ಸರಿದೂಗಿಸಿ 48 ಗಂಟೆಯೊಳಗೆ ಮಾಹಿತಿ ನೀಡಲು ಅಭ್ಯರ್ಥಿಗಳಿಗೆ ನೋಟೀಸ್
ಮೈಸೂರು

ಸರಿದೂಗಿಸಿ 48 ಗಂಟೆಯೊಳಗೆ ಮಾಹಿತಿ ನೀಡಲು ಅಭ್ಯರ್ಥಿಗಳಿಗೆ ನೋಟೀಸ್

April 4, 2019

ಮೈಸೂರು: ವೆಚ್ಚದಲ್ಲಿ ಕಂಡು ಬಂದಿರುವ ವ್ಯತ್ಯಾಸವನ್ನು ಸರಿದೂಗಿಸಿ 48 ಗಂಟೆಯೊಳ ಗಾಗಿ ಮಾಹಿತಿ ನೀಡುವಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಅಭ್ಯರ್ಥಿಗಳಾದ ಸಿ.ಹೆಚ್. ವಿಜಯ ಶಂಕರ್, ಪ್ರತಾಪ್ ಸಿಂಹ ಸೇರಿದಂತೆ 6 ಮಂದಿಗೆ ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಅಭಿರಾಂ ಜಿ. ಶಂಕರ್ ಅವರು ನೋಟೀಸ್ ಜಾರಿ ಮಾಡಿದ್ದಾರೆ. ಎಸ್‍ಯುಸಿಐನ ಪಿ.ಎಸ್. ಸಂಧ್ಯಾ, ಕೆಪಿಪಿಯ ಬಿ.ಕೆ. ಬಿದ್ದಪ್ಪ, ಪಕ್ಷೇತರರಾದ ಆನಂದಕುಮಾರ್, ಬಿ.ಡಿ. ನಿಂಗಪ್ಪ ಸಹ ತಾವು ಮಾಡಿ ರುವ ವೆಚ್ಚದ ಬಗ್ಗೆ ನೀಡಿರುವ ಮಾಹಿತಿಗಳು ವೆಚ್ಚ ವೀಕ್ಷಕರು ನೀಡಿರುವ ಮಾಹಿತಿಗೆ ತಾಳೆ ಯಾಗದಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಅದೇ ರೀತಿ ಬಿಎಸ್‍ಪಿಯ ಬಿ.ಚಂದ್ರ, ಪಕ್ಷೇತರ ರಾದ ಎನ್.ಕೆ. ಕಾವೇರಿಯಮ್ಮ, ಜಿ. ಲೋಕೇಶ್‍ಕುಮಾರ್, ಶ್ರೀನಿವಾಸಯ್ಯ, ರವಿ ಅವರು ಲೆಕ್ಕ ಪರಿವೀಕ್ಷಣೆ ವೇಳೆ ಗೈರು ಹಾಜರಾಗಿದ್ದರಿಂದ 48 ಗಂಟೆ ಲೆಕ್ಕವಹಿಗಳನ್ನು ಹಾಜರುಪಡಿಸದಿದ್ದಲ್ಲಿ ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು ಎಂದು ಅವರಿಗೆ ನೋಟೀಸ್ ನೀಡಿ, ಎಚ್ಚರಿಸಲಾಗಿದೆ. ಮಾರ್ಚ್ 19 ರಿಂದ ಏಪ್ರಿಲ್ 1 ರವರೆಗೆ ಚುನಾವಣೆಗೆ ಸಂಬಂಧಿಸಿದ ಅಭ್ಯರ್ಥಿಗಳ ಖರ್ಚು-ವೆಚ್ಚದ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಲೆಕ್ಕ ಪರಿಶೋಧನೆ ನಡೆಸಲಾಗಿದೆ.

Translate »