ಜಿಲ್ಲೆಯ ವಿವಿಧೆಡೆ ಅಬಕಾರಿ ಇಲಾಖೆ ದಾಳಿ
ಕೊಡಗು

ಜಿಲ್ಲೆಯ ವಿವಿಧೆಡೆ ಅಬಕಾರಿ ಇಲಾಖೆ ದಾಳಿ

March 27, 2019

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಬಕಾರಿ ಇಲಾಖೆ ದಾಳಿ ನಡೆಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋ ಪದ ಅಡಿಯಲ್ಲಿ ಅಬಕಾರಿ ಕಾಯಿದೆ ಪ್ರಕಾರ ದೂರು ದಾಖಲಿಸಿಕೊಂಡಿದ್ದು, ಓರ್ವ ಆರೋಪಿಯನ್ನು ಬಂಧಿಸಿದೆ.

ಈ ಪೈಕಿ 2 ಘೋರ ಪ್ರಕರಣಗಳೂ ದಾಖಲಾಗಿದೆ. ಮಾತ್ರವಲ್ಲದೇ, ಸಾರ್ವ ಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ 9 ಪ್ರಕರಣ ಗಳು ಮತ್ತು ಮದ್ಯ ಮಾರಾಟ ಮಳಿಗೆ ಗಳ ಮೇಲೆ ಒಟ್ಟು 4 ಸಾಮಾನ್ಯ ಪ್ರಕ ರಣಗಳನ್ನು ದಾಖಲಿಸಲಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಿಂದ 50ಕಿ.ಮೀ. ದೂರದಲ್ಲಿರುವ ಚೆಂಬು ದಬ್ಬಡ್ಕ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಗೇರು ಹಣ್ಣಿನ ಕಳ್ಳಭಟ್ಟಿ ಮದ್ಯ ತಯಾರಿಸುತ್ತಿರುವ ಬಗ್ಗೆ ರಾಜ್ಯ ಚುನಾವಣಾ ಅಧಿಕಾರಿ ಅವರ ಆನ್ ಲೈನ್‍ಗೆ ಸಾರ್ವಜನಿಕ ದೂರು ದಾಖ ಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಅಬಕಾರಿ ಇಲಾಖೆ ಆಯುಕ್ತರ ನಿರ್ದೇಶನದಂತೆ ಮಡಿ ಕೇರಿ ವಿಭಾಗದ ಉಪ ಅಧೀಕ್ಷಕರು, ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂ ದಿಗಳು ಮಾ.25ರಂದು ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ಚೆಂಬು ದಬ್ಬಡ್ಕ ಗ್ರಾಮದ ಡಿ.ಬಿ. ಗೋಪಾಲ ಬಿನ್ ಬೊಳ್ಳಪ್ಪ ಎಂಬುವರ ಮನೆ ಮೇಲೆ ದಾಳಿ ನಡೆಸಿದೆ.

ಈ ಸಂದರ್ಭ ಮನೆಯಲ್ಲಿ ಮತ್ತು ಮನೆಯ ಹಿಂಭಾಗ ಸಂಗ್ರಹಿಸಿಟ್ಟಿದ್ದ 5ಲೀ. ಕಳ್ಳಭಟ್ಟಿ ಸಾರಾಯಿ, 40ಲೀ. ಗೇರು ಹಣ್ಣಿನ ಹುಳಿ ರಸ, 10 ಕೆ.ಜಿ. ಬೆಲ್ಲ ಮತ್ತು ಕಳ್ಳಭಟ್ಟಿ ತಯಾ ರಿಸಲು ಬಳಸುವ ಪರಿಕರವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ವಿರುದ್ಧ ಅಬಕಾರಿ ಕಾಯಿದೆ ಪ್ರಕಾರ ಪ್ರ.ವ.ವ ಸಂ.37\2018\19 ರಂತೆ ಘೋರ ಪ್ರಕರಣ ದಾಖಲಿಸಿ, ಆರೋಪಿ ಯನ್ನು ಬಂಧಿಸಿ, ನ್ಯಾಯಾಲಯದ ವಶಕ್ಕೆ ನೀಡಿದ್ದಾರೆ.

Translate »