ಹಾದಿ ತಪ್ಪುತ್ತಿರುವ ವಿದ್ಯಾವಂತರು: ಸರ್ಪಭೂಷಣ ಮಠಾಧೀಶ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ ಆತಂಕ
ಕೊಡಗು

ಹಾದಿ ತಪ್ಪುತ್ತಿರುವ ವಿದ್ಯಾವಂತರು: ಸರ್ಪಭೂಷಣ ಮಠಾಧೀಶ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ ಆತಂಕ

February 24, 2019

ಸೋಮವಾರಪೇಟೆ: ಇಂದಿನ ಸಮಾಜದಲ್ಲಿ ವಿದ್ಯಾವಂತರೇ ಹಾದಿ ತಪ್ಪುತ್ತಿರುವುದು ವಿಷಾದನೀಯ ಎಂದು ಬೆಂಗಳೂರು ಸರ್ಪಭೂಷಣ ಮಠಾ ಧೀಶರಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಮಸಗೋಡು ಚೆನ್ನಮ್ಮ ಟ್ರಸ್ಟ್ ಆಶ್ರಯದಲ್ಲಿ ಮಸಗೋಡು ಚೆನ್ನಮ್ಮ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆವರಣದಲ್ಲಿ ಆಯೋ ಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂ ಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಅತ್ಯವಶ್ಯಕ. ಹಾಗೆಯೇ ಓದಿನ ಜೊತೆಗೆ ಬುದ್ಧಿವಂತಿಕೆಯೂ ಬೇಕು ಎಂದರು. ಹೀಗೆ ಬುದ್ಧೊವಂತಿಕೆ ಮತ್ತು ಶಿಕ್ಷಣ ಪಡೆದವರೇ ಹಾದಿ ತಪ್ಪುತ್ತಿರುವುದು ಈ ದೇಶದ ದುರಂತ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷ ಣಾಧಿಕಾರಿ ನಾಗರಾಜಯ್ಯ ಮಾತನಾಡಿ, ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಮುಂದಾಲೋಚನೆ ಇಟ್ಟುಕೊಂಡು ಶಿಕ್ಷಣ ಕೊಡಿಸಲು ಶ್ರಮವಹಿಸಲಿ, ಶಿಕ್ಷಕರು ಮಕ್ಕಳ ವ್ಯಕ್ತಿತ್ವವನ್ನು ವಿಕಸನಗೊಳಿಸಬೇಕು ಹಾಗೂ ಅವರ ಆಸಕ್ತಿ ಗಮನಿಸಿ ಪ್ರೋತ್ಸಾಹಿಸ ಬೇಕು ಎಂದರು. ಕಾರ್ಯಕ್ರಮದಲ್ಲಿ ಉಪ ಸ್ಥಿತರಿದ್ದ ಸೋಮವಾರಪೇಟೆಯ ವಿರಕ್ತ ಮಠಾಧೀಶ ಶ್ರೀ ವಿಶ್ವೇಶ್ವರ ಸ್ವಾಮೀಜಿ ಮಾತ ನಾಡಿ, ಸುಶಿಕ್ಷಿತರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ವಿದ್ಯೆ ಮನುಷ್ಯನ ಆಯ ಸ್ಸಿನವರೆಗೂ ಜೊತೆಗಿರುವ ಸಂಪತ್ತು ಎಂದ ಅವರು, ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಗಳಿಕೆ, ಬಳಕೆ ಹಾಗೂ ಉಳಿಕೆಯನ್ನು ಮೈಗೂಡಿಸಿಕೊಳ್ಳಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಮಾತ ನಾಡಿ, ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ಶಿಕ್ಷಣ ವೆಂಬುದು ಕೇವಲ ಉದ್ಯೋಗ ಗಳಿಸು ವುದಕ್ಕಷ್ಟೇ ಸೀಮಿತವಾಗಿರಬಾರದು. ಪೋಷ ಕರು ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಸಬೇಕು. ಆಗ ಮಾತ್ರ ನಮ್ಮ ಸಂಸ್ಕøತಿ, ಆಚಾರ ವಿಚಾರಗಳು ಉಳಿಯುತ್ತವೆ ಎಂದರು.

ಕೇಂದ್ರ ಆಹಾರ ಸಂಶೋಧನಾ ತರ ಬೇತಿ ಕೇಂದ್ರದ ನಿವೃತ್ತ ವಿಜ್ಞಾನಿಗಳಾದ ಡಾ.ಸಿ.ಎಂ.ಸೌಭಾಗ್ಯ ಮಾತನಾಡಿ, ಭತ್ತದ ಬೆಳೆ ಹಾಗೂ ಅಕ್ಕಿಯ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಲೋಕೇಶ್, ಡಿ.ಎಂ.ಚೆನ್ನಪ್ಪ, ಚನ್ನಪ್ಪ, ನೇರುಗಳಲೆ ಗ್ರಾಪಂ ಅಧ್ಯಕ್ಷ ತಿಮ್ಮಯ್ಯ, ಚೆÀನ್ನಮ್ಮ ಟ್ರಸ್ಟ್‍ನ ಕಾರ್ಯದರ್ಶಿ ಡಾ.ಎಂ.ಸಿ.ದಿವಾಕರ್, ಮುಖ್ಯೋಪಾಧ್ಯಾಯ ಸಂತೋಷ್ ಹಿರೇಮಠ ಉಪಸ್ಥಿತರಿದ್ದರು.

ಇದೇ ವೇಳೆ ಅಬಾಕಸ್ ಶಿಕ್ಷಕಿ ಸುಕನ್ಯ, ಕರಾಟೆ ತರಬೇತುದಾರ ಅರುಣ್‍ಕುಮಾರ್, ಅಡ್ವೆಂಚರ್ಸ್ ನೃತ್ಯ ಕಲಾ ತಂಡದ ಚೇತನ್ ಹಾಗೂ ದರ್ಶನ್ ಅವರನ್ನು ಸನ್ಮಾನಿಸಲಾ ಯಿತು. ನಂತರ ವಿದ್ಯಾರ್ಥಿಗಳು ನಡೆಸಿ ಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮ ಜನಮ ನಸೂರೆಗೊಂಡಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಡಾ.ಶಿವ ಕುಮಾರ ಸ್ವಾಮೀಜಿ ಮತ್ತು ಭಯೋತ್ಪಾದ ಕರ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Translate »