ಮೈಸೂರು: ಸಂವಿಧಾನ ಬದ ಲಾವಣೆ ಕನಸಿನ ಮಾತು. ಬಿಜೆಪಿಯಲ್ಲಿ ಈ ರೀತಿಯ ಹುಚ್ಚಾಟದ ಚಿಂತನೆ ಇಲ್ಲ ಎಂದು ಮಾಜಿ ಕಾನೂನು ಸಚಿವ, ಶಾಸಕ ಸುರೇಶ್ ಕುಮಾರ್ ಹೇಳಿದರು.
ಮೈಸೂರಿನ ರಾಜೇಂದ್ರ ಕಲಾ ಮಂದಿರದಲ್ಲಿ ಲಾಯರ್ಸ್ ಪ್ಹೋರಂ ಕರ್ನಾಟಕದ ವತಿಯಿಂದ ಗುರುವಾರ ಆಯೋಜಿ ಸಿದ್ದ ವಕೀಲರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ರಾಜಕೀಯದಲ್ಲಿ ಹಿಟ್ ಅಂಡ್ ರನ್ ಹೆಚ್ಚಾಗಿದೆ. ಪರಿಣಾಮ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆಂದು ಕಾಂಗ್ರೆಸ್‍ನವರು ಆರೋಪಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ನಿನ್ನೆಯಷ್ಟೇ ಈ ಸುಳ್ಳನ್ನು ಹೇಳಿದ್ದಾರೆ. ಒಂದು ಸುಳ್ಳನ್ನು ನೂರು ಬಾರಿ ಹೇಳುವುದು ಕಾಂಗ್ರೆಸ್ ಜನ್ಮಸಿದ್ಧ ಹಕ್ಕಾಗಿದೆ. ಒಳ್ಳೆಯದನ್ನು ಕೇಳುವುದಿಲ್ಲ, ಮಾತನಾಡುವುದಿಲ್ಲ, ನೋಡುವುದಿಲ್ಲ ಎಂಬಂತಾಗಿದೆ. ಹಿರಿಯ ಚೇತನಗಳು ಕಟ್ಟಿದ ಸಂವಿಧಾನವನ್ನು ಬದಲಾಯಿ ಸುವ ಹುಚ್ಚಾಟ ಯಾರಿಗೂ ಇಲ್ಲ. ಸಂವಿಧಾನ ಶ್ರೇಷ್ಟ ಗ್ರಂಥ ಎಂದು ಬಿಜೆಪಿ ನಂಬಿದೆ. ಪ್ರಧಾನಿ ಮೋದಿ ಅವರು ಸಂವಿ ಧಾನ ನನ್ನ ಧರ್ಮಗ್ರಂಥ ಎಂದಿದ್ದಾರೆ. ಸಂವಿಧಾನದ ಪರಿ ಚ್ಛೇದಗಳನ್ನು ಪರಿಣಾಮಕಾರಿಗೊಳಿಸುವ ಆಶಯವಷ್ಟೇ ಬಿಜೆಪಿಯಲ್ಲಿದೆ ಎಂದು ಅವರು ಸ್ಪಷ್ಟನೆ ನೀಡಿದರು.
