ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ವಂಚನೆ ಬಗ್ಗೆ ಎಚ್ಚರ ಮೈಸೂರು ನಗರ ಪೊಲೀಸ್ ಕಮೀಷ್ನರ್ ಪ್ರಕಟಣೆ
ಮೈಸೂರು

ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ವಂಚನೆ ಬಗ್ಗೆ ಎಚ್ಚರ ಮೈಸೂರು ನಗರ ಪೊಲೀಸ್ ಕಮೀಷ್ನರ್ ಪ್ರಕಟಣೆ

June 17, 2018

ಮೈಸೂರು:  ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿ ಹಣ ಪಡೆದು ವಂಚಿ ಸುವವರ ಬಗ್ಗೆ ಎಚ್ಚರ ದಿಂದಿರುವಂತೆ ಮೈಸೂರು ನಗರ ಪೊಲೀಸ್ ಕಮೀ ಷ್ನರ್ ಡಾ.ಎ. ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಅನಧಿಕೃತ ನೇಮಕಾತಿ ಏಜೆನ್ಸಿಗಳು ಹಾಗೂ ಏಜೆಂಟರು ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ಆಮಿಷ ತೋರಿ ಅಮಾಯಕರಿಂದ ಹಣ ಪಡೆದು ನಂತರ ಉದ್ಯೋಗ ಕೊಡಿಸದೇ ಮೋಸ ಮಾಡುತ್ತಿರುವ ಹಲವು ಪ್ರಕರಣ ಗಳು ವರದಿಯಾಗಿವೆ.

ಸಾರ್ವಜನಿಕರು ವಿದೇಶಗಳಲ್ಲಿ ಉದ್ಯೋ ಗಕ್ಕೆ ಅರ್ಜಿ ಸಲ್ಲಿಸುವಾಗ ಕಾನೂನಾತ್ಮಕ ವಲಸೆ ನೀತಿಗಳನ್ನು ಪಾಲಿಸಬೇಕು. ಅಂತ ಹವರು ವಿದೇಶಾಂಗ ಸಚಿವಾಲಯದಲ್ಲಿ ನೋಂದಾಯಿತರಾದ ಏಜೆಂಟರುಗಳ ಮೂಲಕವೇ ಪ್ರಕ್ರಿಯೆ ನಡೆಸಬೇಕು. ವಿದೇಶಕ್ಕೆ ಹೋಗುವ ವೇಳೆ ಯಾವುದೇ ವ್ಯಕ್ತಿ ನೀಡುವ ಯಾವುದೇ ಪ್ಯಾಕೆಟ್, ಪಾರ್ಸಲ್‍ಗಳನ್ನು ತೆಗೆದುಕೊಂಡು ಹೋಗ ಬಾರದೆಂದು ಪೊಲೀಸ್ ಕಮೀಷ್ನರ್ ಎಚ್ಚರಿ ಸಿದ್ದಾರೆ. ವಿದೇಶ ತಲುಪಿದ ಕೂಡಲೇ ಭಾರತದ ರಾಯಭಾರಿ ಕಚೇರಿ ಸಂಪರ್ಕಿಸಿ, ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಈ ಕುರಿತು ಮಾಹಿತಿಗಾಗಿ ವಿದೇಶಾಂಗ ಸಚಿವಾಲಯದ ಟೋಲ್ ಫ್ರೀ ಸಂಖ್ಯೆ 1800113090 ಸಂಪರ್ಕಿಸುವಂತೆ ಡಾ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ.

Translate »