ಮೈಸೂರು ಸೇರಿ ರಾಜ್ಯದಲ್ಲಿ 50 ಜೈನ ಧಾರ್ಮಿಕ ಪಾಠಶಾಲೆ ಸ್ಥಾಪನೆ
ಮೈಸೂರು

ಮೈಸೂರು ಸೇರಿ ರಾಜ್ಯದಲ್ಲಿ 50 ಜೈನ ಧಾರ್ಮಿಕ ಪಾಠಶಾಲೆ ಸ್ಥಾಪನೆ

December 13, 2019

ಮೈಸೂರು, ಡಿ.12(ಪಿಎಂ)- ಜೈನ ಧರ್ಮದ ಶಿಕ್ಷಣ ನೀಡುವ ಉದ್ದೇಶ ದಿಂದ ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ 50 ಧಾರ್ಮಿಕ ಪಾಠಶಾಲೆ ಗಳನ್ನು ತೆರೆಯಲು ಯೋಜನೆ ರೂಪಿಸಿ ರುವುದಾಗಿ ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಕೋಟೆ ಶ್ರೀಶಾಂತಿನಾಥ ಬಸದಿಯಲ್ಲಿ ಶ್ರೀಗಳ 50ನೇ ವರ್ಷದ ದೀಕ್ಷಾ ಸುವರ್ಣ ಮಹೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯ ಕ್ರಮದಲ್ಲಿ ಗೌರವ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ದೀಕ್ಷಾ ಸ್ವೀಕಾರದ ಸುವರ್ಣ ಮಹೋತ್ಸವದ ನೆನಪಿಗಾಗಿ ರಾಜ್ಯದಲ್ಲಿ 50 ಜೈನ ಧಾರ್ಮಿಕ ಪಾಠ ಶಾಲೆ ಆರಂಭಿಸಲು ಯೋಜನೆ ಸಿದ್ಧ ಪಡಿಸಿದ್ದೇನೆ ಎಂದು ಹೇಳಿದರು.

ಇಂದು ನಾನು ಸ್ವೀಕರಿಸಿದ ಸನ್ಮಾನ ನನ್ನ ದೀಕ್ಷಾ ಗುರುಗಳಾದ ಸ್ವಸ್ತಿಶ್ರೀ ಭಟ್ಟಾಕಲಂಕ ಚಾರುಕೀರ್ತಿ ಸ್ವಾಮೀಜಿಯವರಿಗೆ ಸಲ್ಲಬೇಕು. ಅವರ ಕೃಪಾದೃಷ್ಟಿ ನಮ್ಮನಿಮ್ಮೆಲ್ಲರ ಮೇಲಿದೆ. ಬ್ರಿಟಿಷ್‍ರ ಕಾಲದಲ್ಲಿ ಅಹಿಂಸಾ ಅಭಿಯಾನ ನಡೆಸಿ ಗುರುಗಳು ಪ್ರಸಿದ್ಧಿ ಪಡೆದರು. ಈ ಕಾರಣಕ್ಕೆ ಅವರನ್ನು ಶ್ರವಣಬೆಳಗೊಳದ ಜೈನಮಠದ ಪೀಠಾಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಲಾಯಿತು ಎಂದರು.

