ಚಾಮರಾಜನಗರದಿಂದ ಸ್ಪರ್ಧೆ: ಶ್ರೀನಿವಾಸಪ್ರಸಾದ್  ಅಧಿಕೃತ ಘೋಷಣೆ
ಮೈಸೂರು

ಚಾಮರಾಜನಗರದಿಂದ ಸ್ಪರ್ಧೆ: ಶ್ರೀನಿವಾಸಪ್ರಸಾದ್ ಅಧಿಕೃತ ಘೋಷಣೆ

March 19, 2019

ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎನ್ನುವ ಮೂಲಕ ತಮ್ಮ ಸ್ಪರ್ಧೆಯ ಬಗ್ಗೆ ಇದ್ದ ಅನುಮಾನಗಳಿಗೆ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಇಂದು ತೆರೆ ಎಳೆದಿ ದ್ದಾರೆ. ಬೆಂಗಳೂರಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವರಿಷ್ಠ ರೊಂದಿಗೆ ಚರ್ಚೆ ನಡೆಸಿದ ಬಳಿಕ ಸೋಮ ವಾರ ಬೆಳಿಗ್ಗೆ ಮೈಸೂರು-ಚೆನ್ನೈ ಶತಾಬ್ಧಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಮೈಸೂರಿಗೆ ಬಂದಿ ಳಿದ ವಿ.ಶ್ರೀನಿವಾಸಪ್ರಸಾದ್ ರೈಲ್ವೆ ನಿಲ್ದಾಣ ದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಗಳೊಂದಿಗೆ ತಮ್ಮ ಸ್ಪರ್ಧೆಯನ್ನು ಅಧಿಕೃತ ವಾಗಿ ಘೋಷಣೆ ಮಾಡಿದರು.

ಚುನಾವಣಾ ರಾಜಕೀಯದಿಂದ ದೂರ ಸರಿದಿದ್ದ ನನಗೆ ಚಾಮರಾಜನಗರದಿಂದ ನೀವೇ ಸ್ಪರ್ಧಿಸಬೇಕೆಂದು ಕಾರ್ಯಕರ್ತರು ಮತ್ತು ಅಭಿಮಾನಿಗಳ ಒತ್ತಡದ ಹಿನ್ನೆಲೆಯಲ್ಲಿ ಲೋಕಸಭೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾಗಿ ತಿಳಿಸಿದರು. ಲೋಕಸಭಾ ಚುನಾವಣೆಗೆ ನಿಂತು 20 ವರ್ಷಗಳಾಗಿತ್ತು. 2004 ಮತ್ತು 2009ರಲ್ಲೂ ಸ್ಪರ್ಧಿಸಲು ಒತ್ತಾಯ ಬಂದಿ ದ್ದರೂ ಅಂದು ನಿರಾಕರಿಸಿದ್ದೆ. 13 ಚುನಾ ವಣೆಗಳಲ್ಲಿ ಸ್ಪರ್ಧೆ ಮಾಡಿ ಸಾಕಾಗಿತ್ತು. ಈ ಬಾರಿಯೂ ಸ್ಪರ್ಧಿಸುವುದು ಬೇಡ ಎಂದು ದೂರ ಸರಿದಿದ್ದೆ. ಆದರೆ ಅಭಿ ಮಾನಿಗಳು, ಕಾರ್ಯಕರ್ತರ ಒತ್ತಡಕ್ಕೆ ಮಣಿಯಲೇ ಬೇಕಾಯಿತು ಎಂದರು.

ಮಾ.26ರೊಳಗೆ ನಾಮಪತ್ರ ಸಲ್ಲಿಸ ಬೇಕಿದೆ. ಎಲ್ಲರೊಂದಿಗೆ ಮಾತನಾಡಿ ಒಳ್ಳೆಯ ದಿನ ನಾಮಪತ್ರ ಸಲ್ಲಿಸುವುದಾಗಿ ವಿ.ಶ್ರೀನಿವಾಸಪ್ರಸಾದ್ ಹೇಳಿದರು.

ಗೆಲ್ಲಿಸಲಿದ್ದಾರೆಂಬ ವಿಶ್ವಾಸ: ಚಾಮರಾಜ ನಗರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವ ನಾರಾಯಣ್ ನನ್ನ ಶಿಷ್ಯನೇ ಹೌದು. ಅವರ ವಿರುದ್ಧ ಸ್ಪರ್ಧಿಸುತ್ತಿರುವುದು ಪ್ರಜಾ ಪ್ರಭುತ್ವದಲ್ಲಿ ಇವೆಲ್ಲವೂ ಸರ್ವೇ ಸಾಮಾನ್ಯ. ಇಡೀ ಕ್ಷೇತ್ರದ ಜನರು ನನಗೆ ಚಿರಪರಿ ಚಿತರಾಗಿದ್ದಾರೆ. 5 ಬಾರಿ ಸಂಸತ್ ಸದಸ್ಯ ನಾಗಿ, ಎರಡು ಬಾರಿ ಶಾಸಕನಾಗಿ ಜನ ಸೇವೆ ಮಾಡಿರುವ ನನ್ನನ್ನು ಈ ಬಾರಿಯೂ ಚಾಮರಾಜನಗರ ಕ್ಷೇತ್ರದ ಮತದಾರರು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ಹೊಂದಿರು ವುದಾಗಿ ತಿಳಿಸಿದರು.

