ಮೆಟ್ರೋ ನಿಲ್ದಾಣ ಕಾಮಗಾರಿ ನೆರವಿಗಾಗಿ 30 ಕೋಟಿ ಹಸ್ತಾಂತರಿಸಿದ ಸುಧಾಮೂರ್ತಿ
ಮೈಸೂರು

ಮೆಟ್ರೋ ನಿಲ್ದಾಣ ಕಾಮಗಾರಿ ನೆರವಿಗಾಗಿ 30 ಕೋಟಿ ಹಸ್ತಾಂತರಿಸಿದ ಸುಧಾಮೂರ್ತಿ

December 8, 2019

ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ, ನಮ್ಮ ಮೆಟ್ರೋ ಯೋಜನೆಗೆ ಕೈಜೋಡಿಸಿದ್ದಾರೆ. ನಗರದ ಮೆಟ್ರೋ ಯೋಜನೆಯ ಆರ್‍ವಿ ರಸ್ತೆ-ಬೊಮ್ಮಸಂದ್ರ ಮಾರ್ಗ ದಲ್ಲಿರುವ ಕೋನಪ್ಪನ ಅಗ್ರಹಾರ ಮೆಟ್ರೊ ನಿಲ್ದಾಣ ನಿರ್ಮಾಣಕ್ಕೆ, 100 ಕೋಟಿ ನೀಡುವುದಾಗಿ ಕಳೆದ ವರ್ಷ ಘೋಷಿಸಿದ್ದರು. ಇದೀಗ ಅದರ 2ನೇ ಕಂತಿನ 30 ಕೋಟಿ ಮೊತ್ತದ ಚೆಕ್‍ನ್ನು ಬಿಎಂ ಆರ್‍ಸಿಎಲ್‍ಗೆ ಹಸ್ತಾಂತರಿಸಿದ್ದಾರೆ.

ಕಾಪೆರ್Çರೇಟ್ ಸಾಮಾಜಿಕ ಹೊಣೆಗಾರಿಕೆ ಅನುದಾನದ ಅಡಿಯಲ್ಲಿ ನಿಲ್ದಾಣ ನಿರ್ಮಾ ಣಕ್ಕೆ 100 ಕೋಟಿ ಅನುದಾನ ನೀಡುವ ಕುರಿತು ಇನ್ಫೋಸಿಸ್, ಬಿಎಂಆರ್ ಸಿಎಲ್ ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಸುಧಾಮೂರ್ತಿ ಅವರು ಈ ಹಿಂದೆ 10 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದರು. ಇದೀಗ ಮತ್ತೆ 30 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. 100 ಕೋಟಿ ದೇಣಿಗೆ ನೀಡುವುದಷ್ಟೇ ಅಲ್ಲದೆ, ಮುಂದಿನ 30 ವರ್ಷಗಳ ಕಾಲ ನಿಲ್ದಾಣದ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಇನ್ಫೋಸಿಸ್ ಪ್ರತಿಷ್ಠಾನ ವಹಿಸಿಕೊಂಡಿದೆ. ಒಪ್ಪಂದದ ಪ್ರಕಾರ ನಿಲ್ದಾಣದ ಸಿವಿಲ್ ಕಾಮಗಾರಿ ಪೂರ್ಣಗೊಂಡ ನಂತರದ 30 ಕೋಟಿ ಹಾಗೂ ನಿಲ್ದಾಣದ ಕಾಮಗಾರಿ ಸಂಪೂರ್ಣ ಮುಗಿದ ಮೇಲೆ ಕೊನೆಯ ಹಂತದ 30 ಕೋಟಿ ನೀಡುವುದಾಗಿ ಇನ್ಫೋಸಿಸ್ ಪ್ರತಿಷ್ಠಾನ ತಿಳಿಸಿದೆ.

Translate »