ವೈದ್ಯರು, ಸಿಬ್ಬಂದಿಯ ಪ್ರಾಮಾಣಿಕತೆಯಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ಉತ್ತಮ ಹೆಸರು
ಮೈಸೂರು

ವೈದ್ಯರು, ಸಿಬ್ಬಂದಿಯ ಪ್ರಾಮಾಣಿಕತೆಯಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ಉತ್ತಮ ಹೆಸರು

August 20, 2019

ಮೈಸೂರು,ಆ.19(ಎಂಟಿವೈ)- ವೈದ್ಯರು ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ನೇತೃತ್ವದಲ್ಲಿ ಪ್ರಾಮಾಣಿಕ ಸೇವೆ ನೀಡುತ್ತಿರುವುದೇ ಅಂತಾರಾ ಷ್ಟ್ರೀಯ ಮಟ್ಟದಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಉತ್ತಮ ಹೆಸರು ಗಳಿಸಲು ಸಾಧ್ಯ ವಾಗಿದೆ ಎಂದು ಮೈಸೂರು ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾನಂದ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಆವರಣದಲ್ಲಿ ನಡೆದ ಆಸ್ಪತ್ರೆಯ 9ನೇ ಹಾಗೂ ನೂತನ ಕಟ್ಟಡದ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತ ನಾಡಿದ ಅವರು, ಜಯದೇವ ಹೃದ್ರೋಗ ಸಂಸ್ಥೆ ಬೆಳವಣಿಗೆಗೆ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರ ಕೊಡುಗೆ ಅಪಾರ. ಬಡವರ ಮೇಲಿನ ಕಾಳಜಿ ಹಾಗೂ ಮಾನವೀಯತೆಯಿಂದ ಸಂಸ್ಥೆಯು ಹೆಮ್ಮರವಾಗಿ ಬೆಳೆಯುತ್ತಿದೆ ಎಂದರು.

ಮೈಸೂರಿನ ಜಯದೇವ ಆಸ್ಪತ್ರೆ 9 ವರ್ಷಗಳಿಂದ ಬಡ ಹೃದಯರೋಗಿ ಗಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ನೀಡು ತ್ತಿದೆ. ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಸೇರಿದಂತೆ ಸುತ್ತಮುತ್ತಲಿನ ಜನರಿಗೆ ಅನುಕೂಲ ವಾಗಿದೆ. ಮೈಸೂರು ಜಯದೇವ ಆಸ್ಪತ್ರೆ ಯಲ್ಲಿ ಇದುವರೆಗೆ 1,17,428 ಹೊರ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 78,948 ಜನರಿಗೆ ಇ.ಸಿ.ಜಿ. ಮಾಡಲಾಗಿದೆ. 54,135 ಜನರಿಗೆ ಎಕೋ ಪರೀಕ್ಷೆ ಮಾಡ ಲಾಗಿದೆ. 10402 ಜನರಿಗೆ ಟಿ.ಎಂ.ಟಿ. ಮಾಡಲಾಗಿದೆ. 11,874 ಜನರಿಗೆ ಎಕ್ಸ್‍ರೇ ಮಾಡಲಾಗಿದೆ. 9868 ಜನರು ಒಳ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ವಿವರಿಸಿದರು.

ಇದೇ ವೇಳೆ ಡಾ. ಹರ್ಷಬಸಪ್ಪ ಮಾತ ನಾಡಿ, ಮೈಸೂರು ಜಯದೇವ ಆಸ್ಪತ್ರೆ ಯಲ್ಲಿ ಇದುವರೆಗೆ ಕುಂಶಿ ಶ್ರೀಧರ್ ನೇತೃತ್ವದಲ್ಲಿ 210 ಜನರಿಗೆ ತೆರೆದ ಹೃದಯ ಚಿಕಿತ್ಸೆ ಮಾಡಲಾಗಿದೆ. 3582 ಜನರಿಗೆ ಆಂಜಿಯೋಗ್ರಾಂ, 3,301 ಜನರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡ ಲಾಗಿದೆ. ಇಷ್ಟೆಲ್ಲಾ ಸಾಧನೆಗೆ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್‍ರವರಿಂದ ಹಿಡಿದು ಡಿ ಗ್ರೂಪ್ ನೌಕರರವರೆಗೂ ರೋಗಿ ಗಳ ಬಗ್ಗೆ ಇರುವ ಕಾಳಜಿ, ಗೌರವ, ಶ್ರಮವೇ ಕಾರಣವಾಗಿದೆ ಎಂದು ತಿಳಿಸಿದರು.

ಈ ಸಮಾರಂಭದಲ್ಲಿ ವೈದ್ಯರಾದ ಡಾ.ಜಗದೀಶ್, ಡಾ.ಭೂಪಾಲ್, ಡಾ.ಕುಂಶಿ ಶ್ರೀಧರ್, ನಿವೃತ್ತ ಇಂಜಿನಿಯರ್ ನಾಗೇಂದ್ರ, ಡಾ.ಸಂತೋಷ್, ಡಾ.ಪಾಂಡು ರಂಗಯ್ಯ, ಡಾ.ಹೇಮ ರವೀಶ್, ಡಾ.ರಾಜೇಶ್, ಡಾ.ಜಯಪ್ರಕಾಶ್, ಡಾ.ಶ್ವೇತಾ ಸದಾ ನಂದ, ಡಾ.ಚೈತ್ರಾ, ಡಾ. ಶ್ರೀನಿಧಿ, ಡಾ. ಸಚಿನ್, ಡಾ.ಕುಮಾರ್, ನರ್ಸಿಂಗ್ ಅಧೀಕ್ಷಕ ಹರೀಶ್‍ಕುಮಾರ್, ಪಿಆರ್‍ಓ ವಾಣಿಮೋಹನ್, ಚಂಪಕಮಾಲ ಉಪಸ್ಥಿತರಿದ್ದರು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.

Translate »