ವಿದ್ಯಾರ್ಥಿಗಳು ರಚಿಸಿದ ವಿವಿಧ ಮಾದರಿ ಚಿತ್ರಕಲೆಗಳ ಪ್ರದರ್ಶನ
ಮೈಸೂರು

ವಿದ್ಯಾರ್ಥಿಗಳು ರಚಿಸಿದ ವಿವಿಧ ಮಾದರಿ ಚಿತ್ರಕಲೆಗಳ ಪ್ರದರ್ಶನ

July 9, 2019

ಮೈಸೂರು,ಜು.8(ಆರ್‍ಕೆಬಿ)- ಮೈಸೂ ರಿನ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಆರು ದಿನಗಳ ರೇಖಾಚಿತ್ರ ಕಾರ್ಯಾಗಾರ ಹಾಗೂ ಚಿತ್ರಕಲಾ ಪ್ರದರ್ಶನಕ್ಕೆ ಮೈಸೂರು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂ ಧಕ ಡಾ.ಜಿ.ಉಮೇಶ್ ಸೋಮವಾರ ಚಾಲನೆ ನೀಡಿದರು.

ಶಾಲೆಯ ವಿದ್ಯಾರ್ಥಿಗಳೇ ರಚಿಸಿದ ರೇಖಾಚಿತ್ರ, ಸಮಕಾಲೀನ ಚಿತ್ರಗಳು, ವರ್ಣ ಕಲೆ, ಪ್ರಿಂಟಿಂಗ್ ಮಾದರಿಯ 60ಕ್ಕೂ ಹೆಚ್ಚು ಚಿತ್ರಕಲೆಗಳು ಪ್ರದರ್ಶನ ದಲ್ಲಿದ್ದು, ಆಧುನಿಕ ಮತ್ತು ಹಳ್ಳಿಯ ಜೀವನ ಕ್ರಮಕ್ಕೆ ಕನ್ನಡಿ ಹಿಡಿದಂತಿದೆ.

ಪ್ರಸ್ತುತ ಜಗತ್ತಿನ ಸ್ಥಿರ ಚಿತ್ರಣ, ಜೀವನ ಶೈಲಿ, ಗ್ರಾಮ ಜೀವನ, ಪ್ರಕೃತಿಯ ಚಿತ್ರಣ ಗಳು ಕ್ಯಾನ್ವಾಸ್ ಮೇಲೆ ಮೂಡಿಬಂದಿವೆ. ಜೊತೆಗೆ ಫ್ಯಾಂಟಸಿ ಹೀರೋಗಳ ಚಿತ್ರಗಳು ಆಕರ್ಷಿಸುತ್ತಿವೆ. ಜ.13ರವರೆಗೆ ನಡೆಯುವ ಚಿತ್ರಕಲಾ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಕಾರ್ಯಾಗಾರದ ನಿರ್ದೇಶಕರಾಗಿ ಬೆಂಗಳೂರಿನ ಕಲಾವಿದ ಮಂಜುನಾಥ್ ಹೊನ್ನಾಪುರ ತರಬೇತಿ ನೀಡುತ್ತಿದ್ದಾರೆ. ಪ್ರಾಂಶುಪಾಲ ಶಿವಕುಮಾರ ಕೆಸರಮಡು ಇನ್ನಿತರರು ಈ ಸಂದರ್ಭದಲ್ಲಿ ಇದ್ದರು.

Translate »