ನಾಳೆಯಿಂದ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ
ಮೈಸೂರು

ನಾಳೆಯಿಂದ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ

June 25, 2019

ಮೈಸೂರು, ಜೂ.24(ಆರ್‍ಕೆಬಿ)- ಡಿಸ್ಟಿ ಲರಿ ತೊಲಗಿಸಿ, ಊರು ಉಳಿಸಿ ಎಂದು ಅಳಗಂಚಿಪುರ ಬಣ್ಣಾರಿ ಡಿಸ್ಟಿಲರಿ ಎದುರು ಜೂ.26ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಪ್ರೊ.ಎಂ.ಡಿ.ಎನ್. ಅನು ಯಾಯಿಗಳಾದ ದಿ.ತಾ.ರಾಮೇಗೌಡ ಮತ್ತು ರಘುಪತಿ ನಾಯಕ ಹೋರಾಟ ವೇದಿಕೆ ನಿರ್ಧರಿಸಿದೆ. ವೇದಿಕೆ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೇದಿಕೆ ಜಿಲ್ಲಾಧ್ಯಕ್ಷ ಟಿ.ರಾಮೇಗೌಡ ವಿದ್ಯಾಸಗರ್ ನೇತೃತ್ವದಲ್ಲಿ ಜೂ.26ರಿಂದ ಎರಡು ದಿನ ಶಾಂತಿಯುವ ಪ್ರತಿಭಟನೆ ನಡೆಸಲಿದ್ದು, ಬಳಿಕ ಅನಿರ್ದಿಷ್ಟಾವಧಿ ಉಗ್ರ ಹೋರಾಟ ನಡೆಸುತ್ತೇವೆ. ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ಡಾ.ಯತೀಂದ್ರ, ರಾಜ್ಯಾಧ್ಯಕ್ಷ ಜಿ.ಎ.ಲಕ್ಷ್ಮೀನಾರಾಯಣ, ಹಸಿರು ಸೇವೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಭಾಗವಹಿಸಲಿದ್ದಾರೆ ಎಂದರು.

ನಂಜನಗೂಡಿನ ಅಳಗಂಚಿಪುರ ಗ್ರಾಮ ವ್ಯಾಪ್ತಿಯ ಬಣ್ಣಾರಿ ಡಿಸ್ಟಿಲರಿಯಿಂದ ಗ್ರಾಮದ ಅಂತರ್ಜಲ ಹಾಗೂ ಪರಿಸರ ಸಂಪೂರ್ಣ ಕಲುಷಿತವಾಗಿದೆ. ಅಲ್ಲಿನ ರೈತ ಕುಟುಂಬ ವೊಂದು ಈಗಾಗಲೇ ದಯಾಮರಣಕ್ಕೆ ಅವಕಾಶ ಕೋರಿದೆ. ಇಲ್ಲಿನ ಕಲುಷಿತ ವಾತಾವರಣದಿಂದಾಗಿ ಇಲ್ಲಿ ಯಾರೇ ಸಾವ ನ್ನಪ್ಪಿದರೂ ಅಂತ್ಯಸಂಸ್ಕಾರಕ್ಕೆ ಹೊರಗಿನಿಂದ ಜನಸಾಮಾನ್ಯರು ಊರಿಗೆ ಬರಲು ಹೆದರು ವಂತಾಗಿದೆ. ಹಾಗಾಗಿ ದಯಾಮರಣ ಕೇಳುವ ಸ್ಥಿತಿ ಗ್ರಾಮಸ್ಥರದ್ದಾಗಿದೆ. ಇದನ್ನ ರಿತು ಕೂಡಲೇ ಡಿಸ್ಟಿಲರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪುಟ್ಟಬಸಪ್ಪ, ಸಂಚಾಲಕ ಸತೀಶ್‍ರಾವ್, ದೊಡ್ಡಯ್ಯ ಇನ್ನಿತರರು ಉಪಸ್ಥಿತರಿದ್ದರು.

Translate »