ಜೆಎಸ್‍ಎಸ್ ಮೆಡಿಕಲ್ ಕಾಲೇಜಿನಲ್ಲಿ  ಮತದಾನ ಜಾಗೃತಿ ಕಾರ್ಯಕ್ರಮ
ಮೈಸೂರು

ಜೆಎಸ್‍ಎಸ್ ಮೆಡಿಕಲ್ ಕಾಲೇಜಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

April 5, 2019

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಬನ್ನಿಮಂಟಪ ದಲ್ಲಿರುವ ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಆವರಣದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ನೂರಾರು ವಿದ್ಯಾರ್ಥಿಗಳು ಮಾನವ ಸರ ಪಳಿ ನಿರ್ಮಿಸಿ ಮತದಾನದ ಮಹತ್ವ ಸಾರಿ ದರು. ಇದೇ ವೇಳೆ ನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಬಳಿಕ ಮಾತ ನಾಡಿದ ಅವರು, ಸಧೃಡ ಪ್ರಜಾಪ್ರಭುತ್ವಕ್ಕಾಗಿ ಎಲ್ಲರೂ ಮತದಾನ ಮಾಡಬೇಕು. ಮತ ದಾನ ಪ್ರತಿಯೊಬ್ಬರ ಹಕ್ಕು. ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದು. ಉನ್ನತ ಶಿಕ್ಷಣಕ್ಕೆ ಬೇಕಾದ ಎಲ್ಲಾ ರೀತಿ ಮೂಲ ಸೌಕರ್ಯ ಪಡೆಯಲು ಹಾಗೂ ದೇಶವು ಅಭಿವೃದ್ಧಿಯತ್ತ ಸಾಗ ಬೇಕಾದರೆ ಉತ್ತಮ ರಾಜಕಾರಣ ಅವಶ್ಯಕ. ದೇಶದ ಪ್ರಜೆಗಳಾದ ನಾವು ಉತ್ತಮ ನಾಯ ಕರನ್ನು ಆರಿಸುವುದು ನಮ್ಮೆಲ್ಲರ ಜವಬ್ದಾರಿ ಯಾಗಿದೆ. ಈ ನಿಟ್ಟಿನಲ್ಲಿ ನಗರ ಪಾಲಿಕೆಯು ನಾನಾ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ಎಲ್ಲರೂ ತಪ್ಪದೆ ಮತದಾನಮಾಡ ಬೇಕು. ದೇಶದ ಅಭಿವೃದ್ಧಿಗಾಗಿ ಎಂತಹ ವ್ಯಕ್ತಿಯನ್ನು ಆರಿಸಬೇಕು ಎಂಬುದು ಮುಖ್ಯ ವಾಗಿರುತ್ತದೆ. ಸಮಾಜಕ್ಕೆ ನೀಡಿದ ಸೇವೆ, ಪಡೆದಿರುವ ಶಿಕ್ಷಣ ಹಾಗೂ ಅಭ್ಯರ್ಥಿಯ ಕಾರ್ಯವೈಖರಿಯನ್ನು ಗಮನಿಸಿ ಮತ ದಾನ ಮಾಡಬೇಕು ಎಂದು ತಿಳಿಸಿದರು.

ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರ್ ಮಠ ಮಾತನಾಡಿ, ಪ್ರತಿ ಯೊಬ್ಬ ನಾಗರಿಕನು ಮತದಾನ ಮಾಡು ವುದು ಸಂವಿಧಾನ ಬದ್ಧ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಸಮಾ ಜಕ್ಕೆ ಮತದಾನ ಅರಿವು ಮೂಡಿಸುವ ಅಗತ್ಯವಾಗಿದೆ. ಎಲ್ಲರೂ ಮತದಾನ ಮಾಡುವ ಮೂಲಕ ದೇಶ ಅಭಿವೃದ್ಧಿಗೆ ಕೈ ಜೋಡಿಸ ಬೇಕು ಎಂದರು. ನಗರಪಾಲಿಕೆ ಸಹಾಯಕ ಆಯುಕ್ತ ಶಿವಾನಂದ ಮೂರ್ತಿ, ಡಿಡಿ ಎಲ್‍ಆರ್ ರಮ್ಯ, ವಲಯ ಅಧಿಕಾರಿ ಪ್ರಿಯ ದರ್ಶಿನಿ, ಅಭಿವೃದ್ಧಿ ಅಧಿಕಾರಿ ನಳಿನಿ, ಪಾಲಿಕೆ ಅಧಿಕಾರಿ ಸುಮಾ ಕುಮಾರಿ, ಕಾಲೇಜು ಪ್ರಾಂಶುಪಾಲ ಡಾ.ಬಸವನಗೌಡಪ್ಪ, ಅಕಾ ಡೆಮಿ ನಿರ್ದೇಶಕ ಡಾ.ಕುಶಾಲಪ್ಪ, ಸತೀಶ್ ಚಂದ್ರ, ಪುಟ್ಟರಾಜು, ಡಾ.ಪ್ರಮೋದ್, ಡಾ.ರವೀಶ್, ಡಾ.ರವೀಂದ್ರ ಮತ್ತಿತರರು ಭಾಗಹಿಸಿದ್ದರು.

Translate »