ಯುವ ಜನಾಂಗದಲ್ಲಿ ಶಿಸ್ತು, ಸಮಯ ಪ್ರಜ್ಞೆ ಅಗತ್ಯ
ಕೊಡಗು

ಯುವ ಜನಾಂಗದಲ್ಲಿ ಶಿಸ್ತು, ಸಮಯ ಪ್ರಜ್ಞೆ ಅಗತ್ಯ

December 17, 2018

ಸುಂಟಿಕೊಪ್ಪ: ಸೋಮವಾರಪೇಟೆ ಸಂತ ಜೋಸೆಫರ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವತಿಯಿಂದ ವಿಶೇಷ ವಾರ್ಷಿಕ ಶಿಬಿರವು ಸಮೀಪದ ಯಡವಾರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.

ಎನ್‍ಎಸ್‍ಎಸ್ ಶಿಬಿರದ ಉದ್ಘಾಟನಾ ಸಮಾರಂಭದ ದ್ವಜಾರೋಹಣವನ್ನು ಐಗೂರು ಗ್ರಾಪಂ ಪ್ರಭಾರ ಅಧ್ಯಕ್ಷೆ ಕೆ.ಪಿ.ಶೋಭಾ ನೆರವೇರಿಸಿ ಮಾತನಾಡಿದ ಅವರು, ಯುವ ಜನಾಂ ಗದವರಲ್ಲಿ ಶಿಸ್ತು, ಸಮಯಪಾಲನೆ, ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳುವುದರ ಜೊತೆಯಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನುಗಳಿಸಬೇಕು ಎಂದರು. ಐಗೂರು ಗ್ರಾಪಂ ಮಾಜಿ ಅಧ್ಯಕ್ಷ ಡಿ.ಎಸ್.ಚಂಗಪ್ಪ ಮಾತನಾಡಿ, ಇಂತಹ ಶಿಬಿರಗಳು ಆಯಾ ಗ್ರಾಮದ ಗ್ರಾಮಸ್ಥರಿಗೆ ಜನಜಾಗೃತಿ ಮೂಡಿಸಬೇಕು. ಗ್ರಾಮದ ಸುತ್ತ ಸ್ವಚ್ಚ ಮತ್ತು ಆರೋಗ್ಯಪೂರ್ಣ ಪರಿಸರ ಹುಟ್ಟುಹಾಕುವಂತಿರಬೇಕು ಎಂದು ಹೇಳಿದರು. ಶಿಬಿರದ ಶಿಬಿರಾರ್ಥಿಗಳಿಗೆ ಕಾಲೇಜಿನ ಪ್ರಾಚಾರ್ಯ ರೆ.ಫಾ.ಟೆನ್ನಿ ಕುರಿಯನ್ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಡಿ.ಜನಾರ್ಧನ ವಹಿಸಿದ್ದರು.

ಅಂತರಾಷ್ಟ್ರೀಯ ಹಾಕಿ ಆಟಗಾರ, ಐಗೂರು ಗ್ರಾಪಂಮಾಜಿ ಅಧ್ಯಕ್ಷ ಕೆ.ಪಿ.ರಾಯ್, ಮುಖ್ಯ ಶಿಕ್ಷಕ ವೈ.ಸಿ.ಕುಮಾರ್, ಎನ್‍ಎಸ್‍ಎಸ್ ಯೋಜನಾಧಿಕಾರಿ ಬಿ.ಜಿ.ಆನಂದ, ಸಹ ಶಿಬಿರಾಧಿಕಾರಿ ಗಳಾದ ಹರೀಶ್, ಶಿವಕುಮಾರ್, ಶೋಭ, ಛಾಯಾ, ಶಿಲ್ಪ, ಅನುಪಲ್ಲವಿ ಇತರರು ಇದ್ದರು.

Translate »