ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರಿಗೆ ಮೈಸೂರಲ್ಲಿ ಗೌರವ ಸಮರ್ಪಣೆ
ಮೈಸೂರು

ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರಿಗೆ ಮೈಸೂರಲ್ಲಿ ಗೌರವ ಸಮರ್ಪಣೆ

December 30, 2018

ಮೈಸೂರು: ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡ ವಾಗಿರು… ಎಂದು ಕನ್ನಡಾಭಿಮಾನ ಮೆರೆದು, ವಿಶ್ವ ಮಾನವ ಸಂದೇಶ ಸಾರಿದ ಮಹಾ ಕವಿ ಕುವೆಂಪು ಅವರ ಜಯಂತಿ ಹಾಗೂ ವಿಶ್ವ ಮಾನವ ದಿನಾ ಚರಣೆಯನ್ನು ಮೈಸೂರು ನಗರದ ವಿವಿಧೆಡೆಗಳಲ್ಲಿ ಶನಿವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ವಿವಿಧ ಸಂಘ ಸಂಸ್ಥೆಗಳು, ಶಾಲಾ-ಕಾಲೇಜು ಗಳಲ್ಲಿ ಕುವೆಂಪು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ಅವರ 155ನೇ ಜನ್ಮದಿನ ಹಾಗೂ ವಿಶ್ವ ಮಾನವ ದಿನಾಚರಣೆ ಆಚರಿಸುವ ಮೂಲಕ ರಸಋಷಿಗೆ ಗೌರವ ಸಮರ್ಪಿಸಲಾಯಿತು. ಗನ್‍ಹೌಸ್ ಸಮೀಪದ ವಿಶ್ವ ಮಾನವ ಉದ್ಯಾನದಲ್ಲಿರುವ ಕುವೆಂಪು ಪ್ರತಿಮೆ, ಮಾನಸಗಂಗೋತ್ರಿಯ ಮುಖ್ಯ ದ್ವಾರದಲ್ಲಿರುವ ಕುವೆಂಪು ಪ್ರತಿಮೆಗೆ ನಾನಾ ಸಂಘಟನೆಗಳಿಂದ ಮಾಲಾರ್ಪಣೆ ಮಾಡಲಾಯಿತು. ನುಡಿನಮನ, ಕುವೆಂಪು ಸ್ಮರಣೆಯ ಪ್ರಶಸ್ತಿ ಪ್ರದಾನ, ಸಾಹಿತ್ಯದ ಮನನ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ನಗರ ದಾದ್ಯಂತ ಕುವೆಂಪು ಜನ್ಮದಿನ ಆಚರಿಸಲ್ಪಟ್ಟಿತು.

ಮೈಸೂರು ಕನ್ನಡ ವೇದಿಕೆ: ಸ್ವಾತಂತ್ರ್ಯ ಹೋರಾಟ ಗಾರರ ಉದ್ಯಾನವನದಲ್ಲಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಕುವೆಂಪು ಜನ್ಮ ದಿನ ಆಚರಿಸ ಲಾಯಿತು. ಹೆಚ್.ಡಿ.ಕೋಟೆಯ ಎನ್.ಬೇಗೂರಿನ ಸರ್ಕಾರಿ ಶಾಲೆಯ ಹಾಡಿ ಮಕ್ಕಳು ಕುವೆಂಪು ರಚನೆಯ ಗೀತೆಗಳನ್ನು ಸಾದರಪಡಿಸಿದ್ದು ವಿಶೇಷವೆನಿಸಿತು. ಕುವೆಂಪು ಭಾವಚಿತ್ರಕ್ಕೆ ಸಾಹಿತಿ ಡಾ.ಎನ್.ಮುನಿ ವೆಂಕಟಪ್ಪ ಪುಷ್ರ್ಪಾಚನೆ ಮಾಡಿದರು. ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಲೇಖಕ ಬನ್ನೂರು ಕೆ.ರಾಜು, ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ವೇದಿಕೆ ಕಾರ್ಯಕರ್ತರಾದ ನಾಲಾಬೀದಿ ರವಿ, ಗೋಪಿ, ಪ್ಯಾಲೇಸ್ ಬಾಬು ಮತ್ತಿತರರು ಹಾಜರಿದ್ದರು.

ಬಿಜೆಪಿ ಮೈಸೂರು ಜಿಲ್ಲೆ ಮತ್ತು ನಗರ ಘಟಕ: ಬಿಜೆಪಿ ವತಿಯಿಂದ ಕುವೆಂಪು ಜನ್ಮ ದಿನಾಚರಣೆ ಮತ್ತು ನೈಸರ್ಗಿಕ ಕೃಷಿಕರು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ನಜರ್‍ಬಾದಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ನೈಸರ್ಗಿಕ ಕೃಷಿಕರಾದ ಅಮೋಘ, ರಾಮ ಚಂದ್ರ ಭಟ್ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಪ್ರಸನ್ನ ಎನ್.ಗೌಡ ಮಾತ ನಾಡಿ, ಕುವೆಂಪು ತಮ್ಮ ಧನ್ವಂತರಿ ಕೃತಿಯಲ್ಲಿ ರೈತರ ಸಮಸ್ಯೆಗಳನ್ನು ತೆರೆದಿಟ್ಟಿದ್ದಾರೆ. ಅವರ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕೆಂದು ಅದರಲ್ಲಿ ಹೇಳಿದ್ದಾರೆ. ಆದರೆ ಅದರ ಮಹತ್ವ ಯಾರಿಗೂ ತಿಳಿಯುತ್ತಿಲ್ಲ ಎಂದು ವಿಷಾದಿಸಿದರು. ಮಾಜಿ ಸಚಿವ ಹಾಗೂ ಬಿಜೆಪಿ ಜಿಲ್ಲಾ ಧ್ಯಕ್ಷ ಎಂ.ಶಿವಣ್ಣ, ನಗರಾಧ್ಯಕ್ಷ ಡಾ.ಬಿ.ಹೆಚ್. ಮಂಜುನಾಥ್ ಮತ್ತಿತರರು ಹಾಜರಿದ್ದರು.

