ಬೈಕ್‍ಗೆ ಲಾರಿ ಡಿಕ್ಕಿ: ಸವಾರನಿಗೆ ಗಾಯ
ಕೊಡಗು

ಬೈಕ್‍ಗೆ ಲಾರಿ ಡಿಕ್ಕಿ: ಸವಾರನಿಗೆ ಗಾಯ

January 19, 2019

ಮಡಿಕೇರಿ: ವಾಹನವನ್ನು ಹಿಂದಿಕ್ಕುವ ಭರದಲ್ಲಿ ಲಾರಿಯೊಂದು ಬೈಕ್‍ಗೆ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ನಗರದ ಶಾಂತಿ ಚರ್ಚ್ ಮುಂಭಾಗ ನಡೆದಿದ್ದು, ಬೈಕ್ ಸವಾ ರನ ಕಾಲಿಗೆ ಗಂಭೀರ ಗಾಯವಾ ಗಿದೆ. ಅಪಘಾತದಲ್ಲಿ ಬೈಕ್‍ನ ಮುಂಭಾಗ ಸಂಪೂರ್ಣ ಜಖಂ ಗೊಂಡಿದ್ದು, ನಗರ ಸಂಚಾರಿ ಪೊಲೀ ಸರು ಲಾರಿ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಗರದ ಕೊರಿಯರ್ ಸಂಸ್ಥೆ ಯಲ್ಲಿ ಕೆಲಸ ಮಾಡುತ್ತಿರುವ ಭರತ್ ಎಂಬಾತ ತನ್ನ ಬೈಕ್(ಕೆ.ಎ.12,ಎಸ್.0856)ನಲ್ಲಿ ಕೆಲಸ ನಿಮಿತ್ತ ಜನರಲ್ ತಿಮ್ಮಯ್ಯ ವೃತ್ತದಿಂದ ಸುದರ್ಶನ ವೃತ್ತದ ಕಡೆ ತೆರಳುತ್ತಿದ್ದ. ಈ ಸಂದರ್ಭ ಕೆಎಸ್‍ಆರ್‍ಟಿಸಿ ಡಿಪೋ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ(ಕೆಎ.21, 8567) ಶಾಂತಿ ಚರ್ಚ್ ಮುಂದಿನ ಹೆದ್ದಾರಿಯಲ್ಲಿ ಬೇರೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ಎದುರಿಗೆ ಬಂದ ಬೈಕ್‍ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಬೈಕ್ ಸವಾರನ ಬಲಗಾಲಿನ ತೊಡೆಯ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ತಕ್ಷಣವೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ನಗರ ಸಂಚಾರಿ ಪೊಲೀಸರು, ಸ್ಥಳ ಮಹಜರು ನಡೆಸಿ ಲಾರಿ ಚಾಲಕನ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Translate »