ಮೀನುಗಾರಿಕೆ ಅತ್ಯಂತ ಲಾಭದಾಯಕ ಕೃಷಿ
ಮೈಸೂರು

ಮೀನುಗಾರಿಕೆ ಅತ್ಯಂತ ಲಾಭದಾಯಕ ಕೃಷಿ

June 26, 2019

ಮೈಸೂರು,ಜೂ.25(ಎಂಕೆ)- ಮೀನುಗಾರಿಕೆ ಇಲಾಖೆ ಮೈಸೂರು ವಲಯದ ವತಿಯಿಂದ ಪ್ರಸಕ್ತ ಸಾಲಿನಲ್ಲಿ 11 ಕೋಟಿ ಮೀನುಮರಿಗಳನ್ನು ಉತ್ಪಾದಿಸುವ ಗುರಿ ಹೊಂದಿದ್ದು, ಅತ್ಯಂತ ಲಾಭದಾಯಕ ಮೀನು ಕೃಷಿಯನ್ನು ರೈತರು ಅವಲಂಬಿಸುವಂತೆ ಇಲಾಖೆ ಕೋರಿದೆ.

ವರ್ಷದಿಂದ ವರ್ಷಕ್ಕೆ ಮೀನು ಕೃಷಿ ಮಾಡುವವರ ಸಂಖ್ಯೆ ಹೆಚ್ಚಳದೊಂದಿಗೆ ಬೇಡಿಕೆಯ ಆಧಾರದ ಮೇಲೆ ಕಳೆದ ವರ್ಷಕ್ಕಿಂತ ಈ ಬಾರಿ 3 ಕೋಟಿ ಅಧಿಕ ಮೀನು ಮರಿಗಳನ್ನು ಉತ್ಪಾದಿಸಲು ನಿರ್ಧರಿಸಲಾಗಿದೆ. ಈಗಾಗಲೇ 2.5 ಕೋಟಿ ಮೀನುಮರಿಗಳನ್ನು ಉತ್ಪಾದನೆ ಮಾಡಿ, ಪಾಲನೆ ಮಾಡಲಾಗುತ್ತಿದೆ.

ಮೈಸೂರು ವಲಯದಲ್ಲಿ ಮೀನು ಗಾರಿಕೆ ಇಲಾಖೆಯೊಂದಿಗೆ ಜಿಲ್ಲಾ ಪಂಚಾ ಯತಿ ಒಳಗೊಂಡಂತೆ, ಕೊಡಗು, ಚಾಮ ರಾಜನಗರ, ಮಂಡ್ಯ, ಹಾಸನ ಹಾಗೂ ಮೈಸೂರು ಜಿಲ್ಲೆಯ ಕಬಿನಿ ಕೈಗಾರಿಕೆ ವಸಾಹತು ಪ್ರದೇಶ ಮೀನುಮರಿ ಕೇಂದ್ರ, ಕಬಿನಿ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರ, ಕಬಿನಿ ತರಬೇತಿ ಸಂಸ್ಥೆ, ಕರಿಮುದ್ದನಹಳ್ಳಿ ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರ, ನುಗು ಮೀನುಮರಿ ಪಾಲನಾ ಮತ್ತು ಉತ್ಪಾದನಾ ಕೇಂದ್ರ, ಕೆ.ಆರ್.ನಗರ, ಹುಣಸೂರು ಮತ್ತು ನಂಜನಗೂಡಿನ ನರ್ಸರಿಗಳಲ್ಲಿ ಮೀನುಮರಿಗಳನ್ನು ಉತ್ಪಾದಿಸಿ, ಪಾಲನೆ ಮಾಡಲಾಗುತ್ತಿದೆ.

ಮೀನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ: ಕಾಲಕಾಲಕ್ಕೆ ಮಳೆ ಇಲ್ಲದೆ. ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಕಂಗಾಲಾಗುವ ರೈತರಿಗೆ ಮೀನುಗಾರಿಕೆ ವರದಾನವಾಗಿದೆ. ಸಾಂಪ್ರದಾಯಿಕ ಕೃಷಿ ಯಾದ ಭತ್ತ, ಕಬ್ಬು ಮತ್ತು ರಾಗಿ ಇತ್ಯಾದಿ ಕೃಷಿಗಳಿಗಿಂತ ಮೀನುಕೃಷಿ ಲಾಭದಾಯಕ ಹಾಗೂ ಸುಲಭ ಕೃಷಿ ಪದ್ಧತಿಯಾಗಿದೆ.

ಮೀನುಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿ ವತಿಯಿಂದ ಮೀನುಗಾರಿಕೆಗೆ ಅನುಕೂಲವಾಗುವಂತೆ ವಿವಿಧ ಯೋಜನೆಗಳ ಮೂಲಕ ಸಹಾಯ ಧನ ನೀಡಲಾಗುತ್ತದೆ. ಕೃಷಿಗೆ ಯೋಗ್ಯವಲ್ಲದ ಚೌಗು, ಚೌಳು ಭೂಮಿ ಹಾಗೂ ನೀರು ನಿಲ್ಲುವ ಭತ್ತದ ಗದ್ದೆಗಳಲ್ಲಿ ಜತೆಗೆ ನೀರಾ ವರಿ ಕಾಲುವೆ ಅಕ್ಕ ಪಕ್ಕದಲ್ಲಿ ಮೀನು ಕೃಷಿ ಕೊಳಗಳನ್ನು ನಿರ್ಮಾಣ ಮಾಡಲು ಶೇ.40ರಷ್ಟು ಸಹಾಯ ಧನ ನೀಡಲಾಗು ತ್ತದೆ. ಜತೆಗೆ ಮೀನು ಕೃಷಿಗೆ ನಿರ್ಮಾಣ ಮಾಡಿದ ಕೊಳದ ವಿಸ್ತೀರ್ಣಕ್ಕೆ ಅನು ಸಾರವಾಗಿ ಮೀನಿನ ಮರಿಗಳನ್ನು ಉಚಿತವಾಗಿ ನೀಡಲು ಮೀನುಗಾರಿಕೆ ಇಲಾಖೆ ಮುಂದಾಗಿದೆ.

ಇಲಾಖೆ ವ್ಯಾಪ್ತಿಗೆ ಬರುವ ಕೆರೆಗಳನ್ನು ಗುತ್ತಿಗೆ ನೀಡುವ ಮೂಲಕ ಮೀನುಗಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತದೆ. ಜತೆಗೆ ನಗರ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ ಮೀನು ಮಾರಾಟ ಕೇಂದ್ರಗಳ ಸ್ಥಾಪನೆಗೂ ಇಲಾಖೆ ಆದ್ಯತೆಯನ್ನು ನೀಡಿದೆ. ರೈತರಿಗೆ ಮೀನು ಮರಿಗಳ ಪೂರೈಕೆಗೆ ಅಗತ್ಯವಾಗುವಂತೆ ತಾಲೂಕು ಮಟ್ಟದ ಕಚೇರಿಗಳಲ್ಲಿ ಮೀನು ಮರಿಗಳ ಪಾಲನೆ ಮಾಡಲಾಗುತ್ತಿದೆ.

ಮೀನು ತಿನ್ನಿ ಆರೋಗ್ಯವಂತರಾಗಿ: ಮಾಂಸ ಪ್ರಿಯರಿಗೆ ಮೀನು ಅತ್ಯುತ್ತಮ ಆಹಾರವಾಗಿದ್ದು, ಒಮೇಗಾ 3 ಕೊಬ್ಬಿ ನಾಂಶದೊಂದಿಗೆ ಶೇ.18 ರಿಂದ 23 ರಷ್ಟು ಪ್ರೋಟಿನ್ ಒಳಗೊಂಡಿದೆ. ಜತೆಗೆ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾ ಯಕವಾಗಿದೆ. ಕೋಳಿ, ಕುರಿ ಮಾಂಸಕ್ಕಿಂತ ಸಿಹಿನೀರಿನ ಮೀನು ತಳಿಗಳಾದ ಕಾಟ್ಲಾ, ರೋಹು, ಮೃಗಾಲ್, ಸಾಮಾನ್ಯ ಗೆಂಡೆ, ಹುಲ್ಲು ಗೆಂಡೆ ಹಾಗೂ ಬೆಳ್ಳಿ ಗೆಂಡೆ ಉತ್ತಮ ಆಹಾರವಾಗಿದೆ. ವೈಜ್ಞಾನಿಕ ಮೀನು ಪಾಲನೆ ಯಿಂದ ಗ್ರಾಮೀಣ ಜನತೆಯ ಪೌಷ್ಟಿಕ ಅಹಾರದ ಕೊರತೆ ಹಾಗೂ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.

Translate »