕರಕುಶಲ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಆರಂಭಗೊಂಡಿದ್ದು, ಮೈಸೂರಿನ ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವ ಮೂಲಕ ನಾಡಿನ ವೈವಿಧ್ಯಮಯ ಸಂಸ್ಕೃತಿ ಯನ್ನು ಅನಾವರಣ ಗೊಳಿಸ ಲಾಗಿದೆ. ಜತೆಗೆ ಚಿನ್ನದ ಲೇಪನದೊಂದಿಗೆ ವರ್ಣ ಮಯವಾದ ಮೈಸೂರು ಶೈಲಿಯ ಚಿತ್ರಕಲೆ ಗಳನ್ನು ಪ್ರದರ್ಶಿಸಲಾಗಿದ್ದು, ಮೈಸೂರಿನ ಹಳೆಯ ಛಾಯಾಚಿತ್ರಗಳ ಪ್ರದರ್ಶನ ಸಾರ್ವಜನಿಕರ ಕಣ್ಮನ ಸೆಳೆಯಲಿದೆ.

ಜತೆಗೆ ಇಂದಿನಿಂದ ಆರಂಭವಾದ ಉಡುಪಿ ಪ್ಯಾಲೇಸ್ ಫುಡ್‍ಕೋರ್ಟ್‍ನಲ್ಲಿ ರುಚಿ ಕರವಾದ ಮೈಸೂರು ಮಸಾಲೆ ದೋಸೆ, ಮೈಸೂರು ಪಾಕ್ ಸೇರಿದಂತೆ ಬಾಯಲ್ಲಿ ನೀರೂರಿಸುವ ಬಗೆ-ಬಗೆಯ ಖಾದ್ಯ ಗಳನ್ನು ಸವಿಯಬಹುದಾಗಿದೆ.

ಸಾಂಸ್ಕøತಿಕ ಕಾರ್ಯಕ್ರಮ: ಪ್ರತಿದಿನ ಸಂಜೆ 5.30ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ಗಳು ನಡೆಯಲಿದ್ದು, ಸೆ.1ರಂದು ಮುಡಿ ಗಂಡಮೂರ್ತಿ ಮತ್ತು ತಂಡದಿಂದ ಜಾನ ಪದ ಸಂಗೀತ, ಸೆ.2ರಂದು ರಾಮನಗರ ಕಲಾಬಳಗದಿಂದ ಜಾನಪದ ನೃತ್ಯ, ಸೆ.3 ರಂದು ಸಚಿನ್ ಮತ್ತು ತಂಡ ದಿಂದ ಕಾಂಟೆಂಪರರಿ ನೃತ್ಯ, ಸೆ.4ರಂದು ಸರಸ್ವತಿ ಮತ್ತು ತಂಡದಿಂದ ಸುಗಮ ಸಂಗೀತ ಹಾಗೂ ಶಿವಕುಮಾರ್ ತಂಡದಿಂದ ಸಂಗೀತ ಸಂಜೆ, ಸೆ.5ರಂದು ಮಿಮಿಕ್ರಿ ಮಹೇಶ್ ತಂಡದಿಂದ ಹಾಸ್ಯ ಸಂಜೆ ಹಾಗೂ ವಿ.ರಘು ತಂಡದಿಂದ ಹಿಂದೂಸ್ತಾನಿ ಸಂಗೀತ, ಸೆ.6ರಂದು ಬಿಯಾಂಡ್ ತಾಲ್ಸ್ ಅವ ರಿಂದ ಕಾಂಟೆಂ ಪರರಿ ನೃತ್ಯ ಹಾಗೂ ಭಾಸ್ಕರ್ ತಂಡ ದಿಂದ ಸುಗಮಸಂಗೀತ, ಸೆ.7ರಂದು ನಿತಿನ್ ರಾಜಾರಾಮ ಶಾಸ್ತ್ರಿ ತಂಡದಿಂದ ಸುಗಮ ಸಂಗೀತ ನಡೆಯಲಿದೆ.

Translate »