ಮೈಸೂರು, ಆ.29(ಎಂಟಿವೈ)- ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಗುರುವಾರ ಬೆಳಿಗ್ಗೆ ಮೈಸೂರಿನಲ್ಲಿ ನೆಹರು ಯುವ ಕೇಂದ್ರ ಆಯೋಜಿಸಿದ್ದ `ಫಿಟ್ ಇಂಡಿಯಾ’ ಟ್ರಯಥ್ಲಾನ್‍ನಲ್ಲಿ ನೂರಾರು ಮಂದಿ ಪಾಲ್ಗೊಂಡು ಗಮನ ಸೆಳೆದರು.
ಅರಮನೆಯ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಗುರುವಾರ ಬೆಳಿಗ್ಗೆ ನೆಹರು ಯುವ ಕೇಂದ್ರ, ಕ್ರೀಡಾ ಮತ್ತು ಯುವ ಜನ ಸಬಲೀಕರಣ ಇಲಾಖೆ, ರೋಟರಿ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಟ್ರಯಥ್ಲಾನ್‍ಗೆ ಚಾಲನೆ ದೊರೆಯಿತು.
ಬಳಿಕ ಯುವಕ-ಯುವತಿಯರು ಸೈಕಲ್ ಏರಿ ಚಾಮುಂಡಿಬೆಟ್ಟದ ತಪ್ಪಲವರೆಗೂ ತೆರಳಿದರು. ಬಳಿಕ ಎಲ್ಲಾ ಸೈಕಲ್‍ಗಳನ್ನು ತಪ್ಪಲಿನಲ್ಲಿ ನಿಲ್ಲಿಸಿ ಟ್ರಕ್ಕಿಂಗ್ ಮಾರ್ಗದಲ್ಲಿ ಬೆಟ್ಟ ಹತ್ತಿದರು. ನಂತರ ಮೆಟ್ಟಿಲುಗಳ ಮೂಲಕ ಬೆಟ್ಟ ಇಳಿದರು. ಮತ್ತೆ ತಾವು ಬಂದಿದ್ದ ಸೈಕಲ್‍ಗಳಲ್ಲಿ ಗಂಗೋತ್ರಿ ಬಡಾ ವಣೆಯಲ್ಲಿರುವ ಯೂತ್ ಹಾಸ್ಟಲ್‍ಗೆ ತೆರಳಿ ಟ್ರಯಥ್ಲಾನ್ ಸಮಾಪ್ತಿಗೊಳಿಸಿದರು. ಕೇಂದ್ರ ಸರ್ಕಾರ ರಾಷ್ಟ್ರೀಯ ಕ್ರೀಡಾ ದಿನದ ಹಿನ್ನೆಲೆಯಲ್ಲಿ ಇಂದು ದೇಶದೆಲ್ಲೆಡೆ `ಫಿಟ್ ಇಂಡಿಯಾ’ ಕಾಯಕ್ರಮ ಆಯೋಜಿಸಿ ಯುವ ಜನರ ದೈಹಿಕ ಕಾರ್ಯಕ್ಷಮತೆಗೆ ವಿನೂತನ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಉತ್ತಮ ಪ್ರತಿ ಕ್ರಿಯೆ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ, ಯುವಜನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್, ಮೈಸೂರು ವಿವಿ ಎನ್‍ಎಸ್‍ಎಸ್ ಅಧಿಕಾರಿ ಡಾ.ಚಂದ್ರಶೇಖರ್, ರೋಟರಿ ಸಂಸ್ಥೆ ಗೌವ ರ್ನರ್ ನಾಗರಾಜು, ಅಡ್ವೆಂಚರ್ ಸ್ಪೋಟ್ರ್ಸ್ ಸಂಸ್ಥೆ ಮುಖ್ಯಸ್ಥೆ ರುಕ್ಮಿಣಿ ಇತರರಿದ್ದರು.