ಮೈಸೂರು, ಡಿ. 7(ಆರ್‍ಕೆ)- ಜಾರಿಗೆ ತಂದಿರುವ ಬೀಜ ಕಾಯ್ದೆ ಯಲ್ಲಿ ರೈತರ ಹಕ್ಕು ಗಳನ್ನು ರಕ್ಷಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡ ಗಲಪುರ ನಾಗೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮೈಸೂರಿನ ಗೋವರ್ಧನ ಹೋಟೆಲಿ ನಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಕೆಲ ಕಂಪನಿ ಗಳು ನಕಲಿ ಬೀಜ ನೀಡಿ ರೈತರನ್ನು ವಂಚಿ ಸುತ್ತಿವೆ. ಅಂತಹ ಕಂಪನಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಜತೆಗೆ ರೈತರಿಗೆ ಪೂರ್ಣ ಪ್ರಮಾಣದ ನಷ್ಟ ಪರಿಹಾರ ತುಂಬಿ ಕೊಡುವ ವ್ಯವಸ್ಥೆಯನ್ನು ಬೀಜ ಕಾಯ್ದೆ ಮೂಲಕ ಮಾಡಬೇಕೆಂದು ಒತ್ತಾಯಿಸಿದರು.
ಇಂಡೋ-ಅಮೇರಿಕಾದೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಅಪಾಯ ಕಾರಿಯಾದ್ದರಿಂದ ಕೇಂದ್ರ ಸರ್ಕಾರ ಈ ಅಂತರರಾಷ್ಟ್ರೀಯ ವಾಣಿಜ್ಯ ಒಡಂಬಡಿಕೆಗೆ ಸಹಿ ಹಾಕಬಾರದು ಎಂದು ಆಗ್ರಹಿಸಿದ ಅವರು, ಗಣರಾಜ್ಯೋತ್ಸವ ಕಾರ್ಯ ಕ್ರಮಕ್ಕೆ ಬ್ರೆಜಿಲ್ ಪ್ರಧಾನಿ ಬೊಲ್ಸೆನಾರೋ ಅವರನ್ನು ಆಹ್ವಾನಿಸಬಾರದು. ಒಂದು ವೇಳೆ ಬಂದರೆ ರೈತರಿಂದ ದೆಹಲಿಯಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ನಾಗೇಂದ್ರ ಎಚ್ಚರಿಕೆ ನೀಡಿದರು.
ಡಿಸೆಂಬರ್ 23ರಂದು ರೈತ ಚೇತನ ರಾದ ಕೆ.ಎಸ್.ಪುಟ್ಟಣ್ಣಯ್ಯ, ಎನ್.ಡಿ. ನಂಜುಂಡಸ್ವಾಮಿ, ಹೆಚ್.ಎಸ್.ರುದ್ರಪ್ಪ, ಎನ್.ಡಿ.ಸುಂದರೇಶ್, ಚೌಧರಿ ಚರಣ್ ಸಿಂಗ್ ನೆನಪಿನ ದಿನವನ್ನಾಗಿ ಆಚರಿಸ ಲಾಗುವುದು. ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ರೈತ ಸಂಘವು ಅಂದು ರಾಜ್ಯ ಮಟ್ಟದ ಕಾರ್ಯಕ್ರಮ ಆಯೋ ಜಿಸಿದ್ದು, ಆ ವೇಳೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ 100 ಮಹಿಳೆಯರಿಗೆ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸು ವುದಲ್ಲದೆ, ವಿಚಾರ ಸಂಕಿರಣ ಏರ್ಪಡಿಸ ಲಾಗಿದೆ ಎಂದು ತಿಳಿಸಿದರು.
ರೈತ ಚಳುವಳಿಯನ್ನು ಪ್ರಬಲಗೊಳಿ ಸಲು ಪ್ರತೀ ತಾಲೂಕುಗಳಲ್ಲಿ 100 ಮಂದಿ ಯುವಕರ ತಂಡ ರಚಿಸಿ, ಬೌದ್ಧಿಕ ಜ್ಞಾನ ತುಂಬಿ ಸದೃಢ ಮತ್ತು ಸುಸ್ಥಿರ ಗ್ರಾಮ ಭಾರತ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ ಎಂದರು. ಸಂಘದ ಗೌರವಾಧ್ಯಕ್ಷ ಚಾಮ ರಸ ಮಾಲೀ ಪಾಟೀಲ್, ಪ್ರಧಾನ ಕಾರ್ಯ ದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ಹೊಸೂರು ಕುಮಾರ್, ವಿಜೇಂದ್ರ, ಪಿ. ಮರಂಕಯ್ಯ, ಹೆಚ್.ಸಿ. ಲೋಕೇಶ್‍ರಾಜೇ ಅರಸ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.