ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ
ಹಾಸನ

ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ

July 7, 2018

ಹೊಳೆನರಸೀಪುರ: ಪಟ್ಟಣದ ತಾಲೂಕು ಕಚೇರಿ ಸಮೀಪದ ಪೆಟ್ಟಿಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಇಂದು ಮುಂಜಾನೆ ಸಂಭವಿಸಿದ್ದು, ಅಂದಾಜು 25 ಸಾವಿರ ರೂ. ನಷ್ಟ ಸಂಭವಿಸಿದೆ.

ಪಟ್ಟಣದ ಕಿಕ್ಕೇರಮ್ಮನ ಕೊತ್ತಲು ನಿವಾಸಿಗಳಾದ ಭಾಗ್ಯ, ಶಿವಣ್ಣ ದಂಪತಿ ತಾಲೂಕು ಕಚೇರಿ ಮುಂಭಾಗದಲ್ಲಿ ಹತ್ತಾರು ವರ್ಷದಿಂದ ಪೆಟ್ಟಿಅಂಗಡಿ ಇಟ್ಟು ಕೊಂಡು ಕಾಫಿ-ಟೀ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು. ಈ ವ್ಯವಹಾರವೇ ಜೀವನದ ಆದಾಯದ ಮೂಲವಾಗಿತ್ತು. ಇಂದು ಮುಂಜಾನೆ ಈ ಪೆಟ್ಟಿಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದು, ಅಂಗಡಿ ಸುಟ್ಟು ಕರಕಲಾಗಿದೆ. ವ್ಯಾಪಾರದ ಸರಕು ಬೆಂಕಿಗಾಹುತಿಯಾಗಿದೆ. ಅಂದಾಜು 25 ಸಾವಿರ ರೂ. ನಷ್ಟ ಸಂಭವಿಸಿದ್ದು, ದಂಪತಿಗಳು ಕಂಗಾಲಾಗಿದ್ದಾರೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »