ಸಂಗೀತ ವಿವಿ ವಾರ್ಷಿಕ ಘಟಿಕೋತ್ಸವ
ಮೈಸೂರು

ಸಂಗೀತ ವಿವಿ ವಾರ್ಷಿಕ ಘಟಿಕೋತ್ಸವ

October 1, 2019

ಮೈಸೂರು,ಸೆ.30(ಆರ್‍ಕೆ)- ಕರ್ನಾ ಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯದ 4ನೇ ವಾರ್ಷಿಕ ಘಟಿ ಕೋತ್ಸವ ಸಮಾರಂಭವು ಮೈಸೂರಿನ ಬಲ್ಲಾಳ್ ಸರ್ಕಲ್ ಬಳಿ ಇರುವ ನಿತ್ಯೋ ತ್ಸವ ಸಭಾಂಗಣದಲ್ಲಿ ಇಂದು ನಡೆಯಿತು.

ಸಂಗೀತ ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಅವರು ವಿವಿಧ ಪದವಿ, ಚಿನ್ನದ ಪದಕ ಹಾಗೂ ಬಹುಮಾನಗಳನ್ನು ಪ್ರದಾನ ಮಾಡಿದರು. ರಾಷ್ಟ್ರೀಯ ಮೌಲ್ವೀಕರಣ ಮತ್ತು ಮಾನ್ಯತಾ ಪರಿಷತ್ (ಓಂಂಅ) ನಿರ್ದೇಶಕ ಡಾ.ಎಸ್.ಸಿ.ಶರ್ಮಾ ಅವರು ಸಮಾರಂಭದಲ್ಲಿ ಪಾಲ್ಗೊಂಡು ಘಟಿ ಕೋತ್ಸವ ಭಾಷಣ ಮಾಡಿದರು.

ಗೇಯ ಸಂಗೀತ ನಿಕಾಯದ 45, ವಾದ್ಯ ಸಂಗೀತ ನಿಕಾಯದ 5, ನೃತ್ಯ ನಿಕಾಯದ 19, ನಾಟಕ ನಿಕಾಯದ 16 ಸೇರಿ 85 ಅಭ್ಯರ್ಥಿಗಳಿಗೆ ವಿವಿಧ ಪದವಿ, 17 ಮಂದಿಗೆ ಚಿನ್ನದ ಪದಕ ಪ್ರದಾನ ಹಾಗೂ ನಗದು ಬಹುಮಾನ ನೀಡಲಾಯಿತು.

‘ಮೈಸೂರು ಮಿತ್ರ’ ಅಂಕಣಕಾರರಾದ ನಿವೃತ್ತ ತಹಶೀಲ್ದಾರ್ ಡಾ.ವಿ.ರಂಗನಾಥ್ ಅವರಿಗೆ ‘ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಸಂಗೀತ ಮತ್ತು ಸಾಂಸ್ಕøತಿಕ ಅಧ್ಯಯನ’ ವಿಷಯದಲ್ಲಿ ಸಂಗೀತ ವಿಶ್ವವಿದ್ಯಾನಿಲಯವು ಡಿ.ಲಿಟ್ ಪದವಿ ನೀಡಿದ್ದು, ಇಂದು ನಡೆದ ಘಟಿಕೋತ್ಸವ ದಲ್ಲಿ ಪದವಿ ಪ್ರದಾನ ಮಾಡಲಾಯಿತು. ಅದೇ ರೀತಿ ವಿದ್ವಾನ್ ವೈ.ಎನ್. ಬಾಲ ಕೃಷ್ಣ, ಡಾ.ಜ್ಯೋತಿಶಂಕರ್ ಹಾಗೂ ಡಾ. ಸಿ.ಹೆಚ್.ಗುರುರಾಜರಾವ್ ಅವರಿಗೂ ಇದೇ ವೇಳೆ ಪ್ರೊ. ನಾಗೇಶ್ ವಿ.ಬೆಟ್ಟಕೋಟೆ ಅವರು ಪದವಿ ಪ್ರದಾನ ಮಾಡಿದರು. 40 ಮಹಿಳೆ ಯರು ಸೇರಿ 59 ಮಂದಿ ಸ್ನಾತಕೋತ್ತರ ಹಾಗೂ 11 ಮಹಿಳೆಯರು ಸೇರಿ 22 ಮಂದಿ ಸ್ನಾತಕ ಪದವಿ ಪಡೆದುಕೊಂಡರು.

ಅಭ್ಯರ್ಥಿಗಳು, ಪ್ರಾಧ್ಯಾಪಕರನ್ನುದ್ದೇಶಿಸಿ ಘಟಿಕೋತ್ಸವ ಭಾಷಣ ಮಾಡಿದ ನ್ಯಾಕ್ ನಿರ್ದೇಶಕ ಡಾ.ಎಸ್.ಸಿ.ಶರ್ಮ, ಸಂಗೀತ ಕಲೆ ಎಂಬುದು ಮನುಷ್ಯನಿಗೆ ಹುಟ್ಟಿನಿಂ ದಲೇ ಬರುತ್ತದೆ. ಆಸಕ್ತಿ-ಭಕ್ತಿಯಿಂದ ಅಭ್ಯಸಿ ಸಿದವರು ಮಾತ್ರ ಈ ಕಲೆಯನ್ನು ಕರಗತ ಮಾಡಲು ಸಾಧ್ಯ ಎಂದರು.

ಕಾಲವಾದ ನಂತರವೂ ಸಮಾಜ, ಜನರ ನಡುವೆ ಬದುಕಿರುವವರು ಸಂಗೀತ ಕಲಾ ವಿದರು. ನಮ್ಮನ್ನು ಉನ್ನತ ಶಿಕ್ಷಣದವರೆಗೆ ಓದಿಸಿ ಪದವಿ ಪಡೆಯಲು ತಮ್ಮ ತನು-ಮನ ತ್ಯಾಗ ಮಾಡಿದ ಪೋಷಕರು ಹಾಗೂ ಗುರುಗಳನ್ನು ಎಂದೂ ಮರೆಯಬಾರದು. ಸದಾ ಅವರ ಸ್ಮರಣೆ ಮಾಡಿಕೊಳ್ಳುವ ಮೂಲಕ ಕೃತಜ್ಞತೆ ಸಲ್ಲಿಸಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನೀವು ಕಲಿತಿರುವ, ಕಲಿಯಬೇಕಿರುವ ಸಂಗೀತ, ನೃತ್ಯ, ನಾಟಕ ಇತ್ಯಾದಿ ಪ್ರದರ್ಶಕ ಕಲೆಗಳು ನಮ್ಮ ಪ್ರಾಚೀನ ಪರಂಪರೆಯ ಹೆಗ್ಗುರುತು. ಸಂಗೀತ ಕೇವಲ ಶಬ್ಧವಲ್ಲ, ಅದು ಸದಾ ಪ್ರವಹಿಸುವ ನದಿಯಂತೆ. ಮನೋ ಎಲ್ಲೆಗಳನ್ನು ದಾಟಿ ಮನುಷ್ಯನ ಭೌತಿಕ ಆಯಾಮಗಳನ್ನು ಉತ್ತುಂಗಕ್ಕೊಯ್ಯುವ ಪ್ರಕ್ರಿಯೆ ಎಂದರು. ವಿಶ್ವವಿದ್ಯಾಲಯದ ಸಿಂಡಿ ಕೇಟ್ ಹಾಗೂ ಶೈಕ್ಷಣಿಕ ಮಂಡಳಿ ಸದಸ್ಯರು, ಪರೀಕ್ಷಾಂಗ ಕುಲಸಚಿವ ಪ್ರೊ.ಆರ್. ರಾಜೇಶ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕೆಆರ್ ಕ್ಷೇತ್ರದಲ್ಲಿ ಮಿಸ್ ಕಾಲ್ ಕೊಟ್ಟು 33,400 ಮಂದಿ ಬಿಜೆಪಿ ಸದಸ್ಯತ್ವ ನೋಂದಣಿ
ಮೈಸೂರು,ಸೆ.30(ಆರ್‍ಕೆಬಿ)- ಕೃಷ್ಣ ರಾಜ ಕ್ಷೇತ್ರ ವ್ಯಾಪ್ತಿಯ 270 ಬೂತ್‍ಗಳಲ್ಲಿ ಎಲ್ಲಾ ಜಾತಿ, ಧರ್ಮ, ವರ್ಗಗಳ ಒಟ್ಟು 33,400 ಮಂದಿ ಮಿಸ್ ಕಾಲ್ ಕೊಡುವ ಮೂಲಕ ಬಿಜೆಪಿಯಲ್ಲಿ ಹೊಸದಾಗಿ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ನೋಂದಾಯಿಸಿಕೊಂಡ ಹೊಸ ಸದಸ್ಯ ರಿಗೆ ವಾರ್ಡ್‍ವಾರು ಸಭೆ ನಡೆಸಿ, ಬಿಜೆಪಿಗೆ ಸೇರ್ಪಡೆಯಾಗಿದ್ದಕ್ಕೆ ಸ್ವಾಗತಿಸಿ, ಅಭಿನಂ ದಿಸಲಾಯಿತು. ಜೊತೆಗೆ ಎಲ್ಲರಿಗೂ ಬಿಜೆಪಿ ನಡೆದು ಬಂದ ದಾರಿಯ ಬಗ್ಗೆ ತಿಳವಳಿಕೆ ನೀಡಲಾಯಿತು. ಬೂತ್ ಮಟ್ಟದಲ್ಲಿ ಜವಾ ಬ್ದಾರಿ ತೆಗೆದುಕೊಂಡು ಕೆಲಸ ನಿರ್ವಹಿಸು ವಂತೆ ಆಹ್ವಾನಿಸಲಾಯಿತು. ಇದಕ್ಕೆ ನೂತನ ಸದಸ್ಯರು ಮುಕ್ತ ಮನಸ್ಸಿನಿಂದ ಒಪ್ಪಿಗೆ ಸೂಚಿ ಸಿದ್ದು, ಪಕ್ಷ ಸಂಘಟನೆ ಮತ್ತು ರಾಷ್ಟ್ರ ನಿರ್ಮಾಣ ಕ್ಕಾಗಿ ಕೈಜೋಡಿಸುವುದಾಗಿ ತಿಳಿಸಿದ್ದಾ ರೆಂದು ರಾಮದಾಸ್ ತಿಳಿಸಿದರು.

ವಾರ್ಡ್‍ವಾರು ನಡೆದ ಸಭೆಗಳಲ್ಲಿ ಭಾಗ ವಹಿಸಿ, ಎಲ್ಲರೊಂದಿಗೆ ಪಕ್ಷದ ಮತ್ತು ತಮ್ಮ ಭಾವನೆಯನ್ನು ಹಂಚಿಕೊಂಡಿದ್ದು, ಈ ಸಂದರ್ಭದಲ್ಲಿ ಕೆಲವು ಹಿರಿಯರು, ನಿವೃತ್ತ ಅಧಿಕಾರಿಗಳು ತಾವು ನಿವೃತ್ತಿ ನಂತರ ಮನೆ ಯಲ್ಲಿ ಅನವಶ್ಯಕವಾಗಿ ಕಾಲಹರಣ ಮಾಡು ತ್ತಿದ್ದ ತಮಗೆ ಬಿಜೆಪಿ ಸದಸ್ಯತ್ವ ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಪಕ್ಷ, ಸಮಾಜ ಮತ್ತು ದೇಶದ ಕಾರ್ಯಗಳಿಗೆ ಕೈಜೋಡಿ ಸುವುದಾಗಿ ಆಸಕ್ತಿ ತೋರಿಸಿದ್ದಾರೆ ಎಂದರು.

ಈ ಸಂಬಂಧ ಆಯಾ ಬೂತ್‍ಗಳಲ್ಲಿ ನಡೆಯುವ ಬೂತ್ ಪದಾಧಿಕಾರಿಗಳ ಚುನಾ ವಣೆಯಲ್ಲಿ ಭಾಗಿಯಾಗಲು ಆಮಂತ್ರಿಸ ಲಾಗಿತ್ತು. ಹಾಗಾಗಿ ಸೆ.27ರಂದು 19 ವಾರ್ಡ್ ಗಳ 270 ಬೂತ್‍ಗಳಲ್ಲಿ ಸಭೆ ನಡೆಸಿ, ಆಯಾ ಬೂತ್‍ಗಳಲ್ಲಿ ಚುನಾವಣೆ ನಡೆಸಿ ಅಭಿಪ್ರಾಯ ಪಡೆದು ಪ್ರತಿ ಬೂತ್‍ನಲ್ಲೂ ನಿರ್ದಿಷ್ಟ ಫಾರಂಗಳಲ್ಲಿ ಅರ್ಜಿ ಪಡೆದು ಸರ್ವಾನುಮತದಿಂದ 13, 18 ಮತ್ತು 31 ಮಂದಿ ಕಾರ್ಯಕರ್ತರ ಬೂತ್ ಸಮಿತಿ ರಚಿಸಲಾಗಿದೆ. 15 ಗಂಟೆಗ ಅವಧಿಯಲ್ಲಿ ಎಲ್ಲಾ 270 ಬೂತ್‍ಗಳ ಚುನಾವಣೆ ನಡೆಸಿ, ಎಲ್ಲಾ ದಾಖಲೆಗಳನ್ನು ಮಂಡ ಲದ ಸೂಚಿದ ಚುನಾವಣಾಧಿಕಾರಿಗಳಿಗೆ ನೀಡಲಾಗಿದೆ. ಬೂತ್ ಸಮಿತಿಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ಅವಕಾಶ ನೀಡಲಾಗಿದೆ. ಇದರಲ್ಲಿ ಶೇ.50 ಭಾಗವನ್ನು ಅನುಭವ ಹೊಂದಿದ ಪಕ್ಷದ ಸದಸ್ಯರಿಗೆ ಮತ್ತು ಶೇ.50 ಭಾಗವನ್ನು ಹೊಸ ಸದಸ್ಯರಿಗೆ ನೀಡುವ ಮೂಲಕ ಭವಿಷ್ಯದಲ್ಲಿ ಕಾರ್ಯಕರ್ತರ ನಿರ್ಮಾಣ ಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಹಿಂದೂ, ಮುಸ್ಲಿಂ, ಕ್ರೈಸ್ತ ಸಮಾಜ ದವರಲ್ಲದೆ ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದವರಿಗೆ ಹೆಚ್ಚು ಪ್ರಾಧಾನ್ಯತೆ ನೀಡುವ ಮೂಲಕ ಸಮತೋಲನ ಕಾಪಾಡಲಾ ಗಿದೆ ಎಂದು ರಾಮದಾಸ್ ಹೇಳಿದರು.

Translate »