ಜನಪದ ಸಂಸ್ಕøತಿ ರಕ್ಷಣೆಗೆ ಎಲ್ಲರೂ ಪಣ ತೊಡಬೇಕು
ಮೈಸೂರು

ಜನಪದ ಸಂಸ್ಕøತಿ ರಕ್ಷಣೆಗೆ ಎಲ್ಲರೂ ಪಣ ತೊಡಬೇಕು

August 20, 2019

ಮೈಸೂರು,ಆ.19(ಎಂಟಿವೈ)- ಕ್ರಾಂತಿ ಕಾರಿ ಬಸವಣ್ಣ ಇಂದಿಗೂ ವಚನಗಳ ಮೂಲಕ ಜೀವಂತವಾಗಿರುವ ಹಿನ್ನೆಲೆ ಯಲ್ಲಿ ಜನಪದ ಸಂಸ್ಕøತಿ ರಕ್ಷಿಸುವುದಕ್ಕೆ ಎಲ್ಲರೂ ಪಣ ತೊಡಬೇಕು ಎಂದು ಶರಣತತ್ವ ಚಿಂತಕ ಶಂಕರ ದೇವನೂರು ಸಲಹೆ ನೀಡಿದ್ದಾರೆ.

ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿರುವ ರಾಜೇಂದ್ರ ಭವನದಲ್ಲಿ ಭಾನುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿ¯್ಲÁ ಘಟಕ, ವಿವಿಧ್ ಶೈP್ಷÀಣಿಕ ಮತ್ತು ಸಾಂಸ್ಕøತಿಕ ಟ್ರಸ್ಟ್ ವತಿ ಯಿಂದ ನಡೆದ ಲೇಖಕಿ ಡಾ.ಮುಕ್ತುಂಬಿ ಅವರ “ವಚನಕಾರರ ಸೌಂದರ್ಯ ಮೀಮಾಂಸೆ” ಕೃತಿ ಬಿಡುಗಡೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಬಸ ವಣ್ಣನವರು ಕೊನೆಯುಸಿರು ಎಳೆಯು ವಾಗಲೂ ನನ್ನ ವಚನಗಳನ್ನು ಸಂರಕ್ಷಿಸಿ. ಇದರಿಂದ ನನ್ನ ಜೀವವೇ ಉಳಿದುಕೊಂ ಡಂತಾಗುತ್ತದೆ ಎಂದು ಚನ್ನ ಬಸವಣ್ಣನಿಗೆ ಹೇಳಿದ್ದರು. ಇಂದಿಗೂ ವಚನಗಳಲ್ಲಿ ಬಸ ವಣ್ಣ ಉಳಿದಿz್ದÁರೆ ಎಂದರು.

ಮಹಾಕಾವ್ಯಗಳು ವಿಶ್ವದ ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ರಚನೆಯಾಗಿವೆ. ಕನ್ನಡದಲ್ಲೇ ಮಹಾಕಾವ್ಯಗಳಿವೆ ಎಂದು ಹೆಮ್ಮೆ ಪಡುವ ಅಗತ್ಯವಿಲ್ಲ. ಆದರೆ ವಚನ ಸಾಹಿತ್ಯ ಪರಿಚಯಿಸಿದ ಕೀರ್ತಿ ಕನ್ನಡಕ್ಕೆ ಮಾತ್ರವೇ ಸಲ್ಲುತ್ತದೆ. ಅರಿವನ್ನು ಜಾಗೃತ ಗೊಳಿಸುವುದೇ ಶರಣರ ಮೂಲ ತತ್ವವಾ ಗಿತ್ತು. ಜಗತ್ತಿನ ದಾರ್ಶನಿಕ ಚಿಂತನೆಗಳು, ಮಾನವೀಯ ಮೌಲ್ಯಗಳು 12ನೇ ಶತಮಾನದಲ್ಲಿ ಬೆಳಕಿಗೆ ಬಂದವು. ಅವರ ವಚನಗಳಿಂದ ಶರಣರು, ಜನರು ಸ್ವಾಭಿ ಮಾನದ ಬದುಕನ್ನು ಕಟ್ಟಿಕೊಳ್ಳಲು ಮುಂದಾದರು. ಇದರಿಂದ ನಾವು ನಮ್ಮ ಜನಪದ ಸಂಸ್ಕøತಿಯನ್ನು ರಕ್ಷಿಸುವ ಕೆಲಸ ಮಾಡುವ ಅನಿವಾರ್ಯತೆ ಇದೆ ಎಂದು ತಿಳಿಸಿದ್ದಾರೆ.

ಕೃತಿ ಕುರಿತು ಮೈವಿವಿ ಪ್ರಸಾರಂಗದ ನಿವೃತ್ತ ನಿರ್ದೇಶಕ ಡಾ.ಸಿ.ನಾಗಣ್ಣ, ಜೆಎಸ್‍ಎಸ್ ಮಹಾವಿದ್ಯಾಪೀಠದ ನಿರ್ದೇಶಕ ಪೆÇ್ರ.ಮೊರಬದ ಮಲ್ಲಿಕಾ ರ್ಜುನ ಕೃತಿ ಕುರಿತು ಮಾತನಾಡಿ ದರು. ಹಿರಿಯ ವಿದ್ವಾಂಸ ಅಪ್ಪಾರಾವ್ ಅಕ್ಕೋಣೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾ ಪಕ ಪೆÇ್ರ.ಮಲೆಯೂರು ಗುರುಸ್ವಾಮಿ, ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್, ಶರಣ ಸಾಹಿತ್ಯ ಪರಿಷತ್ ಅಧ್ಯP್ಷÀ ಗೊ.ರು.ಪರಮೇಶ್ವ ರಪ್ಪ, ವಿವಿಧ್ ಶೈP್ಷÀಣಿಕ ಮತ್ತು ಸಾಂಸ್ಕøತಿಕ ಟ್ರಸ್ಟ್ ಅಧ್ಯP್ಷÀ ಡಾ. ಬೆಟ್ಟ ಸ್ವಾಮಿ, ಎಂ.ಚಂದ್ರಶೇಖರ್, ಡಾ. ವಿನೋದಮ್ಮ ಪಾಲ್ಗೊಂಡಿದ್ದರು.

Translate »