ಮೋದಿ ಮಾಡಿದ್ದು ಸ್ವಂತಕ್ಕಾಗಿ ಅಲ್ಲ, ದೇಶಕ್ಕಾಗಿ: ಚಾಯ್ ವಾಲಾ ಮೋದಿ ಪ್ರಧಾನಿಯಾದ 2014ರ ಚುನಾವಣೆ ದೇಶಕಂಡ ಕೆಲವೇ ಮಹತ್ವದ ಚುಣಾವಣೆಗಳಲ್ಲಿ ಒಂದು. ಸಂಸತ್ ಭವನ ಪ್ರವೇಶಿಸುವಾಗ ಮೆಟ್ಟಿಲಿಗೆ ಶಿರವನ್ನು ತಾಕಿಸಿ, ನಮಸ್ಕರಿಸಿದರು. ಕೆಲ ರಾಜಕಾರಣಿಗಳಿಗೆ ತಮ್ಮ ಕುಟುಂಬವೇ ಇಡೀ ದೇಶವಿದ್ದಂತೆ. ಆದರೆ ಮೋದಿ ಅವರು ಇಡೀ ದೇಶವೇ ನನ್ನ ಕುಟುಂಬ ಎಂದು ತಿಳಿದಿದ್ದಾರೆ. ದೇಶದ 7 ಕೋಟಿ ಮಹಿಳೆಯರಿಗೆ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದ್ದಾರೆ. ದಿನಕ್ಕೆ 400 ಸಿಗರೇಟ್ ಸೇದುವಷ್ಟು ಹೊಗೆ ಕುಡಿಯುತ್ತಿದ್ದ ಮಹಿಳೆಯರನ್ನು ಅಪಾಯದಿಂದ ಪಾರು ಮಾಡಿದ್ದಾರೆ. 9 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಾಣಕ್ಕೆ ನೆರವಾಗಿದ್ದಾರೆ. 900 ದಿನ ಗಳಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕೊಡಿಸಿ ದ್ದಾರೆ. ಇದಾವುದೂ 2 ಅವಧಿಯ ಯುಪಿಎ ಸರ್ಕಾರ ದಿಂದ ಸಾಧ್ಯವಾಗಲಿಲ್ಲ. ಹಾಗೆಯೇ ಕಾಂಗ್ರೆಸ್ ಆರೋಪ ದಂತೆ ಇದಾವುದನ್ನೂ ಅಂಬಾನಿ, ಅದಾನಿಗಾಗಿ ಅಲ್ಲ ದೇಶದ ಬಡವರಿಗಾಗಿ ಮೋದಿ ಮಾಡಿದ್ದು. ಹಾಗಾಗಿ ಮೋದಿ ಅವರು ಸ್ವಂತಕ್ಕೇನು ಮಾಡುತ್ತಿಲ್ಲ, ದೇಶಕ್ಕಾಗಿ ದುಡಿಯುತ್ತಿ ದ್ದಾರೆ ಎಂಬುದು ಜನರ ಮನಸ್ಸಿನಲ್ಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಪುಲ್ವಾಮಾ ದಾಳಿಯಲ್ಲಿ ಯೋಧರು ಹುತಾತ್ಮರಾದಾಗ ಇಡೀ ದೇಶವೇ ಕಂಬನಿ ಮಿಡಿಯಿತು. ಮೋದಿ ಅವರು ಹೇಳಿದಂತೆ 12 ದಿನದಲ್ಲಿ ಸೈನಿಕರ ಪ್ರತೀಕಾರದಿಂದ ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ದೇಶಭಕ್ತ ಹೇಗೆ ನಡೆದುಕೊಳ್ಳುತ್ತಾನೆ ಎಂಬುದನ್ನು ವೀರಯೋಧ ಅಭಿನಂದನ್ ಶತ್ರುಗಳ ಎದುರೇ ತೋರಿಸಿಕೊಟ್ಟರು. ಆದರೆ ಕಾರ್ಯಾಚರಣೆ ನಡೆಸಿದ್ದಕ್ಕೆ ಸಾಕ್ಷಿ ಕೇಳುತ್ತಿದ್ದಾರೆ. ಮೋದಿ ಅವರ ಸ್ಥಾನದಲ್ಲಿ ಮಮತಾ ಬ್ಯಾನರ್ಜಿ, ರಾಹುಲ್‍ಗಾಂಧಿ ಅವರನ್ನು ಊಹಿಸಿಕೊಳ್ಳಲು ಸಾಧ್ಯವೇ?. ದೇಶದ ಭದ್ರತೆ ಹಾಗೂ ಅಭಿವೃದ್ಧಿಗಾಗಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಭಾವನೆ ಎಲ್ಲರಲ್ಲಿದೆ. ಬೇಡ ಎನ್ನುತ್ತಿರುವುದು ರಾಹುಲ್ ಹಾಗೂ ಪಾಕಿಸ್ತಾನದವರು ಮಾತ್ರ ಎಂದು ಟೀಕಿಸಿದರು.