ಸ್ವಾಮೀಜಿಗಳಿಗಾಗಿ ಮಠವಲ್ಲ, ಸಮಾಜ ಕ್ಕಾಗಿ ಮಠ ಕೆಲಸ ಮಾಡಬೇಕು. ಧರ್ಮವೇ ಬೇರೆ, ಮೋಕ್ಷವೇ ಬೇರೆ. ಧರ್ಮ ಸಮಾ ಜಕ್ಕೆ ಸಂಬಂಧಿಸಿದರೆ, ಮೋಕ್ಷ ವೈಯಕ್ತಿಕ ವಾದುದು. 10 ವರ್ಷಗಳ ಸತತ ಪ್ರಯತ್ನ ದಿಂದಾಗಿ ಪ್ರಾಕೃತ ಸಾಹಿತ್ಯದಲ್ಲಿರುವ ಜೈನ ಧಾರ್ಮಿಕ ವಿಚಾರಧಾರೆಗಳನ್ನು ಕನ್ನಡಕ್ಕೆ ತರಲು ಶ್ರಮಿಸಿದ್ದೇನೆ. ಇದಕ್ಕೆ ಹಲವರ ಸಹಕಾರವೂ ಇದೆ. ಕೇವಲ ಪಾದಪೂಜೆ ಮಾಡಿಸಿಕೊಂಡು ಕೂರಲು ನನಗೆ ಇಷ್ಟ ವಿಲ್ಲ. ಆಗಬೇಕಿರುವ ಕೆಲಸ ಸಾಕಷ್ಟಿದ್ದು, ಅದನ್ನು ಮಾಡಬೇಕಿದೆ. ಪ್ರಾಕೃತ ಭಾಷೆಯಲ್ಲಿರುವ ಇನ್ನೂ ಅನೇಕ ಗ್ರಂಥಗಳನ್ನು ಕನ್ನಡಕ್ಕೆ ತರಬೇಕಿದೆ. ಹೀಗಾಗಿ ಇನ್ನೂ ಸಮಾಧಾನ ಇಲ್ಲ ಎಂಬ ಭಾವನೆ ನನ್ನಲ್ಲಿದೆ. ಶ್ರವಣ ಬೆಳ ಗೊಳ ಕ್ಷೇತ್ರಕ್ಕೆ ಮೈಸೂರು ಭಾಗದ ಕೊಡುಗೆ ಇದ್ದು, ನಿಮ್ಮ ಸೇವೆಯನ್ನು ಗೌರವಿಸಿ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಕನಕ ಗಿರಿ ಶ್ರೀ ಕ್ಷೇತ್ರ ಜೈನಮಠದ ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ, ಡಿ.12 ಶ್ರವಣ ಬೆಳಗೊಳ ಶ್ರೀಗಳು ದೀಕ್ಷಾ ಸ್ವೀಕರಿಸಿದ ದಿನ. ಅವರು ಒಪ್ಪಿಗೆ ಸೂಚಿಸಿದ್ದರೆ ದೊಡ್ಡ ಸಮಾ ರಂಭ ಮಾಡಲು ಹಲವು ಮಹನೀಯರು ಮುಂದೆ ಬರುತ್ತಿದ್ದರು. ಅದಕ್ಕೆ ಆಪೇಕ್ಷೆ ಪಡದೇ ಇಂದು ನಮಗೆ ದರ್ಶನ ನೀಡಿದ್ದಾರೆ. ಶ್ರವಣಬೆಳಗೊಳ ಶ್ರೀಗಳು ಪ್ರಾಕೃತ ಭಾಷೆಗೆ ಅಪಾರ ಕೆಲಸ ಮಾಡಿದ್ದಾರೆ. ಈ ಭಾಷೆಯಲ್ಲಿ ರುವ ಜ್ಞಾನ ಸಂಪತ್ತನ್ನು ಕನ್ನಡಕ್ಕೆ ಪರಿ ಚಯಿಸಿದ್ದಾರೆ. ಜೈನಮಠಗಳಿಗೆ ಹೊಸ ಬೆಳಕು ನೀಡುತ್ತಿರುವ ಶ್ರೀಗಳು, ಧರ್ಮ ಹಾಗೂ ಸಮಾಜವನ್ನು ಬೆಳಗುತ್ತಿದ್ದಾರೆ ಎಂದು ಬಣ್ಣಿಸಿದರು.

ಇದೇ ವೇಳೆ ಶ್ರವಣಬೆಳಗೊಳ ಶ್ರೀ ಗಳಿಗೆ ಮೈಸೂರಿನ ಶ್ರೀ ದಿಗಂಬರ ಜೈನ ಸಮಾಜದ ವತಿಯಿಂದ ಬೆಳ್ಳಿ ಕಮಂಡಲ ನೀಡಿ ಗೌರವಿಸಲಾಯಿತು. ಇದಕ್ಕೂ ಮುನ್ನ ಕೋಟೆ ಶ್ರೀಶಾಂತಿನಾಥ ಬಸದಿಯ ಎದುರು ಮಾನಸ್ತಂಭ ಸ್ಥಾಪನೆಗೆ ಶ್ರವಣ ಬೆಳಗೊಳ ಶ್ರೀಗಳು ಭೂಮಿಪೂಜೆ ನೆರ ವೇರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್, ಕವಯತ್ರಿ ಲತಾ ರಾಜಶೇಖರ್, ಶ್ರೀ ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್ ಕುಮಾರ್ ಸೇರಿದಂತೆ ಜೈನ ಸಮು ದಾಯದ ನೂರಾರು ಮಂದಿ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »