ಕುವೆಂಪು ಕಲಾ ಕೇಂದ್ರ ಸ್ಥಾಪನೆಯಾಗಲಿ
ಮೈಸೂರು

ಕುವೆಂಪು ಕಲಾ ಕೇಂದ್ರ ಸ್ಥಾಪನೆಯಾಗಲಿ

December 30, 2018

ಮೈಸೂರು ನಗರ ಪಾಲಿಕೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಶ್ವಮಾನವ ಉದ್ಯಾನದಲ್ಲಿ ಕುವೆಂಪು ಅವರು 115ನೇ ಜನ್ಮ ದಿನ ಆಚರಿಸಲಾಯಿತು. ಇದೇ ವೇಳೆ ನಿವೃತ್ತ ಪ್ರಾಧ್ಯಾಪಕ ಪೆÇ್ರ.ಮೊರಬದ ಮಲ್ಲಿ ಕಾರ್ಜುನ ಮಾತನಾಡಿ, ಕುವೆಂಪು ಅವರು ತಮ್ಮ ಸಾಹಿತ್ಯ ದಲ್ಲಿ `ವಿಶ್ವ ಮಾನವ’ ತತ್ವವನ್ನು ಪ್ರತಿಪಾದಿ ಸಿದ್ದಾರೆ. ಅವರ `ಶ್ರೀ ರಾಮಾಯಣ ದರ್ಶನಂ’ ಕಾವ್ಯ ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿ ಅರ್ಧ ಶತಮಾನ ಕಳೆದಿದೆ. ರವೀಂದ್ರನಾಥ್ ಟ್ಯಾಗೋರ್ ಅವರ ಕರ್ಮಭೂಮಿ ಪಶ್ಚಿಮ ಬಂಗಾಳದಲ್ಲಿ ಅವರ ಕಲಾ ಕೇಂದ್ರ ಸ್ಥಾಪಿಸಿ, ಅವರ ಕೃತಿ ಮತ್ತು ಸಾಧನೆಯ ಕುರಿತಾದ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸಲಾಗಿದೆ. ಅದೇ ಮಾದರಿಯಲ್ಲಿ ಮೈಸೂರಿನಲ್ಲೊಂದು ಕುವೆಂಪು ಕಲಾ ಕೇಂದ್ರ ಸ್ಥಾಪಿಸಿ, ಕುವೆಂಪು ಮತ್ತು ಅವರ ಸಾಹಿತಿ ಕುರಿತು ಪ್ರತಿನಿತ್ಯ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ವೈಚಾರಿ ಕತೆ ಪ್ರತಿಪಾದಿಸಿದ್ದಾರೆ. ಜಾತೀಯತೆ ವಿರುದ್ಧ ಸಿಡಿದೆದ್ದಿದ್ದಾರೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಕುವೆಂಪು ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಎಲ್. ನಾಗೇಂದ್ರ, ಪಾಲಿಕೆ ಆಯುಕ್ತ ಕೆ.ಎಚ್.ಜಗ ದೀಶ್, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಉಪ ಮೇಯರ್ ಷಫಿ ಅಹಮದ್ ಹಾಗೂ ನಗರ ಪಾಲಿಕೆ ಸದ ಸ್ಯರು ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »