ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ‘ಉತ್ತಮ ವಸ್ತ್ರಸಂಹಿತೆ’ ಅಗತ್ಯ
ಮೈಸೂರು

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ‘ಉತ್ತಮ ವಸ್ತ್ರಸಂಹಿತೆ’ ಅಗತ್ಯ

December 8, 2019

ಮೈಸೂರು,ಡಿ.7(ಎಂಟಿವೈ)- ದೇಶದ ವಿವಿಧೆಡೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು, ಯುವತಿಯರು ‘ಉತ್ತಮ ವಸ್ತ್ರಸಂಹಿತೆ’ ಅನುಸರಿಸುವುದು ಅನಿ ವಾರ್ಯವಾಗಿದೆ ಎಂದು ಮೇಯರ್ ಪುಷ್ಪ ಲತಾ ಜಗನ್ನಾಥ್ ಸಲಹೆ ನೀಡಿದ್ದಾರೆ.

ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣ ದಲ್ಲಿ ಶನಿವಾರ ಆಯುಷ್ ಇಲಾಖೆ ಐಇಸಿ ಕಾರ್ಯಕ್ರಮದ ಎನ್‍ಸಿಪಿ ಯೋಜನೆಯಡಿ ಎನ್‍ಎಸ್‍ಎಸ್ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ `ಹದಿಹರೆಯದ ಸಮಸ್ಯೆ ಗಳು ಮತ್ತು ನಿರ್ವಹಣೆ’ ಕುರಿತ ಕಾರ್ಯಾ ಗಾರವನ್ನು ಉದ್ಘಾಟಿಸಿದ ಅವರು, ಇತ್ತೀ ಚಿನ ವರ್ಷಗಳಲ್ಲಿ ಭಾರತೀಯ ಸಾಂಪ್ರ ದಾಯಿಕ ಉಡುಪನ್ನು ವಿದೇಶಿಯರು ಅನುಸರಿಸುತ್ತಿದ್ದಾರೆ. ಆದರೆ ನಮ್ಮ ಯುವತಿಯರು, ವಿದ್ಯಾರ್ಥಿನಿಯರು ಪಾಶ್ಚಿಮಾತ್ಯ ವಸ್ತ್ರ ವಿನ್ಯಾಸಗಳಿಗೆ ಮಾರು ಹೋಗಿದ್ದಾರೆ. ಜೀನ್ಸ್ ಪ್ಯಾಂಟ್ ಸೇರಿದಂತೆ ಪಾಶ್ಚಿಮಾತ್ಯ ಉಡುಪು ಧರಿಸುವುದರಲ್ಲಿ ಆಕ್ಷೇಪವಿಲ್ಲ. ಆದರೆ ಕಾಮುಕರನ್ನು ಆಕರ್ಷಿಸುವಂತಹ ಉಡುಪು ಧರಿಸುವುದು ಸರಿಯಲ್ಲ. ದೇಶದೆಲ್ಲೆಡೆ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಲ್ಲಿ ಇರುವುದು ಅನಿವಾರ್ಯ ಎಂದು ಕಿವಿಮಾತು ಹೇಳಿದರು. ಕಳೆದ ವಾರ ಹೈದರಾಬಾದ್‍ನಲ್ಲಿ ಪಶು ವೈದ್ಯೆಯ ಅತ್ಯಾಚಾರ ನಡೆಸಿ, ಹತ್ಯೆಗೈಯ್ದ ಆರೋಪಿ ಗಳನ್ನು ಶುಕ್ರವಾರ ಎನ್‍ಕೌಂಟರ್ ಮಾಡಿ ರುವ ಪೊಲೀಸರ ಕಾರ್ಯಕ್ಕೆ ನಮ್ಮೆಲ್ಲರ ಮೆಚ್ಚುಗೆ ಇದೆ. ಅತ್ಯಾಚಾರ ಪ್ರಕರಣ ಮರುಕಳಿಸುವುದನ್ನು ತಡೆಗಟ್ಟಲು ಎನ್ ಕೌಂಟರ್‍ನಂತಹ ಕಠಿಣ ಕ್ರಮ ಅಗತ್ಯ ವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜು ವಿದ್ಯಾರ್ಥಿನಿಯರಿಗಾಗಿ ಹದಿ ಹರೆಯದ ಸಮಸ್ಯೆ ಕುರಿತಂತೆ ಕಾರ್ಯಾ ಗಾರ ಆಯೋಜಿಸಿರುವುದು ಉಪಯುಕ್ತ. ಆಯುಷ್ ಎಂದರೆ ಆಯುರ್ವೇದ, ಯೋಗವೂ ಸೇರುತ್ತದೆ. ಯೋಗ ಮಾಡು ವುದರಿಂದ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಇತ್ತೀಚಿನ ದಿನ ಗಳಲ್ಲಿ ಹೊರ ದೇಶದಲ್ಲೂ ಯೋಗ ಮಾಡು ವವರ ಸಂಖ್ಯೆ ಹೆಚ್ಚಾಗಿದೆ. ಜಾತಿ, ಧರ್ಮದ ಎಲ್ಲೇ ಮೀರಿ ಯೋಗ ಮಾಡುವುದನ್ನು ಕಾಣಬಹುದು ಎಂದು ಹೇಳಿದರು.