ಅತೀ ಆತ್ಮವಿಶ್ವಾಸ ಬೇಡ: ಅಟಲ್ ಬಿಹಾರಿ ವಾಜಪೇಯಿ ಅವರು 26 ಪಕ್ಷಗಳ ಸಹಕಾರದಿಂದ ಪ್ರಧಾನಿಯಾಗಿ ಅತ್ಯುತ್ತಮ ಆಡಳಿತ ನಡೆಸಿದರು. ಮುಂದಿನ ಚುನಾವಣೆಯಲ್ಲೂ ವಾಜಪೇಯಿ ಅವರೇ ಪ್ರಧಾನಿ ಎಂಬ ವಾತಾವರಣವಿತ್ತು. ಆದರೆ ಹಾಗಾಗಲಿಲ್ಲ. ಅತೀ ಆತ್ಮವಿಶ್ವಾಸ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡದ ಪರಿಣಾಮವಿದು ಎಂದು ವಾಜಪೇಯಿ ನೊಂದು ನುಡಿದಿ ದ್ದರು. ಆ ತಪ್ಪು ಮತ್ತೆ ಆಗಬಾರದು. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ವಾತಾವರಣವನ್ನು ಮತವನ್ನಾಗಿ ಪರಿವರ್ತಿಸಬೇಕು. ರಕ್ಷಣಾ ಸಚಿವೆ ನಿರ್ಮಲಾ ಸೀತಾ ರಾಮನ್ ಹೇಳಿರುವಂತೆ ಮತ್ತೆ ಮೋದಿ ಪ್ರಧಾನಿಯಾಗದಿದ್ದರೆ ದೇಶ 50 ವರ್ಷ ಹಿಂದಕ್ಕೆ ಹೋಗುತ್ತದೆ. ಜಾಗತಿಕವಾಗಿ 11 ಸ್ಥಾನದಿಂದ 5ನೇ ಸ್ಥಾನಕ್ಕೇರಿರುವ ದೇಶ ಮತ್ತೆ ಕುಸಿಯುತ್ತದೆ. 18ರಿಂದ 35 ವರ್ಷದೊಳಗಿನ ಮತದಾರರಿಗೆ ಮತಯಂತ್ರ ದಲ್ಲಿ ಕಾಣುವುದು ಕಮಲದ ಗುರುತು ಮಾತ್ರ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರತಾಪ ಸಿಂಹ ಗೆಲುವಿನೊಂದಿಗೆ ಮತ್ತೆ ಕಮಲ ಅರಳಿಸುವ ಮೂಲಕ ಮೋದಿ ಅವರ ಶಕ್ತಿ ಹೆಚ್ಚಿಸ ಬೇಕೆಂದು ಸುರೇಶ್‍ಕುಮಾರ್ ಹೇಳಿದರು.
ಸಿಂಹ ಪುನರಾಯ್ಕೆಯಾಗಬೇಕು: ಹಿರಿಯ ವಕೀಲ ಸಿ.ವಿ. ಕೇಶವಮೂರ್ತಿ ಮಾತನಾಡಿ, ಬಿಜೆಪಿ ಸಂವಿಧಾನ ಬದ ಲಾವಣೆ ಹಾಗೂ ಮೀಸಲಾತಿ ರದ್ದು ಮಾಡುತ್ತದೆ ಎಂಬುದು ತಪ್ಪು ಭಾವನೆ. ತಿದ್ದುಪಡಿ ಹಾಗೂ ಬದಲಾವಣೆಗೂ ವ್ಯತ್ಯಾಸವಿದೆ. ಇಂದಿರಾಗಾಂಧಿ ಸೇರಿದಂತೆ ಕಾಂಗ್ರೆಸ್‍ನವರೇ ಹೆಚ್ಚು ಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದಾರೆ. ಎಲ್ಲಾ ವಿಷಯವನ್ನು ಜನ ತಿಳಿದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅನಕ್ಷರತೆ ಇಲ್ಲವೇ ಇಲ್ಲ. ಆದರೆ ಅವರಿಗೆ ಜಾಗೃತಿ ಮೂಡಿ ಸುವ ಜವಾಬ್ದಾರಿ ವಕೀಲರದ್ದು. ಯಾರು ಏನೇ ಪ್ರಶ್ನೆ ಮಾಡಿದರೂ ಸಂಯಮದಿಂದ ಉತ್ತರಿಸಬೇಕು. ದೇಶದ ಹಿತಕ್ಕಾಗಿ ಪ್ರಧಾನಿ ಮೋದಿ ಅವರು 5 ವರ್ಷ ನಿರಂತರವಾಗಿ ದುಡಿದಿದ್ದಾರೆ. ಈ ಯೋಧ ಮತ್ತೆ ಪ್ರಧಾನಿಯಾಗಬೇಕು. ಮೈಸೂರು-ಕೊಡಗು ಕ್ಷೇತ್ರದಿಂದ ಪ್ರತಾಪ ಸಿಂಹ ಅವರನ್ನು ಪುನರಾಯ್ಕೆ ಮಾಡಬೇಕೆಂದು ಆಶಯ ವ್ಯಕ್ತಪಡಿಸಿದರು.
ರಾಷ್ಟ್ರ ಭದ್ರತೆಗೆ ಮೋದಿ: ಮತ್ತೋರ್ವ ಹಿರಿಯ ವಕೀಲ ರಾದ ಓ.ಶಾಮಭಟ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ ನನ್ನ ಆತ್ಮೀಯ ಸ್ನೇಹಿತರು. ಆದರೆ ರಾಷ್ಟ್ರ ನಿಷ್ಠೆ ಹಾಗೂ ಭದ್ರತೆ ಮುಖ್ಯ. ಛಾವಣಿಯಲ್ಲಿದ್ದ ಇಲಿ, ನೆಲ ದಲ್ಲಿದ್ದ ಹಾವು ಕಂಡು ಹೆದರಿ ಕೆಳಕ್ಕೆ ಬಿದ್ದು ಆಹಾರವಾದಂತೆ ಭಾರತೀಯರ ಸ್ಥಿತಿಯಾಗಿತ್ತು. ಆದರೆ ಮೋದಿ ಅವರು ಪ್ರಧಾನಿ ಯಾದ ನಂತರ ದೇಶ ಬದಲಾವಣೆ ಕಂಡಿದೆ. ಮೈಸೂರು-ಕೊಡಗು ಕ್ಷೇತ್ರ ತುಂಬಾ ಸೂಕ್ಷ್ಮವಾಗಿದ್ದು, ಕೊಡಗಿನಲ್ಲಿ ಕೇರಳದ ಮುಸ್ಲಿಮರು, ಕ್ರಿಶ್ಚಿಯನ್ ಮಿಷನರಿಗಳ ಚಟುವಟಿಕೆ ಹೆಚ್ಚಾಗಿದೆ. ಕಾಂಗ್ರೆಸ್ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ದೇಶದ ಹಿತಕ್ಕಾಗಿ ಮೋದಿ ಅವರು ಪ್ರಧಾನಿಯಾಗಬೇಕಾದ ಅನಿ ವಾರ್ಯತೆಯಿದೆ ಎಂದು ಅಭಿಪ್ರಾಯಿಸಿದರು.
ಕರ್ನಾಟಕ ವಕೀಲರ ಪರಿಷತ್ ಸದಸ್ಯ ಬಿ.ಆರ್. ಚಂದ್ರಮೌಳಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟ ದಾರ್ಯ, ಮೈಸೂರು ವಕೀಲರ ಸಂಘಧ ಅಧ್ಯಕ್ಷ ಆನಂದ ಕುಮಾರ್, ಹಿರಿಯ ವಕೀಲ ಪಿ.ಡಿ.ಮೇದಪ್ಪ ಮತ್ತಿತರರು ಉಪಸ್ಥಿತರಿದ್ದರು.
ವಕೀಲರೊಂದಿಗೆ ಸುರೇಶ್‍ಕುಮಾರ್ ಸಂವಾದ
ಶಿವಣ್ಣ: ನಾನು ವರುಣಾ ಕ್ಷೇತ್ರದವನು. ನಾನೀಗಲೂ ಕಾಂಗ್ರೆಸ್‍ನಲ್ಲೇ ಇದ್ದೇನೆ. ಆದರೆ 5 ವರ್ಷದ ಮೋದಿ ಆಡಳಿತ, ಬದಲಾವಣೆ ಕಂಡು ದೇಶದ ಹಿತದೃಷ್ಟಿಯಿಂದ ಈ ಬಾರಿ ಬಿಜೆಪಿಗೆ ಮತ ಹಾಕುತ್ತೇನೆ. ನನ್ನ ಸ್ನೇಹಿತರಿಗೂ ಹೇಳುತ್ತೇನೆ. ಅಟ್ರಾಸಿಟಿ ಕಾನೂನನ್ನು ಸಡಿಲಗೊಳಿಸಿ ದ್ದರಿಂದ ಬಿಜೆಪಿ ಸಂವಿಧಾನ ಬದಲಿಸುತ್ತದೆ ಎಂಬ ಆತಂಕ ನಿರ್ಮಾಣವಾಗಿದೆ. ಈ ಬಗ್ಗೆ ಸ್ಪಷ್ಟನೆ ಕೊಡಿ.
ಸುರೇಶ್‍ಕುಮಾರ್: ಅಟ್ರಾಸಿಟಿ ಕಾನೂನು ಪರಿಷ್ಕರಣೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದು. ಅದನ್ನು ಮೋದಿ ಅವರು ಮಾಡಿದ್ದಲ್ಲ. ಯಾವುದೇ ಕಾರಣಕ್ಕೂ ನೊಂದವರಿಗೆ ಅನ್ಯಾಯವಾಗುವ ಕೆಲಸ ಮಾಡುವುದಿಲ್ಲ.
ಡಾ.ಎಂ.ಎನ್.ರವಿಶಂಕರ್: ನಿಮ್ಮಂತ ಸರಳ, ಸಜ್ಜನ ರಾಜಕಾರಣಿಗಳನ್ನು ಬೆಳೆಸಬೇಕು. ತಿಲಕ ಹಾಕಿಕೊಂಡವ ರನ್ನು ಅವರು ಜರಿಯುವಂತೆ ಟೋಪಿ ಹಾಕಿದವರನ್ನೆಲ್ಲಾ ಅನುಮಾನದಿಂದ ನೋಡುವ ಮನೋಧೋರಣೆ ಬಿಜೆಪಿಯಲ್ಲೂ ಬದಲಾಗಬೇಕು. ಈ ನಿಟ್ಟಿನಲ್ಲಿ ಯಾವ ಕ್ರಮ ನಿರೀಕ್ಷಿಸಬಹುದು.
ಸುರೇಶ್‍ಕುಮಾರ್: ಯಾರೋ ಎಲ್ಲೋ ತಲೆಕೆಟ್ಟು ಮಾತನಾಡಿದ್ದನ್ನು ಪದೇ ಪದೆ ಪ್ರಸಾರ ಮಾಡಿ, ಬಿಜೆಪಿಯವರೆಲ್ಲಾ ಹೀಗೆಯೇ ಎಂದು ಬಿಂಬಿಸಲಾಗುತ್ತಿದೆ. ಬಿಜೆಪಿ ಬಿಟ್ಟು ಬನ್ನಿ ಎಂದು ನಾಯಕರೊಬ್ಬರು ಕರೆದಾಗ ನಾನು ಬಿಜೆಪಿ ಸೇರಿಲ್ಲ, ಹುಟ್ಟಿರುವುದೇ ಬಿಜೆಪಿಯಲ್ಲಿ ಎಂದು ಹೇಳಿದ್ದೆ. ಹಾಗಾಗಿ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಬಾರದು. ಮೈಕ್ ಹಾಗೂ ಕ್ಯಾಮರಾ ಇಲ್ಲದಿದ್ದರೆ ಎಲ್ಲವೂ ಚೆನ್ನಾಗಿರುತ್ತಿತ್ತು ಎನ್ನಿಸುತ್ತದೆ. ಇದು ಮುಂದುವರೆಯದಂತೆ ಖಂಡಿತ ಬಿಜೆಪಿ ಕ್ರಮ ಕೈಗೊಳ್ಳುತ್ತದೆ.
