ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ಸೆಣಸಾಟ: ಕೊಡಗಿನ ಯೋಧನಿಗೆ ಗಾಯ
ಮೈಸೂರು

ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ಸೆಣಸಾಟ: ಕೊಡಗಿನ ಯೋಧನಿಗೆ ಗಾಯ

June 9, 2019

ಮಡಿಕೇರಿ: ಭಾರತೀಯ ಸೇನೆಯ 44ನೇ ರಾಷ್ಟ್ರೀಯ ರೈಫಲ್ಸ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಗು ಜಿಲ್ಲೆ ವಿರಾಜ ಪೇಟೆ ತಾಲೂಕಿನ ಪೊನ್ನಂಪೇಟೆ ನಿವಾಸಿ ಶೌರ್ಯಚಕ್ರ ಪುರಸ್ಕೃತ ಹೆಚ್.ಎನ್. ಮಹೇಶ್ ಅವರಿಗೆ ಉಗ್ರವಾದಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಗುಂಡೇಟು ಬಿದ್ದಿದೆ.

ಮೇ 29ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಹೇಶ್ ಅವರ ಮುಖಕ್ಕೆ ಗುಂಡೇಟು ಬಿದ್ದಿದ್ದು, ಪ್ರಸ್ತುತ ಅವರು ಪಂಜಾಬಿನ ಚಂಡೀಗಢ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜೂ.6ರಂದು ಮಹೇಶ್ ಅವರು ತಮ್ಮ ಪೋಷಕರಿಗೆ ಕರೆ ಮಾಡಿ ಗುಂಡೇಟಿನಿಂದ ಗಾಯವಾಗಿರುವ ಬಗ್ಗೆ ಮಾಹಿತಿ ನೀಡಿ ಪ್ರಸ್ತುತ ಚೇತರಿಸಿಕೊಳ್ಳುತ್ತಿರುವುದಾಗಿಯೂ ಹೇಳಿದ್ದಾರೆ. ಪೊನ್ನಂಪೇಟೆ ಗಾಂಧಿನಗರದ ನಿವಾಸಿಯಾದ ನಾಗರಾಜ್ ಮತ್ತು ಲಕ್ಷ್ಮಿ ದಂಪತಿ ಪುತ್ರನಾಗಿರುವ ಹೆಚ್.ಎನ್.ಮಹೇಶ್ ಕಳೆದ 7 ವರ್ಷದ ಹಿಂದೆ ಆರ್ಮಿ ಇಂಜಿ ನಿಯರಿಂಗ್ ಕಾಪ್ರ್ಸ್‍ಗೆ ನೇಮಕಗೊಂಡಿ ದ್ದರು. ಬಳಿಕ ಅವರನ್ನು ಜಮ್ಮು ಕಾಶ್ಮೀರ ದಲ್ಲಿರುವ 44ನೇ ರಾಷ್ಟ್ರೀಯ ರೈಫಲ್ಸ್‍ಗೆ ನೇಮಕ ಮಾಡಲಾ ಗಿತ್ತು. ಜಮ್ಮು ಕಾಶ್ಮೀರ ದಲ್ಲಿ ರಾಷ್ಟ್ರೀಯ ರೈಫಲ್ಸ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಹೆಚ್.ಎನ್.ಮಹೇಶ್ ಅವರ 3 ವರ್ಷದ ಸೇವಾವಧಿ ಆಗಸ್ಟ್ 24ಕ್ಕೆ ಕೊನೆಗೊಳ್ಳಲಿದೆ.

ಅಂದು ನಡೆದದ್ದೇನು?: ಮೇ 29 ರಂದು ಮಧ್ಯಾಹ್ನ 2.30ರ ಸಮಯ ದಲ್ಲಿ ನಾಲ್ವರು ಭಯೋತ್ಪಾದಕರು ಜಮ್ಮು ಕಾಶ್ಮೀರದ ಶೋಫಿಯಾನ್ ಜಿಲ್ಲೆಯ ಮನೆಯೊಂದರಲ್ಲಿ ಅಡಗಿರುವ ಮಾಹಿತಿ ಕಲೆ ಹಾಕಿದ ಭಾರತೀಯ ಸೇನೆ, ಕಾರ್ಯಾಚರಣೆ ಆರಂಭಿಸಿತ್ತು. ರಾಷ್ಟ್ರೀಯ ರೈಫಲ್ಸ್ ಪಡೆಯ 60 ಮಂದಿ ಯೋಧರು ಉಗ್ರರು ಅಡಗಿದ್ದ ಮನೆಯನ್ನು ಸುತ್ತುವರಿದು ಶರಣಾಗುವಂತೆ ಸೂಚಿಸಿದ್ದರು. ಆದರೆ ಉಗ್ರವಾದಿಗಳು ಶರಣಾಗತಿಗೆ ಮುಂದಾಗಲಿಲ್ಲ. ಕಾರ್ಯ ಪ್ರವೃತ್ತರಾದ ಯೋಧರು ಭಯೋತ್ಪಾದಕರ ಸಂಹರಿಸಲು ಮುಂದಾದರು. ಈ ಸಂದರ್ಭ ಭಯೋತ್ಪಾದಕರು ಪ್ರತಿ ದಾಳಿ ನಡೆಸಿದಾಗ ಒಂದು ಗುಂಡು ಹೆಚ್.ಎನ್.ಮಹೇಶ್ ಮುಖಕ್ಕೆ ಬಡಿದಿದೆ. ಬಳಿಕ ಯೋಧರು ಉಗ್ರರು ಅಡಗಿದ್ದ ಮನೆಯನ್ನೇ ಸ್ಫೋಟಿಸುವ ಮೂಲಕ 4 ಮಂದಿ ಭಯೋತ್ಪಾದಕರನ್ನು ಕೊಂದು ಹಾಕಿದ್ದರು. ಗುಂಡೇಟಿನಿಂದ ಮುಖಕ್ಕೆ ಗಂಭೀರ ಗಾಯವಾದರೂ ಯೋಧ ಮಹೇಶ್, ಘಟನಾ ಸ್ಥಳದಿಂದ 200 ಮೀಟರ್ ನಡೆದುಕೊಂಡು ಬಂದು ಬಳಿಕ ತೀವ್ರ ರಕ್ತ ಸ್ರಾವದಿಂದ ಕುಸಿದು ಬಿದ್ದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹೇಶ್ ಅವರನ್ನು ತಕ್ಷಣವೇ ಸೇನಾ ಹೆಲಿಕಾಪ್ಟರ್‍ನಲ್ಲಿ ಶ್ರೀನಗರದ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಅವರನ್ನು ಪಂಜಾಬಿನ ಚಂಡೀಗಢದಲ್ಲಿರುವ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾ ಗಿದ್ದು, ಜೂನ್.3ರಂದು ಪ್ರಜ್ಞೆ ಬಂದಿದೆ. ಜೂನ್.6ರಂದು ಚಂಡೀಗಢದ ಆಸ್ಪತ್ರೆಯಿಂದ ತಮ್ಮ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.

Translate »