ಎಸ್‍ಟಿ ಗೊಂದಲಕ್ಕೆ ಬಿಜೆಪಿಯಿಂದ ಅಂತಿಮ ತೆರೆ
ಮೈಸೂರು

ಎಸ್‍ಟಿ ಗೊಂದಲಕ್ಕೆ ಬಿಜೆಪಿಯಿಂದ ಅಂತಿಮ ತೆರೆ

April 4, 2019

ಮೈಸೂರು: ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಎಸ್.ಟಿ. ಪ್ರವರ್ಗದಡಿಯಲ್ಲಿ ಸೇರಿಸುವ ಮೂಲಕ ಕಳೆದ ಮೂರು ದಶಕಗಳಿಂದಲೂ ಗೊಂದಲ ಮತ್ತು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದ ನಾಯಕ ಸಮುದಾಯದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾ ರಕ್ಕೆ ಕೃತಜ್ಞತೆ ಸಲ್ಲಿಸುವ ದ್ಯೋತಕವಾಗಿ ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ನಾಯಕ (ವಾಲ್ಮೀಕಿ) ಸಮುದಾಯ ಬೆಂಬಲಿಸ ಬೇಕು ಎಂದು ರಾಜ್ಯ ಬಿಜೆಪಿ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ. ಅಪ್ಪಣ್ಣ ಕರೆ ನೀಡಿದರು.

ಹುಣಸೂರಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಪಾದಯಾತ್ರೆ ನಡೆಸಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಪರ ಮತಯಾಚನೆ ನಡೆಸಿದ ಸಂದರ್ಭದಲ್ಲಿ ನಾಯಕ ಸಮುದಾಯದ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ಪರಿವಾರ ಮತ್ತು ತಳವಾರ ಸಮು ದಾಯಗಳ ಬಹುಕಾಲದ ಬೇಡಿಕೆಯಾಗಿದ್ದ ಎಸ್.ಟಿ. ಪ್ರವರ್ಗಕ್ಕೆ ಅಧಿಕೃತವಾಗಿ ಸೇರ್ಪಡೆ ಗೊಳಿಸುವ ಸಂಬಂಧ ಕೇಂದ್ರ ಸರ್ಕಾರವು ತೆಗೆದುಕೊಂಡಿರುವ ಮಹತ್ವದ ನಿರ್ಣ ಯಕ್ಕೆ ರಾಜ್ಯಸಭೆಯ ಅನುಮೋದನೆ ಮಾತ್ರ ಬಾಕಿ ಉಳಿದಿದ್ದು, ಚುನಾವಣೆಯ ನಂತರ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ನಿಚ್ಚಳವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ಪ್ರತಾಪ್ ಸಿಂಹ ಅವರು ವಾಲ್ಮೀಕಿ ಸಮು ದಾಯದ ಸ್ವಾಮೀಜಿಗಳ ಜೊತೆಗೂಡಿ ನಾನೂ ಸೇರಿದಂತೆ ಇತರ ನಾಯಕರು ನಡೆಸಿದ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿದ್ದ ಪರಿಣಾಮ ಇಂದು ಈ ಸಮಸ್ಯೆ ಪರಿಹಾರದ ಹಂತಕ್ಕೆ ಬರಲು ಸಾಧ್ಯ ವಾಗಿದೆ. ಈ ನಿಟ್ಟಿನಲ್ಲಿ ಪ್ರತಾಪ್ ಸಿಂಹ ಅವರನ್ನು ನಾವೆಲ್ಲರೂ ಬೆಂಬಲಿಸಬೇಕಾ ಗಿದೆ ಎಂದು ಅವರು ಹೇಳಿದರು. ಈ ಹೋರಾಟಕ್ಕೆ ಬೆಂಬಲವಾಗಿ ನಿಂತು ಸೂಕ್ತ ಮಾರ್ಗದರ್ಶನ ಮಾಡಿದ ಹಾಗೂ ಶಿಫಾರಸ್ಸಿಗೆ ಕಾರಣರಾದ ಬಿ.ಎಸ್.ಯಡಿ ಯೂರಪ್ಪ ಅವರಿಗೆ ಶಕ್ತಿ ತುಂಬಲು, ಈ ಬೇಡಿಕೆಯನ್ನು ನಿರ್ಣಾಯಕ ಹಂತಕ್ಕೆ ತಲುಪಿಸಿದ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ನಮ್ಮ ಸಮುದಾಯ ಈ ಬಾರಿಯ ಚುನಾವಣೆಯಲ್ಲಿ ಅವ ರನ್ನು ಬೆಂಬಲಿಸಿ ಮತ ನೀಡಬೇಕಾಗಿದೆ ಎಂದು ಅಪ್ಪಣ್ಣ ಕರೆ ನೀಡಿದರು.

Translate »