ಸಂಭ್ರಮದ ಸ್ವಾಗತ: ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಬೆಂಬಲಿಗರು ಹಾರ ಹಾಕಿ, ಹೂಗುಚ್ಛ ನೀಡಿ ಸ್ವಾಗತಿಸಿದರು. ರೈಲಿನಿಂದ ಇಳಿಯುತ್ತಿದ್ದಂತೆ ಅಭಿಮಾನಿ ಗಳು ಜೈಕಾರ ಕೂಗಿ,
ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇ ಗೌಡ, ಮಾಜಿ ಶಾಸಕ ಸಿ.ಗುರುಸ್ವಾಮಿ, ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವೆಂಕಟ ರಮಣಸ್ವಾಮಿ ಪಾಪು, ಸಂತೇಮರಹಳ್ಳಿ ಮಹದೇವಸ್ವಾಮಿ, ಚಾಮರಾಜನಗರ ಜಿಲ್ಲಾ ಎಸ್‍ಸಿ ಮೋರ್ಚಾ ಅಧ್ಯಕ್ಷ ಕೆರೆಹಳ್ಳಿ ಮಹದೇವಸ್ವಾಮಿ, ಜಿಪಂ ಸದಸ್ಯ ಸದಾನಂದ, ಚಾ.ನಗರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಪುಟ್ಟಸುಬ್ಬಪ್ಪ ಇನ್ನಿತರರು ಇದ್ದರು

ದೇಶ, ರಾಜ್ಯದಲ್ಲಿ ಕಾಂಗ್ರೆಸ್ ದುರ್ಬಲ, ಬಿಜೆಪಿ ಪ್ರಬಲ
ಮೈಸೂರು: ಬಿಜೆಪಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡಿದೆ. ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ದುರ್ಬಲವಾಗಿದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ದೇಶದ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಬಾರಿ ಗೆದ್ದಂತಹ ಸ್ಥಾನಗಳನ್ನು ಕಾಂಗ್ರೆಸ್ ಈ ಚುನಾವಣೆಯಲ್ಲಿ ಕಳೆದುಕೊಳ್ಳಲಿದೆ ಎಂದು ಶ್ರೀನಿವಾಸಪ್ರಸಾದ್ ಹೇಳಿದರು.

ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳೊಂದಿಗೆ ಮಾತನಾಡಿ, ಉಪ ಚುನಾ ವಣೆಯ ಸೇಡು ಮುಗಿದಿದೆ. ಸೇಡನ್ನು ತೀರಿಸಿಕೊಂಡಿರುವ ಭಾವನೆ ನನ್ನಲ್ಲಿದೆ. ಉಪ ಚುನಾವಣೆಯಲ್ಲಿ ಮನಸ್ಸಿಗಾದ ನೋವನ್ನು ವಿಧಾನಸಭಾ ಚುನಾವಣೆಯಲ್ಲಿ ತೀರಿಸಿಕೊಂಡಿದ್ದೇನೆ. ಯಾರು ನನ್ನನ್ನು ಮಂತ್ರಿ ಮಂಡಲದಿಂದ ಕೈಬಿಟ್ಟಿದ್ದರೋ ಅವರ ಸ್ಥಿತಿ ಏನಾಗಿದೆ ಎಂದು ನೀವೇ ನೋಡಿದ್ದೀರಿ ಎಂದರು.

ನಾನೇ ಮುಖ್ಯಮಂತ್ರಿ ಎಂದು ತಿರುಗಾಡುತ್ತಿದ್ದವರು 35 ಸಾವಿರ ಮತಗಳಿಂದ ಸೋತರು. ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ರೀತಿ ಸಿದ್ದರಾಮಯ್ಯ ನಡೆದುಕೊಳ್ಳುತ್ತಿದ್ದಾರೆ. ಇದೀಗ ಕುಮಾರಪರ್ವ ಪ್ರಾರಂಭವಾಗಿರುವುದೇ ಸಿದ್ದರಾಮ ಯ್ಯರ ಮೇಲೆ ಎಂದು ಸಿದ್ದರಾಮಯ್ಯ ವಿರುದ್ಧ ಮತ್ತೊಮ್ಮೆ ಕಿಡಿ ಕಾರಿದರು.

ಹೆದರಿ ಓಡಿ ಹೋಗುವುದಿಲ್ಲ: ನಿಮ್ಮ ವಿರುದ್ಧ ವಿರೋಧಿಗಳೆಲ್ಲರೂ ಒಂದಾಗಿದ್ದಾ ರಲ್ಲ ಎಂಬ ಪ್ರಶ್ನೆಗೆ ಎಲ್ಲರೂ ಒಂದಾಗಲಿ ಬಿಡಿ, ಹಾಗೆಂದು ನಾವೆಂದೂ ಹೆದರಿ ಓಡಿ ಹೋಗುವುದಿಲ್ಲ. ಯುದ್ಧಕ್ಕೆ ಹೋಗುತ್ತಿರುವವರು ಎಲ್ಲಾ ಸಿದ್ಧತೆ ಮಾಡಿಕೊಂಡಿ ದ್ದೇವೆ.
ಜನರ ಪ್ರೀತಿ, ವಿಶ್ವಾಸ ಗಳಿಸಿ, ಗೆದ್ದೆ ಗೆಲ್ಲುವ ಆತ್ಮ ವಿಶ್ವಾಸ ನನಗಿದೆ ಎಂದರು.

Translate »