ಯುವ ಪೀಳಿಗೆ ಮೊಬೈಲ್ ಬಳಕೆಯಲ್ಲೇ ಮುಳುಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿ ದ್ದಾರೆ. ಒತ್ತಡ ನಿವಾರಣೆಗಾಗಿ ದಿನಕ್ಕೆ 10 ನಿಮಿಷವಾದರೂ ಮೆಡಿಟೇಷನ್(ಧ್ಯಾನ) ಮಾಡಬೇಕು. ಈ ಹವ್ಯಾಸ ರೂಢಿಸಿಕೊಂಡರೆ ಮಾನಸಿಕ ಆರೋಗ್ಯ ಸದೃಢಗೊಳ್ಳುತ್ತದೆ. ಪ್ರಾಣಾಯಾಮ ಮಾಡುವುದರಿಂದಲೂ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ಹಿಂದೆ ನಮ್ಮ ಹಿರಿಯರು ಹಾಕಿಕೊಟ್ಟಿದ್ದ ಮಾರ್ಗ ಅನುಸರಿಸಿದರೆ ಉತ್ತಮವಾಗಿ ಬಾಳ್ವೆ ನಡೆಸ ಬಹುದು. ಕೈಗೆ ಬಳೆ ತೊಡುವುದು, ಹಣೆಗೆ ಕುಂಕುಮ ಇಟ್ಟುಕೊಳ್ಳುವುದರಿಂದಲೂ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ ಎಂದರು.

ಮಹಾರಾಣಿ ಮಹಿಳಾ ಕಲಾ ಕಾಲೇ ಜಿನ ಪ್ರಾಂಶುಪಾಲ ಬಿ.ಟಿ.ವಿಜಯ್ ಮಾತ ನಾಡಿ, ಅಪರಾಧ ಕೃತ್ಯಗಳನ್ನು ನಿಯಂ ತ್ರಿಸುವ ನಿಟ್ಟಿನಲ್ಲಿ ಮೇಯರ್ ಹೇಳಿದಂತೆ ಉತ್ತಮ ವಸ್ತ್ರಸಂಹಿತೆ ಅನುಸರಿಸುವತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ಜಿ.ಪಂ ಉಪಾ ಧ್ಯಕ್ಷೆ ಗೌರಮ್ಮ ಸೋಮಶೇಖರ್ ಮಾತನಾಡಿ ದರು. `ತಾರುಣ್ಯಾವಸ್ಥೆಯಲ್ಲಿ ಶಾರೀರಿಕ ಆರೋಗ್ಯ’ ವಿಷಯ ಕುರಿತು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾ ಲಯದ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಪ್ರಾಧ್ಯಾಪಕಿ ಡಾ.ಲಲಿತಾ ಭಾಸ್ಕರ್, `ಹದಿಹರೆಯದಲ್ಲಿ ಶುಚಿತ್ವದ ಮಹತ್ವ’ ಕುರಿತಂತೆ ಜೆಎಸ್‍ಎಸ್ ಆಯು ರ್ವೇದ ವೈದ್ಯಕೀಯ ಮಹಾವಿದ್ಯಾಲ ಯದ ಪ್ರಾಧ್ಯಾಪಕಿ ಡಾ.ವೀಣಾ ರಾವ್, `ಪೌಷ್ಟಿಕ ಆಹಾರವೇ ಆರೋಗ್ಯ’ ವಿಷಯ ಕುರಿತು ಸಹಾಯಕ ಪ್ರಾಧ್ಯಾಪಕಿ ಡಾ. ಎಸ್.ಎ.ಆಶಾ, `ಯೋಗದ ಮಹತ್ವ’ ಕುರಿತು ಡಾ.ಆರ್.ಲಕ್ಷ್ಮೀ, `ಲೈಂಗಿಕ ಖಾಯಿಲೆಗಳು ಮತ್ತು ನಿವಾರಣೆ’ ಕುರಿತಂತೆ ಆಯುಷ್ ತಜ್ಞ ವೈದ್ಯರಾದ ಡಾ. ಸಿ.ಪಿ.ಪಲ್ಲವಿ, ವ್ಯಕ್ತಿತ್ವ ವಿಕಸನ ಕುರಿತು ಮಹಾರಾಜ ಕಾಲೇಜಿನ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ರಾದ ಡಾ.ಲ್ಯಾನ್ಸಿ ಡಿಸೋಜಾ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸದಸ್ಯ ಎಂ.ಶಿವಕುಮಾರ್, ಮಹಾರಾಣಿ ಕಲಾ ಕಾಲೇಜಿನ ಮನೋ ವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ.ಮನೋ ನ್ಮಣಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಎಸ್.ಜಿ.ರಾಘವೇಂದ್ರ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಮಹಾ ದೇವಯ್ಯ, ಭೂಗೋಳ ಶಾಸ್ತ್ರ ಸ್ನಾತಕೋ ತ್ತರ ವಿಭಾಗದ ಮುಖ್ಯಸ್ಥೆ ಕೆ.ಸರಿತ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್.ಸೀತಾ ಲಕ್ಷ್ಮೀ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »