ಕುಟುಂಬಗಳಲ್ಲಿ ಅನ್ಯೂನ್ಯತೆ ಇರಬೇಕು
ಕೊಡಗು

ಕುಟುಂಬಗಳಲ್ಲಿ ಅನ್ಯೂನ್ಯತೆ ಇರಬೇಕು

December 17, 2018

ವಿರಾಜಪೇಟೆ: ಮಾಳೇಟಿರ ಕುಟುಂಬದ ಫಂಡಿನ 2017-18ನೇ ವಾರ್ಷಿಕ ಮಹಾ ಸಭೆಯು ಕೆದಮುಳ್ಳೂರು ಗ್ರಾಮದ ಮಾಳೇಟಿರ ಕುಟುಂಬದ ಕೈಮಡದ ಸಭಾಂಗಣದಲ್ಲಿ ಹಿರಿಯರಾದ ಮಾಳೇಟಿರ ಎಂ.ಗಣಪತಿ ಅಧ್ಯಕ್ಷತೆಯಲ್ಲಿ ನಡೆದು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಮಾಳೇಟಿರ ಎಂ.ಗಣಪತಿ, ಎಲ್ಲಾ ಕುಟುಂಬಗಳು ಅನ್ಯೂ ನ್ಯತೆಯಿಂದ ಒಂದಾಗಿ ಜೀವನ ನಡೆಸುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗತಬೇಕು. ಮಕ್ಕಳು ಸಿಗು ವಂತ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಜೀವನದಲ್ಲಿ ಉತ್ತಮ ಬದುಕನ್ನು ರೂಪಿಸಿಕೊಂಡು ದೇಶದ ಉತ್ತಮ ಪ್ರಜೆ ಗಳಾಗುವಂತೆ ಹೇಳಿದರು.

ಕುಟುಂಬದ ಫಂಡಿನ ಕಾರ್ಯಾಧ್ಯಕ್ಷ ಮಾಳೇಟಿರ ವಿಜಯ ಮಂದಣ್ಣ ಮಾತ ನಾಡಿ, ಯಾವುದೇ ಕಾರ್ಯ ಮಾಡಬೇಕಾ ದರೆ ಸದಸ್ಯರ ಸಹಕಾರ ಅಗತ್ಯವಿದೆ ಎಂದರು. ಮಾಳೇಟಿರ ಎಂ.ನಂಜಪ್ಪ ಮಾತನಾಡಿ, ಕುಟುಂಬದ ಫಂಡು ಎಲ್ಲಾ ಸದಸ್ಯರು ಗಳಿಗೂ ಅವಶ್ಯವಿದ್ದು, ಇದರ ಬಗ್ಗೆ ಸಹ ಕಾರ ನೀಡುವಂತೆ ಕೋರಿದರು. ಕಾರ್ಯ ದರ್ಶಿ ಮಾಳೇಟಿರ ಬೆಲ್ಲು ಬೋಪಯ್ಯ ಹಾಗೂ ಉಪಾಧ್ಯಕ್ಷ ಬೊಳ್ಳು ಅಪ್ಪಚ್ಚು ಮಾತನಾಡಿದರು.

ಮಹಾಸಭೆಯಲ್ಲಿ ಸಿನಿಮಾ ರಂಗದ ಮಾಳೇಟಿರ ಅನೂಷ ಪೂವಮ್ಮ, ಪೇಟೆ ಹುಡುಗಿ ಹಳ್ಳಿ ಲೈಫ್‍ನ ಶಾನ್ ಪೊನ್ನಮ್ಮ, ಕ್ರೀಡಾ ಕ್ಷೇತ್ರದ ಹ್ಯಾಂಡ್ ಬಾಲ್ ಮತ್ತು ಬಾಸ್ಕೆಟ್ ಬಾಲ್‍ನಲ್ಲಿ ಭಾಗವಹಿಸಿದ್ದ ಮಾಳೇಟಿರ ಪಲ್ಲವಿ, ಗೌತಮಿ, ಗಾನವಿ ಪೂಣಚ್ಚ, ಫುಟ್ಬಾಲ್ ಆಟಗಾರ್ತಿ ಲಕ್ಷ್ಮಿ ದೇಚಮ್ಮ, ಕರಾಟೆಯ ಕಿಲನ್ ಮಹೇಶ್ ಹಾಗೂ ಎಂ.ಬಿ.ಕಾಳಪ್ಪ ಭೀಮಯ್ಯ, ಎನ್‍ಸಿಸಿ ಯಲ್ಲಿ ವಶಿನ್ ಮುತ್ತಮ್ಮ ಮತ್ತು ಎಸ್‍ಎಸ್ ಎಲ್‍ಸಿ, ಪಿಯುಸಿ, ಡಿಗ್ರಿ, ವೃತ್ತಿಪರ ಮಾಸ್ಟರ್ ಡಿಗ್ರಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿ ಗಳನ್ನು ಗೌರವಿಸಲಾಯಿತು.

ಈ ಸಂದರ್ಭ ಮದುವೆಯಾಗಿ 50 ವರ್ಷ ಮೇಲ್ಪಟ್ಟ ದಂಪತಿಗಳಾದ ಮಾಳೇ ಟಿರ ಮಣಿ ಮಾಚಯ್ಯ- ಬೊಳ್ಳವ್ವ, ಮಾಳೇಟಿರ ಲಾಲು ಉತ್ತಪ್ಪ-ಶಾರದ, ತಾಮನೆ ಮೂಡಿಯ ಕನ್ನಂಬಿರ ಚಂಗಪ್ಪ- ತಾಯಕ್ಕಿ, ಅಂಜಪರವಂಡ ಬೋಪಯ್ಯ-ರಾಧ ದಂಪತಿಗಳನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಮಾಳೇಟಿರ ಕಾಶಿ ಕುಂಞಪ್ಪ, ಪ್ರಶಾಂತ್ ಉತ್ತಪ್ಪ, ಮಣೆ ಮಾಚಯ್ಯ, ಪೆಮ್ಮಯ್ಯ, ಪಾರ್ವತಿ, ಅಕ್ಕವ್ವ, ಪ್ರದೀಪ್ ಗೌತಮ್, ಸಾಬು ಕಾಳಪ್ಪ, ನಂಜಪ್ಪ, ಸನ್ನಿ ಕಾರ್ಯಪ್ಪ, ರಾಮು ಸುಬ್ರಾಯ, ಕರುಂ ಬಯ್ಯ, ಮಮತ ಭವಾನಿ, ದೇವಕ್ಕಿ ಲಾಲಿ ಅವರುಗಳು ಮಾತನಾಡಿದರು.

Translate »