ಸರ್ವರಿಗೂ ಆದರ್ಶ: ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನ ವತಿಯಿಂದ ಡಿ.ಬನುಮಯ್ಯ ಬಾಲಕರ ಪ್ರೌಢಶಾಲೆಯಲ್ಲಿ ವಿಶ್ವಮಾನವ ದಿನಾ ಚರಣೆ ಆಚರಿಸಲಾಯಿತು. ಉದ್ಘಾಟನೆ ನೆರವೇರಿ ಸಿದ ಲೇಖಕ ಬನ್ನೂರು ಕೆ. ರಾಜು ಮಾತನಾಡಿ, ಕುವೆಂಪು ಜಗತ್ತಿಗೆ ವಿಶ್ವ ಮಾನವ ತತ್ವ ಸಾರುವ ಮೂಲಕ ವಿಶ್ವ ಮಾನವ ಪ್ರಜ್ಞೆ ಮೂಡಿಸುತ್ತಾರೆ. ಸಾವಿರ ವರ್ಷಗಳ ಹಿಂದೆ ಆದಿಕವಿ ಪಂಪ `ಮನುಷ್ಯ ಜಾತಿ ತಾನೊಂದು ವಲಂ’ ಎಂದು ಹೇಳಿದ್ದ. ಇದರ ತಳಹದಿಯಲ್ಲೇ 20ನೇ ಶತ ಮಾನದಲ್ಲಿ ಕುವೆಂಪು ವಿಶ್ವ ಮಾನವ ಸಂದೇಶ ಸಾರಿದ್ದಾರೆ. ಇವರ ತತ್ವಾದರ್ಶ ಮೈಗೊಡಿಸಿಕೊಂಡರೆ ಸಮಾಜದಲ್ಲಿ ಸಾಮರಸ್ಯ ನೆಲಸಲಿದೆ ಎಂದು ತಿಳಿಸಿದರು. ಚಿಂತಕ ಬಸವರಾಜು, ಮುಖ್ಯ ಶಿಕ್ಷಕರಾದ ಜಿ.ಎಸ್.ಕೃಪಾಶಂಕರ್ ಹಾಜರಿದ್ದರು.

ಮೈಸೂರು ವಿವಿ ನೌಕರರ ವೇದಿಕೆ: ವಿಶ್ವ ಮಾನವ ಮೈಸೂರು ವಿವಿ ನೌಕರರ ವೇದಿಕೆ ವತಿಯಿಂದ ಕುವೆಂಪು ಜನ್ಮದಿನ ಆಚರಿಸಲಾಯಿತು. ಮಾನಸ ಗಂಗೋತ್ರಿಯ ದ್ವಾರದಲ್ಲಿರುವ ಕುವೆಂಪು ಪ್ರತಿಮೆಗೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾಲಾರ್ಪಣೆ ಮಾಡಿದರು. ಮೈಸೂರು ವಿವಿ ಆಡಳಿತಾಂಗ ಕುಲಸಚಿವ ಪ್ರೊ.ಆರ್. ರಾಜಣ್ಣ, ಮಾಜಿ ಮೇಯರ್ ಆರ್.ಲಿಂಗಪ್ಪ, ಮೈಸೂರು ವಿವಿ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ, ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಪ್ರೊ.ಸಿ.ಪಿ.ಸುನಿತಾ, ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮತ್ತಿತರರು ಹಾಜರಿದ್ದರು.

ಬಿಎಸ್‍ಪಿ: ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ವತಿಯಿಂದ ಕುವೆಂಪು ಜಯಂತಿ ಆಚರಿಸ ಲಾಯಿತು. ಮೈಸೂರಿನ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಕುವೆಂಪು ಪ್ರತಿಮೆಗೆ ಪಕ್ಷದ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿದರು. ಪಕ್ಷದ ನಗರಾಧ್ಯಕ್ಷ ಡಾ.ಎಂ.ಬಸವರಾಜು ಮಾತ ನಾಡಿ, ಕುವೆಂಪು ಕನ್ನಡ ಸಾಹಿತ್ಯ ಲೋಕದ ದಿಗ್ಗಜರು. ಕುವೆಂಪು ಅವರ ಸಮಾಜಮುಖಿ ತತ್ವಗಳನ್ನು ಯುವ ಸಮುದಾಯ ಅಳವಡಿಸಿಕೊಳ್ಳಬೇಕು ಎಂದರು. ಬಿಎಸ್‍ಪಿ ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಾಪ್, ಪದಾಧಿ ಕಾರಿಗಳಾದ ದಿನಕರ್, ಸೋನಿ, ರಾಘು, ಮಂಜು ನಾಥ್ ಮತ್ತಿತರರು ಹಾಜರಿದ್ದರು.

Translate »