ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
ಕೊಡಗು

ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

December 17, 2018

ಗೋಣಿಕೊಪ್ಪಲು:  ಮಾಯಮುಡಿ ಗ್ರಾಪಂ ವ್ಯಾಪ್ತಿಯಲ್ಲಿ ಜಿಪಂ ಮೂಲಕ ಅನು ಷ್ಠಾನಗೊಳಿಸಲು ಉದ್ದೇಶಿಸಿರುವ ರೂ. 11.60 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮ ಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಗ್ರಾಮಸ್ಥರೊಂದಿಗೆ ಜಿಪಂ ಸದಸ್ಯೆ ಪಿ.ಆರ್. ಪಂಕಜ, ಮಾಯಮುಡಿ ಗ್ರಾಪಂ ಉಪಾಧ್ಯಕ್ಷೆ ಗೌರಿ, ಸದಸ್ಯರುಗಳಾದ ಆಪಟೀರ ಪ್ರದೀಪ್, ಚಿಣ್ಣಪ್ಪ, ಆಪಟೀರ ವಿಠಲ ನಾಚಯ್ಯ, ಮಣಿ ಕುಂಞ, ಬಸ್ರಾ ಇವರುಗಳು ಪೂಜೆ ನೆರ ವೇರಿಸಿದರು. ಈ ಸಂದರ್ಭ ಮಾತನಾಡಿದ ಜಿಪಂ ಸದಸ್ಯೆ ಪಂಕಜ, ಮಾಯಮುಡಿ ಗ್ರಾಪಂ ವ್ಯಾಪ್ತಿಯ 7 ಅಭಿವೃದ್ಧಿ ಕಾಮ ಗಾರಿಗಳಿಗೆ ಚಾಲನೆ ನೀಡಲಾಗಿದೆ.

ರುದ್ರಬೀಡು ಸಾರ್ವಜನಿಕ ರಸ್ತೆ ಅಭಿವೃದ್ಧಿಗೆ 2.30 ಲಕ್ಷ, ಬಾನಂಡ ಕುಟುಂಬಸ್ಥರ ಮನೆ ರಸ್ತೆ ಅಭಿವೃದ್ಧಿಗೆ 1 ಲಕ್ಷ, ಮಡಿಕೇಬೀಡು ಸಾರ್ವಜನಿಕ ರಸ್ತೆಗೆ 2 ಲಕ್ಷ, ಜಪದ್‍ಕಟ್ಟೆ ಮಠದ ಸಾರ್ವಜನಿಕ ರಸ್ತೆಗೆ 2.50 ಲಕ್ಷ, ಮಾಯಮುಡಿ ಸರ್ಕಾರಿ ಪ್ರೌಢ ಶಾಲೆ ದುರ ಸ್ತಿಗೆ 1.50 ಲಕ್ಷ, ಕಾಳಪಂಡ ಕುಟುಂಬಸ್ಥರ ಸಾರ್ವಜನಿಕ ರಸ್ತೆ ಅಭಿವೃದ್ಧಿಗೆ 2 ಲಕ್ಷ, ಮಾಯಮುಡಿ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಡೆಸ್ಕ್ ಖರೀದಿಗೆ 80 ಸಾವಿರ ಅನುದಾನ ನೀಡಲಾಗಿದೆ. ಇದ ರಂತೆ ಅಭವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

Translate »