ಇಂದಿನಿಂದ ಮೈಸೂರು-ಕೊಡಗು, ಹಾಸನ, ಚಾ.ನಗರ, ಮಂಡ್ಯದಲ್ಲಿ ನಾಮಪತ್ರ ಸಲ್ಲಿಕೆ
ಮೈಸೂರು

ಇಂದಿನಿಂದ ಮೈಸೂರು-ಕೊಡಗು, ಹಾಸನ, ಚಾ.ನಗರ, ಮಂಡ್ಯದಲ್ಲಿ ನಾಮಪತ್ರ ಸಲ್ಲಿಕೆ

March 19, 2019

ಮೈಸೂರು: ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿನ ಮೊದಲ ಹಂತದ ಚುನಾ ವಣೆಗೆ ನಾಳೆ (ಮಾ.19) ಅಧಿಕೃತ ಅಧಿಸೂಚನೆ ಹೊರ ಬೀಳಲಿದೆ. ಮೈಸೂರು ಜಿಲ್ಲಾಧಿಕಾರಿಗಳೂ ಆದ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಮಂಗಳವಾರ ಅಧಿಸೂಚನೆ ಹೊರಡಿಸಲಿದ್ದು, ಇದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿಯ ಮೊದಲ ಮಹಡಿಯ ಕೋರ್ಟ್ ಹಾಲ್ (ನ್ಯಾಯಾ ಲಯ ಸಭಾಂಗಣ)ನಲ್ಲಿ ಚುನಾವಣಾಧಿಕಾರಿ ಕಚೇರಿಯಲ್ಲಿ ಸಿದ್ಧತೆ ಮಾಡಲಾಗಿದ್ದು, ಅಲ್ಲಿಯೇ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಪ್ರತೀ ದಿನ ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಂಗಳವಾರದಿಂದ ನಾಮಪತ್ರ ಗಳನ್ನು ಸ್ವೀಕರಿಸಲಾಗುವುದು. ಮಾರ್ಚ್ 26 ರಂದು ನಾಮಪತ್ರ ಸಲ್ಲಿಸಲು ಕಡೇ ದಿನವಾಗಿದ್ದು, ಮಾರ್ಚ್ 27 ನಾಮಪತ್ರ ಪರಿಶೀಲನೆ ನಡೆಯಲಿದೆ. ಮಾರ್ಚ್ 29 ರಂದು ಉಮೇದುವಾರಿಕೆ ಹಿಂಪಡೆಯಲು ಕಡೇ ದಿನವಾ ಗಿದೆ. ಏಪ್ರಿಲ್ 18 ರಂದು ಮತದಾನ ನಡೆಯಲಿದ್ದು, ಮೇ 23ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ. ಮೇ 27ರಂದು ಚುನಾವಣಾ ಪ್ರಕ್ರಿಯೆ ಅಂತ್ಯ ಗೊಳ್ಳಲಿದ್ದು, ಇದರೊಂದಿಗೆ ನೀತಿ ಸಂಹಿತೆಗೆ ತೆರೆ ಬೀಳ ಲಿದೆ. ಮೈಸೂರು-ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಮಡಿ ಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳು ಬರಲಿವೆ. ಜನವರಿ 1ರ ಮತದಾರ ಪರಿಷ್ಕøತ ಪಟ್ಟಿಯಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 9,30,037 ಮಹಿಳೆಯರು ಸೇರಿದಂತೆ ಒಟ್ಟು 18,57,713 ಮತದಾರರಿದ್ದಾರೆ. ಕೊಡಗಿನ 543 ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು 2,438 ಮತಗಟ್ಟೆ ಗಳನ್ನು ಸ್ಥಾಪಿಸಲಾಗಿದೆ. ಮಡಿಕೇರಿಯಲ್ಲಿ 2,17,188, ವಿರಾಜಪೇಟೆಯಲ್ಲಿ 2,17,068, ಪಿರಿಯಾಪಟ್ಟಣದಲ್ಲಿ 1,81,160, ಹುಣಸೂರಲ್ಲಿ 2,24,061, ಚಾಮುಂಡೇಶ್ವರಿಯಲ್ಲಿ 2,95,990, ಕೆ.ಆರ್‍ನಲ್ಲಿ 2,38,251, ಚಾಮರಾಜದಲ್ಲಿ 2,27,082 ಹಾಗೂ ಎನ್‍ಆರ್ ಕ್ಷೇತ್ರದಲ್ಲಿ 2,56,913 ಮಂದಿ ಮತದಾರರಿದ್ದಾರೆ. ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುವುದರಿಂದ ಚುನಾವಣಾಧಿಕಾರಿ ಅಭಿರಾಂ ಜಿ.ಶಂಕರ್ ಇಂದು 144 ಸೆಕ್ಷನ್ ಜಾರಿಗೊಳ್ಳುವ ಡಿಸಿ ಕಚೇರಿ ಸುತ್ತ ಸ್ಥಳ ಪರಿಶೀಲನೆ ನಡೆಸಿದರು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತುರಾಜ್, ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್ ಹಾಗೂ ಇತರ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

Translate »