ಸಿದ್ದಾಪುರ: ಜಿಪಂ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಚೆನ್ನಯ್ಯನ ಕೋಟೆ ಜಿಪಂ ಕ್ಷೇತ್ರ ವ್ಯಾಪ್ತಿಯ ಹುಂಡಿ ಗ್ರಾಮದಲ್ಲಿ 16 ಲಕ್ಷ ರೂ. ವೆಚ್ಚದಲ್ಲಿ 50 ಸಾವಿರ ಲೀಟರ್ ಸಾಮಥ್ರ್ಯದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ತಾಪಂ ಮಾಜಿ ಸದಸ್ಯ ಸಿ.ಎಂ.ಹಂಸ ಚಾಲನೆ ನೀಡಿದರು. ಬಳಿಕ ಮಾತನಾಡಿ, ಬಹುದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಗ್ರಾಮದಲ್ಲಿ ಇರುವುದನ್ನು ಮನಗಂಡು 16 ಲಕ್ಷ ವೆಚ್ಚದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಿದೆ.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಯೋಗೇಶ್ ಮಾತನಾಡಿ, ಈ ಭಾಗದಲ್ಲಿ ಕುಡಿಯುವ ನೀರು, ರಸ್ತೆ, ತಡೆಗೋಡೆ, ಸಾರ್ವಜನಿಕ ಬಸ್ ತಂಗುದಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದರು. ಈ ಸಂದರ್ಭ ಮಸೀದಿ ಸಮಿತಿಯ ಅಧ್ಯಕ್ಷ ಸಿ.ಮಹಮ್ಮದ್, ಖತೀಬ್ ನೌಷಾದ್ ಅನ್ವರಿ ಉಸ್ತಾದ್, ಜಿಪಂ ಮಾಜಿ ಸದಸ್ಯ ಹೆಚ್.ಸಿ.ಸಣ್ಣಯ್ಯ, ವಲಯ ಕಾಂಗ್ರೆಸ್ ಅಧ್ಯಕ್ಷ ವಾಟೇರಿರ ಸುರೇಶ್, ಗ್ರಾಪಂ ಸದಸ್ಯ ನಿಯಾಜ್, ಉಮ್ಮರ್, ಟಿ.ಪಿ.ಅಬೂಬಕ್ಕರ್, ಯುವ ಕಾಂಗ್ರೆಸ್ ನ ಶಮೀರ್ ಹುಂಡಿ ಸೇರಿದಂತೆ ಇತರ ಗ್ರಾಮಸ್ಥರು ಹಾಜರಿದ್ದರು.