ಶ್ರೀನಿವಾಸಮೂರ್ತಿ: ಮೋದಿ ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕಲಿಲ್ಲ. ಬ್ಯಾಂಕ್‍ನಲ್ಲಿ ಹಿರಿಯರ ಠೇವಣಿ ಮೇಲಿನ ಬಡ್ಡಿ ಕಡಿಮೆ ಮಾಡಿದ್ದಾರೆ. ಉದ್ಯೋಗ ಸೃಷ್ಟಿ ಮಾಡಲಿಲ್ಲ. ಎಲ್.ಕೆ.ಅದ್ವಾನಿ, ಮುರುಳಿ ಮನೋಹರ್ ಜೋಷಿ ಅವರಂತಹ ಹಿರಿಯ ನಾಯಕರನ್ನು ತೆರೆಮರೆಗೆ ಸರಿಸಿದರೆಂಬ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು?.
ಸುರೇಶ್‍ಕುಮಾರ್: ವಿದೇಶದಲ್ಲಿರುವ ನಮ್ಮ ರಾಜ ಕಾರಣಿಗಳ ಕಪ್ಪು ಹಣವನ್ನು ತಂದರೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕಬಹುದು ಎಂದಿದ್ದರೇ ವಿನಃ ಹಣ ಹಾಕುತ್ತೇವೆ ಎಂದು ಹೇಳಿಲ್ಲ. ಕಪ್ಪು ಹಣ ತರುವ ಪ್ರಯತ್ನ ಮುಂದುವರೆದಿದೆ. ಮುದ್ರಾ ಯೋಜನೆ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಂದ ಕೋಟ್ಯಾಂತರ ಯುವಕರು ಸ್ವಾವಲಂಬಿಗಳಾಗಿ, ದುಡಿಯುತ್ತಿದ್ದಾರೆ. ಸದ್ಯ ದೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಮಾತ್ರ ನಿರುದ್ಯೋಗಿಯಾಗಿ ರುವುದು. ಹಿರಿಯರ ಠೇವಣಿ ಮೇಲಿನ ಬಡ್ಡಿದರ ಇನ್ನಿತರ ವ್ಯತ್ಯಾಸಗಳನ್ನು ಸರಿಪಡಿಸಲಾಗುತ್ತದೆ. 91 ವರ್ಷದ ಅದ್ವಾನಿ ಅವರು ಪಕ್ಷದ ಶ್ರದ್ಧಾ ನಾಯಕರು. ಇವರನ್ನೊಳ ಗೊಂಡಂತೆ ಪಕ್ಷದ ಎಲ್ಲಾ ಹಿರಿಯ ನಾಯಕರನ್ನು ಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ.
ಮಂಜುನಾಥ್: ನೆರೆ ರಾಜ್ಯದ ಸಂಸದರಲ್ಲಿರುವ ಹೋರಾಟದ ಕಿಚ್ಚು ನಮ್ಮ ಸಂಸದರಿಗಿಲ್ಲ. ಮಹದಾಯಿ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಯಾವುದೇ ಆಶ್ವಾಸನೆ ನೀಡಿಲ್ಲವೇಕೆ?.
ಸುರೇಶ್‍ಕುಮಾರ್: ಮಹದಾಯಿ ಯೋಜನೆ ಬಗ್ಗೆ ಮೋದಿ ಅವರು ಗೋವಾದ ಸಿಎಂ ಅವರನ್ನು ಒಪ್ಪಿಸಿ, ವೇದಿಕೆ ಸಿದ್ದಪಡಿಸಿದ್ದರು. ಆದರೆ ಕಾಂಗ್ರೆಸ್‍ನವರು ಆ ಪ್ರಯತ್ನ ಸೋಲಿಸಲು ಹವಣಿಸಿದ್ದರು. ಮೋದಿ ಅವರು ಬೇರೆ ರಾಜಕಾರಣಿಗಳಂತೆ ಮಾಧ್ಯಮಗಳಿಗೆ ಬೈಟ್ ನೀಡಲ್ಲ. ಮಹದಾಯಿ ವಿಚಾರ ಇತ್ಯರ್ಥವಾಗುತ್ತದೆ.