ಅತಿಯಾದ ಜಂಕ್‍ಫುಡ್ ಸೇವನೆ ಅಪಾಯಕ್ಕೆ ಆಹ್ವಾನ
ಮೈಸೂರು

ಅತಿಯಾದ ಜಂಕ್‍ಫುಡ್ ಸೇವನೆ ಅಪಾಯಕ್ಕೆ ಆಹ್ವಾನ

November 19, 2019

ಮೈಸೂರು, ನ.18(ಎಂಕೆ)- ಅತಿ ಯಾದ ಜಂಕ್‍ಫುಡ್ ಸೇವನೆ ಅಪಾಯಕ್ಕೆ ಆಹ್ವಾನವಾಗಿದ್ದು, ಸೇವಿಸುವ ಆಹಾರದ ಮೇಲೆ ಎಚ್ಚರವಹಿಸಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್. ಸೀತಾಲಕ್ಷ್ಮಿ ಹೇಳಿದರು.

ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರ್ಸ್ ಸಭಾಂಗಣದಲ್ಲಿ ಡಾಕ್ಟರ್ಸ್ ಡೈರಕ್ಟರಿ 4ನೇ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವ್ಯಾಯಾಮಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಬೀಲೈನ್ ಸಂಸ್ಥೆ ಹೊರ ತಂದಿರುವ ಡಾಕ್ಟರ್ಸ್ ಡೈರಕ್ಟರಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಉಪಯುಕ್ತ ಮಾಹಿತಿ ನೀಡಲಾಗಿದೆ ಎಂದರು.

ಇಡಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ. ಉಮೇಶ್ ಮಾತನಾಡಿ, ಇಂದಿನ ಯುವ ಕರು ಅಂತರ್ಜಾಲದಲ್ಲಿ ರೋಗದ ಲಕ್ಷಣ ಗಳ ಬಗ್ಗೆ ಮಾಹಿತಿ ಪಡೆದು ಸ್ವಚಿಕಿತ್ಸೆ ಪಡೆದುಕೊಳ್ಳಲು ಮುಂದಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾ ಗಿದೆ. ಆರೋಗ್ಯದಲ್ಲಿ ಯಾವುದೇ ಬದಲಾ ವಣೆ ಕಂಡರೂ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಅಗತ್ಯ ಸಲಹೆಗಳನ್ನು ಪಡೆದು ಕೊಳ್ಳುವುದು ಸೂಕ್ತ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸೀತಾರಾಮು, ಬೀಲೈನ್ ಸಂಸ್ಥೆಯ ಹರೀಶ್ ಉಪಸ್ಥಿತರಿದ್ದರು.

Translate »