ನವೆಂಬರ್ ಕನ್ನಡಿಗರಾಗದೆ ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ, ನಿತ್ಯೋತ್ಸವವಾಗಲಿ
ಮೈಸೂರು

ನವೆಂಬರ್ ಕನ್ನಡಿಗರಾಗದೆ ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ, ನಿತ್ಯೋತ್ಸವವಾಗಲಿ

November 19, 2019

ಮೈಸೂರು,ನ.18(ಆರ್‍ಕೆಬಿ)-ನಾವು ಕೇವಲ ನವಂಬರ್ ಕನ್ನಡಿಗರಾಗದೆ ವರ್ಷ ಪೂರ್ತಿ ರಾಜ್ಯೋತ್ಸವ, ನಿತ್ಯೋತ್ಸವವಾಗಿ ಆಚರಿಸು ವಂತಾಗಬೇಕು ಎಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಮೈಸೂರಿನ ವಿಜಯನಗರ ಮೊದ ಲನೇ ಹಂತದ ಭಾರತೀಯ ವಿದ್ಯಾಭವನ,  ಭವನ್ಸ್ ಪ್ರಿಯಂವಧಾ ಬಿರ್ಲಾ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭುವ ನೇಶ್ವರಿ ಭಾವಚಿತ್ರಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.

ನಾವೆಲ್ಲರೂ ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ರಾಜ್ಯದ ಲ್ಲಿರುವ ಅನ್ಯ ಭಾಷಿಕರಿಗೂ ಕನ್ನಡ ಭಾಷೆ ಯನ್ನು ಕಲಿಸುವ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಭಾರತೀಯ ವಿದ್ಯಾ ಭವನದ ಮೈಸೂರು ಅಧ್ಯಕ್ಷ ಡಾ.ಎ.ವಿ. ನರಸಿಂಹಮೂರ್ತಿ ಮಾತನಾಡಿ, ಬೆಂಗ ಳೂರಿನಲ್ಲಿ ಬೇರೆ ಭಾಷಿಕರು, ವಲಸೆ ಭಾಷಿ ಕರೇ ಹೆಚ್ಚಾಗುತ್ತಿದ್ದಾರೆ. ಅವರೆಲ್ಲರೂ ಕನ್ನಡ ಕಲಿಯುವಂತಾಗಬೇಕು. ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಪ್ರತಿಯೊಂದು ಭಾಷಾ ಪ್ರಾಂತ್ಯದಲ್ಲೂ ಆಯಾ ಭಾಷೆಗೆ ಮೊದಲ ಪ್ರಾಧಾನ್ಯತೆ ನೀಡಲಾಗುತ್ತದೆ. ಅಂತೆಯೇ ಕರ್ನಾಟಕದಲ್ಲಿ ಕನ್ನಡವೇ ಮೊದಲ ಭಾಷೆ. ಹಾಗಾಗಿ ಎಲ್ಲರೂ ಕನ್ನಡ ಕಲಿಯಬೇಕು. ಇತರರಿಗೂ ಕಲಿಸಬೇಕು.  ಇಂಗ್ಲಿಷ್ ಅನ್ನು ಸಂಪರ್ಕ ಭಾಷೆಯಾಗಿ ಬಳಸಬೇಕು. ಮನಸ್ಸಿನಲ್ಲಿ ಸದಾ ಕನ್ನಡ ವನ್ನೇ ಇಟ್ಟುಕೊಂಡು ಕನ್ನಡಕ್ಕೆ ಪ್ರಧಾನ ಸ್ಥಾನಮಾನ ನೀಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿ ಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹು ಮಾನ ವಿತರಿಸಲಾಯಿತು. ಚರ್ಚಾ ಸ್ಪರ್ಧೆ ಯಲ್ಲಿ ಕೌಸ್ತುಭ ತಂಡ (ಪ್ರಥಮ), ಕೀರ್ತನಾ ತಂಡ (ದ್ವಿತೀಯ), ಪ್ರಬಂಧ ಸ್ಪರ್ಧೆ ಯಲ್ಲಿ ಅಮೋಘ (ಪ್ರ), ಪದಬಂಧ ಸ್ಪರ್ಧೆಯಲ್ಲಿ ಎಂ.ಕೆ.ವಿನಯ್ (ಪ್ರ), ಚಿತ್ರ ಕಲಾ ಸ್ಪರ್ಧೆಯಲ್ಲಿ ಆರ್.ನಂದಿನಿ (ಪ್ರ), ಪೂರ್ವಿಕಾ (ದ್ವಿ), ಆಶುಭಾಷಣ ಸ್ಪರ್ಧೆ ಯಲ್ಲಿ ಜ್ಞಾನೇಶ್ (ಪ್ರ), ಕೌಸ್ತುಭ್ (ದ್ವಿ), ರಂಗೋಲಿ ಸ್ಪರ್ಧೆಯಲ್ಲಿ ಮೋಹಿತ್ ಕೃಷ್ಣ (ಪ್ರ), ಇಂಚರ (ದ್ವಿ), ರಸಪ್ರಶ್ನೆಯಲ್ಲಿ ಜ್ಞಾನೇಶ್ (ಪ್ರ) ಬಹುಮನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾ ಭವನದ ಖಜಾಂಚಿ ಡಾ.ಎ.ಟಿ.ಭಾಷ್ಯಂ, ಕಾರ್ಯದರ್ಶಿ ಪಿ.ಎಸ್.ಗಣಪತಿ ಮತ್ತು ಪ್ರೊ. ಅರ್ಪಿತಾ, ಪ್ರೊ.ಸುಧಾಕರ ಕುಲಕರ್ಣಿ, ಫಿಲೋಮಿನಾ ಗ್ರೇಷಿ ಉಪಸ್ಥಿತರಿದ್ದರು.

 

Translate »