ಸಿದ್ದಾಪುರದಲ್ಲಿ ವೈಜ್ಞಾನಿಕ ಮಾದರಿ ವಸ್ತುಗಳ ಪ್ರದರ್ಶನ
ಕೊಡಗು

ಸಿದ್ದಾಪುರದಲ್ಲಿ ವೈಜ್ಞಾನಿಕ ಮಾದರಿ ವಸ್ತುಗಳ ಪ್ರದರ್ಶನ

January 19, 2019

ಸಿದ್ದಾಪುರ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಅಲಂಕಾರಿಕ ಹಾಗೂ ವೈಜ್ಞಾನಿಕ ಮಾದರಿ ವಸ್ತುಗಳನ್ನು ತಯಾರಿಸುವ ಮೂಲಕ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಿ ಸಮಾಜದಲ್ಲಿ ಪ್ರತಿಭಾನ್ವಿತ ರಾಗಿ ಮುಂದೆ ಬರಬೇಕೆಂದು ಎಸ್‍ಎಂಒ ವಿದ್ಯಾರ್ಥಿ ನಿಲಯದ ಮುಖ್ಯ ಶಿಕ್ಷಕ ಅಲವಿ ಮೌಲವಿ ಕರೆ ನೀಡಿದ್ದಾರೆ .

ಸಿದ್ದಾಪುರ ಇಕ್ರಾ ಪಬ್ಲಿಕ್ ಶಾಲಾ ಸಭಾಂ ಗಣದಲ್ಲಿ ಅಲಂಕಾರಿಕ ಹಾಗೂ ವೈಜ್ಞಾನಿಕ ಮಾದರಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳಿಗೆ ಶಾಲೆಗಳು ಹಾಗೂ ಪೋಷಕರು ಸಹಕಾರ ನೀಡಿ ದ್ದಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಮೊಬೈಲ್ ಹಾಗೂ ದುಶ್ಚಟಗಳಿಂದ ದೂರ ವಿದ್ದು ಶಿಕ್ಷಣದೊಂದಿಗೆ ತಮ್ಮ ಪ್ರತಿಭೆಗಳ ಮೂಲಕ ಗುರುತಿಸಿಕೊಳ್ಳುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ದರು. ಇಕ್ರಾ ಶಾಲೆ ಮುಖ್ಯ ಶಿಕ್ಷಕ ಕೆ.ಯು ರಜಾಕ್ ಮಾತನಾಡಿ ಶಾಲೆಯಲ್ಲಿರುವ ವಿದ್ಯಾರ್ಥಿಗಳಿಗೆ ತಮ್ಮದೇ ಆದ ಪ್ರತಿಭೆ ಗಳನ್ನು ತೋರ್ಪಡಿಸಲು ಅಲಂಕಾರಿಕ ಹಾಗೂ ವೈಜ್ಞಾನಿಕ ವಸ್ತು ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿದ್ದು ವಿದ್ಯಾ ರ್ಥಿಗಳು ತಮ್ಮದೇ ಆದ ಪ್ರತಿಭೆಗಳ ಮೂಲಕ ಅತ್ಯುತ್ತಮ ಕಲೆಯೊಂದಿಗೆ ಹಳೆಯ ನಿರುಪಯುಕ್ತ ವಸ್ತುಗಳನ್ನು ಬಳಸಿ ಅಲಂ ಕಾರಿಕ ಹಾಗೂ ವೈಜ್ಞಾನಿಕ ವಸ್ತು ಪ್ರದರ್ಶನ ಮಾಡಿ ಗಮನ ಸೆಳೆದಿದ್ದಾರೆ ಎಂದರು.

ಶಾಲಾ ವಿದ್ಯಾರ್ಥಿನಿ ಅಮೀದಾ ಜೈನಾಬ್ ಮಾತನಾಡಿ, ಮನೆಗಳಿಗೆ ಬೇಕಾದ ಅಲಂ ಕಾರಿಕ ಹಾಗೂ ಆಟೋಟಕ್ಕೆ ಬಳಸುವ ವಸ್ತು ಗಳನ್ನು ದುಬಾರಿ ಹಣ ನೀಡಿ ಖರೀದಿ ಮಾಡುತ್ತಾರೆ. ವಿದ್ಯಾರ್ಥಿಗಳು ತಮ್ಮದೇ ಆದ ಪ್ರತಿಭೆಯ ಕಲೆಯೊಂದಿಗೆ ನಿರು ಪಯುಕ್ತ ವಸ್ತುಗಳಿಂದ ಅಲಂಕಾರಿಕವಾಗಿ ತಯಾರಿಸಿರುವ ವಸ್ತುಗಳನ್ನು ಪೋಷಕರು ಮನೆಯಲ್ಲಿ ಬಳಸಿದ್ದಲ್ಲಿ ಮಕ್ಕಳ ಪ್ರತಿಭೆಗೆ ಸಹಕಾರ ನೀಡಿದಂತಾಗುತ್ತದೆ ಎಂದರು.

ವಿದ್ಯಾರ್ಥಿ ಸನೀಲ್ ಮಾತನಾಡಿ, ಜೆಸಿಬಿ ಯಂತ್ರಗಳನ್ನು ಕಣ್ಣಲ್ಲೇ ನೋಡಿದ್ದೇವೆ. ಅಂತಹ ಯಂತ್ರಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದಕ್ಕೆ ಆಸ್ಪತ್ರೆಯಲ್ಲಿ ಸಿಗುವಂತಹ ಹಳೆ ಪೈಪ್ ಸಿರಂಜ್ ಟ್ಯೂಬ್ ಹಾಗೂ ಕಾರ್ಡ್ ಬೋರ್ಡ್ ಗಳನ್ನು ಬಳಸಿ ಯಂತ್ರ ಚಲನ ರೂಪದಲ್ಲಿ ಮಾಡಿದ್ದೇವೆ. ನಮ್ಮ ಪ್ರತಿಭೆಗಳನ್ನು ಗುರುತಿಸಲು ಇಕ್ರಾ ಶಾಲೆಯ ಶಿಕ್ಷಕರುಗಳು ಸಹಕಾರ ನೀಡಿದ್ದಾರೆ ಎಂದರು. ಶಾಲೆಯ ವಿದ್ಯಾರ್ಥಿಗಳು ತಮ್ಮ ಕೈಗಳಿಂದ ತಯಾರಿ ಸಿದ ಅಲಂಕಾರಿಕ ಹಾಗೂ ವೈಜ್ಞಾನಿಕ ಮಾದರಿ ವಸ್ತುಗಳ ಪ್ರದರ್ಶನದಲ್ಲಿ ಪೋಷ ಕರು ಹಾಗೂ ಸ್ಥಳೀಯರು ವಿದ್ಯಾರ್ಥಿಗಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉದ್ಘಾ ಟನಾ ಸಮಾರಂಭದಲ್ಲಿ ಮಸೀದಿಯ ಖತೀಬ್ ನಲ್ಲಿ ಮದರಸ ಅಧ್ಯಾಪಕ ಆರಿಸಿ ಹಾಗೂ ಶಾಲಾ ಶಿಕ್ಷಕರುಗಳು ಭಾಗವಹಿಸಿದ್ದರು.

Translate »