ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ಹೆಚ್ಚು ಪ್ರಯೋಜನ
ಕೊಡಗು

ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ಹೆಚ್ಚು ಪ್ರಯೋಜನ

February 24, 2019

ಗೋಣಿಕೊಪ್ಪಲು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಣ್ಣ ಹಾಗೂ ಅತೀಸಣ್ಣ ರೈತರನ್ನು ಕೃಷಿಯಲ್ಲಿ ಪ್ರೋತ್ಸಾ ಹಿಸಲು ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸಣ್ಣ ಬೆಳೆಗಾರರಿಗೆ ಹೆಚ್ಚು ಪ್ರಯೋಜನಕಾರಿ ಎಂದು ಶಾಸಕ ಕೆ. ಜಿ. ಬೋಪಯ್ಯ ತಿಳಿಸಿದರು.

ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ವತಿ ಯಿಂದ ಆಯೋಜಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಉದ್ಘಾಟನೆಯ ನೇರ ಪ್ರಸಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜ ಪೇಯಿ ಅವರುಗಳ ‘2022ನೇ ಇಸವಿ ಸಂದರ್ಭ ಭಾರತ ಹೆಚ್ಚು ಅಭಿವೃದ್ಧಿ ರಾಷ್ಟ್ರ ವಾಗಬೇಕು’ ಎಂಬ ಕನಸನ್ನು ನನಸು ಮಾಡುವ ಪ್ರಯತ್ನ ಇದಾಗಿದೆ. ರೈತ ನಿಂದಲೇ ದೇಶದ ಅಭಿವೃದ್ಧಿ ಎಂಬು ದನ್ನು ಅರಿತು, ರೈತ ಹೆಚ್ಚು ಸ್ವಾಭಿಮಾನಿಯಾ ಗಲು ಉತ್ತೇಜಿಸಲು ಈ ಯೋಜನೆ ಸಹಕಾರಿಯಾಗಲಿದೆ. ಆರ್ಥಿಕ ಸುಧಾರ ಣೆಗೂ ಇದು ಪೂರಕ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸಾಜುಜಾರ್ಜ್ ಮಾತನಾಡಿ, ಕಳೆದ 5 ವರ್ಷಗಳಿಂದ ಕೃಷಿಗೆ ಸಂಬಂಧಿಸಿದಂತೆ ಹೆಚ್ಚು ಯೋಜನೆಗಳು ಕೇಂದ್ರದಿಂದ ಅನು ಷ್ಠಾನಗೊಳಿಸುತಿವೆ. ಬಜೆಟ್‍ನಲ್ಲಿ ಘೋಷಣೆ ಮಾಡಿರುವಂತೆ ಕಿಸಾನ್ ಸಮ್ಮಾನ್ ಯೋಜನೆ ಬಿಡುಗಡೆಯಾಗಿದೆ. ಇದರಿಂದ 10 ಕೋಟಿ ರೈತರಿಗೆ ಅನುಕೂಲವಾಗುತ್ತಿದೆ ಎಂದರು. ಕೃಷಿ ಆರಂಭಿಸುವಾಗ ಹೆಚ್ಚು ಆರ್ಥಿಕ ಕೊರತೆಯಿಂದ ಹೆಚ್ಚು ಆತ್ಮಹತ್ಯೆ ಪ್ರಕರ ಣಗಳು ನಡೆಯುತ್ತಿವೆ. ಇದನ್ನು ಮನ ಗಂಡು ಆರ್ಥಿಕ ಸಹಾಯದ ಮೂಲಕ ಬಿತ್ತನೆ ಬೀಜ ಖರೀದಿ, ಔಷಧಿ ಖರೀ ದಿಗೆ ಸಹಾಯವಾಗುವಂತೆ ನೆರವು ನೀಡುವ ಉದ್ದೇಶ ಇದಾಗಿದೆ. ಇದರಿಂದ ಕೃಷಿ ಚಟು ವಟಿಕೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.

ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಸದಸ್ಯ ಸಿ.ಕೆ. ಬೋಪಣ್ಣ, ಪುತ್ತರಿ ರೈತ ಉತ್ಪಾ ದಕರ ಸಂಘದ ಅಧ್ಯಕ್ಷ ಮನೆಯಪಂಡ ಸೋಮಯ್ಯ, ವಿಜ್ಞಾನಿ ಡಾ. ವೀರೇಂದ್ರಕು ಮಾರ್ ಉಪಸ್ಥಿತರಿದ್ದರು. ಕೃಷಿಕರು ಉದ್ಘಾ ಟನೆ ನೇರ ಪ್ರಸಾರವನ್ನು ವೀಕ್ಷಿಸಿದರು.

Translate »