ನಂಜನಗೂಡಿನ ಪೊಲೀಸ್ ಭವನದಲ್ಲಿ ನಿರ್ಗಮಿತ ಸಿಪಿಐ ಶಿವಮೂರ್ತಿ, ಸಬ್ ಇನ್ಸ್‍ಪೆಕ್ಟರ್ ಸಿ.ಯು.ಸವಿ ಅವರಿಗೆ ಬೀಳ್ಕೊಡುಗೆ
ಮೈಸೂರು

ನಂಜನಗೂಡಿನ ಪೊಲೀಸ್ ಭವನದಲ್ಲಿ ನಿರ್ಗಮಿತ ಸಿಪಿಐ ಶಿವಮೂರ್ತಿ, ಸಬ್ ಇನ್ಸ್‍ಪೆಕ್ಟರ್ ಸಿ.ಯು.ಸವಿ ಅವರಿಗೆ ಬೀಳ್ಕೊಡುಗೆ

October 9, 2018

ನಂಜನಗೂಡು:  ಸರ್ಕಾರದಲ್ಲಿ ರುವ ಎಲ್ಲಾ ಇಲಾಖೆಗಳಿಗಿಂತ ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರ ನಿರೀಕ್ಷೆ ಅತೀ ಹೆಚ್ಚಿನ ಮಟ್ಟದಲ್ಲಿದ್ದು ಅವರ ನಿರೀಕ್ಷೆಗೆ ಸ್ಪಂದಿಸಿ ಪೊಲೀಸರಾದ ನಾವು ಕರ್ತವ್ಯ ನಿರ್ವಹಿಸಿದಾಗ ಸಾರ್ವಜನಿಕರು ಪೊಲೀಸ್ ಇಲಾಖೆಯ ಬಗ್ಗೆ ಗೌರವ ಮತ್ತು ಗುರುತಿ ಸುವ ಕೆಲಸ ಮಾಡುತ್ತಾರೆ. ಸರ್ಕಾರಿ ಸೇವೆ ಯಲ್ಲಿರುವ ನಾವು ಎಲ್ಲೇ ಇರಲಿ, ಮಾಡುವ ಕೆಲಸ ಸಮಾಜಮುಖಿಯಾಗಿರಬೇಕು ಎಂದು ಇಲ್ಲಿನ ನೂತನ ಡಿವೈಎಸ್‍ಪಿ. ಸಿ.ಮಲ್ಲಿಕ್ ಪೊಲೀಸರಿಗೆ ಕಿವಿಮಾತು ಹೇಳಿದ್ದಾರೆ.
ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ಸಭಾಂಗಣದಲ್ಲಿ ನಡೆದ ನಿರ್ಗಮಿತ ಸಿಪಿಐ ಶಿವಮೂರ್ತಿ ಅವರ ಬೀಳ್ಕೊಡುಗೆ ಹಾಗೂ ತಮಗೆ ನೀಡಿದ ಸ್ವಾಗತ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಪೊಲೀಸರಿಗೆ ನಿವೃತ್ತಿ ನಿಗದಿಯಾಗಿ ರುತ್ತದೆ. ಆದರೆ, ವರ್ಗಾವಣೆ ನಿಗದಿಯಾಗಿರು ವುದಿಲ್ಲ ಆದ್ದರಿಂದ ನಾವು ಕೆಲಸ ಮಾಡುವ ದಿನಗಳು ಶಿಸ್ತು ಮತ್ತು ದಕ್ಷತೆಯಿಂದಿರಬೇಕು ಎಂದರು. ಇಂದಿನ ದಿನಗಳಲ್ಲಿ ವೃತ್ತಿಪರತೆ ಕಡಿಮೆಯಾಗುತ್ತಿದ್ದು, ಪೊಲೀಸರು ಇದನ್ನು ಉಳಿಸಿಕೊಂಡು ನಾವು ಮಾಡಿದ ಕೆಲಸವೇ ನಮ್ಮನ್ನು ಗುರುತಿಸುವ ಹೆಜ್ಜೆಯ ಗುರುತಾಗುವ ರೀತಿಯಲ್ಲಿ ನಾವು ಸಾರ್ವ ಜನಿಕರ ಸೇವೆ ಮಾಡಬೇಕು ಎಂದರು.

