ಮತದಾನ ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನ: ಜಿಪಂ ಸಿಇಓ ಕೆ.ಜ್ಯೋತಿ
ಮೈಸೂರು

ಮತದಾನ ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನ: ಜಿಪಂ ಸಿಇಓ ಕೆ.ಜ್ಯೋತಿ

April 5, 2019

ಮೈಸೂರು: ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಅತಿ ಹೆಚ್ಚು ಮತದಾನವಾಗುವಂತೆ ಸಮಿತಿ ಪ್ರಯತ್ನಿ ಸುತ್ತಿದೆ. ಗ್ರಾಮಾಂತರ ಭಾಗದ ಜನರು ಬಹು ಬೇಗ ಸ್ಪಂದಿಸುತ್ತಾರೆ. ಮತದಾನ ಪ್ರಮಾಣ ಹೆಚ್ಚಿಸಬಹುದು. ಆದರೆ ನಗರ ಪ್ರದೇಶವೇ ನಮಗೆ ಸವಾಲಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾ ಹಕಾಧಿಕಾರಿ ಕೆ.ಜ್ಯೋತಿ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ಹಿಂದಿನ 16 ಸಾರ್ವತ್ರಿಕ ಲೋಕಸಭಾ ಚುನಾವಣೆ ಯಲ್ಲಿ ಶೇ.69.74 ಮತದಾನವಾಗಿರು ವುದೇ ಇದುವರೆಗಿನ ದಾಖಲೆಯಾಗಿದೆ. ಇದನ್ನು ಚುನಾವಣಾ ಆಯೋಗ ಅಂಕಿ-ಅಂಶಗಳು ದೃಢಪಡಿಸುತ್ತವೆ. 1989ರ ಚುನಾ ವಣೆಯಲ್ಲಿ ಏಳು ಆಭ್ಯರ್ಥಿಗಳು ಕಣದಲ್ಲಿ ದ್ದರು. 10.52 ಲಕ್ಷ ಮತದಾರರಲ್ಲಿ 7.33 ಲಕ್ಷ ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದರು. ಆಗ ಜನರು ತಂಡೋಪತಂಡವಾಗಿ ಮತ ಗಟ್ಟೆಗೆ ಬಂದು ಮತ ಚಲಾಯಿಸಿದರು. ಆ ಚುನಾವಣೆ ಹೊರತುಪಡಿಸಿ ಉಳಿದೆಲ್ಲಾ ಲೋಕಸಭಾ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ವಿಧಾನಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳಿಗೆ ನಡೆ ಯುವ ಚುನಾವಣೆಯನ್ನು ಹೋಲಿಸಿದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಅಷ್ಟಕ್ಕಷ್ಟೆ ಎಂದು ಅಂಕಿ ಅಂಶಗಳು ಸಾಕ್ಷಿಯಾಗಿವೆ ಎಂದರು.

1952ರಲ್ಲಿ ನಡೆದ ಚುನಾವಣೆಯಲ್ಲಿ ಅತೀ ಕಡಿಮೆ ಪ್ರಮಾಣ ಶೇ.48.91 ಮತದಾನ ವಾಗಿತ್ತು. ಕ್ಷೇತ್ರ ಪುನರ್ ವಿಂಗಡಣೆಯಾದ ಬಳಿಕ 2009ರಲ್ಲಿ ನಡೆದ ಚುನಾವಣೆಯಲ್ಲಿ 58.88 ಮತದಾನ ನಡೆದಿತ್ತು. ಆಗ ಹೆಚ್.ಡಿ. ಕೋಟೆ, ಕೆ.ಆರ್.ನಗರ ಬದಲು ಕೊಡಗು ಜಿಲ್ಲೆಯ ವಿರಾಜಪೇಟೆ, ಮಡಿಕೇರಿ ಕ್ಷೇತ್ರ ಗಳು ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ್ದವು. ಆದರೆ 2014ರ ಚುನಾವಣೆಯಲ್ಲಿ ಶೇ.67.30 ಮತದಾನ ಪ್ರಮಾಣ ಸ್ವೀಪ್ ಸಮಿತಿ ಪ್ರಯತ್ನದಿಂದ ಏರಿಕೆ ಕಂಡಿತ್ತು ಎಂದು ತಿಳಿಸಿದರು.

Translate »