ನಂಜನಗೂಡು ಉಪ ವಿಭಾಗದಲ್ಲಿ ಉತ್ತಮ ಕೆಲಸ ನಿರ್ವಹಿಸುವ ಭರವಸೆ ಯನ್ನು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೀಡಿದರು. ಸನ್ಮಾನಿತ ಶಿವಮೂರ್ತಿ ಮಾತ ನಾಡಿ, ನಂಜನಗೂಡು ನನಗೆ ಸ್ಫೂರ್ತಿ ನೀಡಿದ ಊರು. ಇದನ್ನು ಮರೆಯಲು ಸಾಧ್ಯವೇ ಇಲ್ಲ. ಇಲ್ಲಿ ಒಳ್ಳೆಯ ಹೆಸರು ಗಳಿಸಲು ಸಿಬ್ಬಂದಿ ಸಹಕಾರವೇ ಕಾರಣ ಎಂದರು. ಸಮಾಜದ ಕಟ್ಟ ಕಡೆಯ ವ್ಯಕ್ತಿ ನಮ್ಮಲ್ಲಿಗೆ ಬಂದಾಗ ಆತನ ಕಣ್ಣೀರನ್ನು ಒರೆಸುವ ಪ್ರಯತ್ನವೇ ನಮ್ಮೆಲ್ಲರ ಧ್ಯೇಯ ವಾಗಲಿ ಎಂದು ಅವರು ಹೇಳಿದರು. ನನಗೆ ಹೆಣ್ಣು ಮಗುವಿದ್ದು ಕಳೆದ 10 ವರ್ಷಗಳಿಂದ ಮಕ್ಕಳ ಭಾಗ್ಯವಿರಲಿಲ್ಲ ನಂಜನಗೂಡಿಗೆ ಬಂದು ಶ್ರೀಕಂಠೇಶ್ವರ ಸ್ವಾಮಿಯ ದರ್ಶನ ಪಡೆದು, ಇಲ್ಲಿ ಕರ್ತವ್ಯ ನಿರ್ವಹಿಸಲು ಪ್ರಾರಂಭಿಸಿದ ನಂತರ ಗಂಡು ಮಗು ಪ್ರಾಪ್ತ ವಾಯಿತು ಇದರಿಂದ ದಂಪತಿ ನಾವು ಸುಖಿಭೂತರಾಗಿದ್ದೇವೆ ಎಂದರು.

ನಗರ ಠಾಣಾಧಿಕಾರಿ ಆನಂದ್ ಮಾತ ನಾಡಿ, ಸಿ.ಪಿ.ಐ. ಶಿವಮೂರ್ತಿ ಅವರು ಹೃದಯ ಶ್ರೀಮಂತಿಕೆ ಇರುವ ಅಧಿಕಾರಿ. ಕೆಲಸದಲ್ಲಿ ಶಿಸ್ತಿನ ಸಿಪಾಯಿ. ಯಾವುದೇ ಸಮಸ್ಯೆಗಳಿದ್ದರು ಚರ್ಚೆಯ ಮೂಲಕ ಪರಿಹರಿಸುತ್ತಿದ್ದರು. ಇಂತಹ ಅಧಿಕಾರಿಯಿಂದ ನಾನು ಸಾಕಷ್ಟು ಕೆಲಸ ಕಲಿತಿರುವುದಾಗಿ ತಿಳಿಸಿದರು. ಎಎಸ್‍ಐ ಗೋಪಾಲಕೃಷ್ಣ ಮಾತ ನಾಡಿ, ನನಗೆ ಠಾಣೆಯ ಸೆಂಟ್ರಿ ಕೆಲಸ ಕಲಿಸಿ ಕೊಟ್ಟವರೇ ಇವರು. ಸಾರ್ವಜನಿಕರಿಗೆ ಸದಾ ಸ್ಪಂದಿಸುತ್ತಿದ್ದ ಉತ್ತಮ ಅಧಿಕಾರಿ ಶಿವಮೂರ್ತಿ ಅವರು ಎಂದರು. ಎಸ್‍ಐಗಳಾದ ಗ್ರಾಮಾಂತರ ಠಾಣೆಯ ಪುನೀತ್, ಹುಲ್ಲಹಳ್ಳಿ ಠಾಣೆಯ ಸಂದೀಪ್ ನಗರದ ಕ್ರೈಮ್ ವಿಭಾಗದ ಜಯಸ್ವಾಮಿ, ವೀರಭದ್ರಪ್ಪ, ಚೇತನ್, ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ನೂತನ ಸಿಪಿಐ ಶೇಖರ್ ಸ್ವಾಗತಿಸಿದರು. ಎಸ್‍ಐ ರವಿಶಂಕರ್ ನಿರೂಪಿ ಸಿದರೆ, ಎಸ್‍ಐ ಸಂದೀಪ್ ವಂದಿಸಿದರು.

ಇದೇ ಸಂದರ್ಭದಲ್ಲಿ ನಗರ ಠಾಣೆಯ ಎಸ್.ಐ ಸಿ.ಯು.ಸವಿ ಅವರಿಗೂ ಬೀಳ್ಕೊ ಡುಗೆ ನೀಡಲಾಯಿತು. ಸಾರ್ವಜನಿಕರ ಪರವಾಗಿ ನಗರದ ವಿವಿಧ ಸಂಘ ಸಂಸ್ಥೆ ಗಳ ಮುಖಂಡರು ಮತ್ತು ಅಲ್ಪ ಸಂಖ್ಯಾತರ ಮುಖಂಡ ಅಬ್ದುಲ್ ಖಾದಿರ್ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿದರು.

Translate »