ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
ಮೈಸೂರು

ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

August 30, 2019

ಮೈಸೂರು, ಆ.29(ಪಿಎಂ)- ತಮಿಳು ನಾಡಿನ ವೇದಾರಣ್ಯಂ ಪಟ್ಟಣದಲ್ಲಿ ಡಾ.ಬಿ. ಆರ್.ಅಂಬೇಡ್ಕರ್ ಅವರ ಪ್ರತಿಮೆ ಧ್ವಂಸ ಗೊಳಿಸಿದ ದುಷ್ಕರ್ಮಿಗಳನ್ನು ಗಡಿಪಾರು ಮಾಡಿ, ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರು ವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಪುರಭವನದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ತಮಿಳು ನಾಡಿನ ನಾಗಪಟ್ಟಣಂ ಜಿಲ್ಲೆಯ ವೇದಾ ರಣ್ಯಂ ಪಟ್ಟಣದಲ್ಲಿ ಕಿಡಿಗೇಡಿಗಳು ಹಾಡ ಹಗಲೇ ಸಾರ್ವಜನಿಕರ ಎದುರಿನಲ್ಲೇ ಉದ್ದೇಶ ಪೂರ್ವಕವಾಗಿ ಡಾ.ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ್ದಾರೆ. ಅಲ್ಲದೆ, ಪ್ರತಿಮೆ ಭಗ್ನಗೊಳಿಸಿದ ವಿಡಿಯೋ ಚಿತ್ರೀಕರಿಸಿ ಪೈಶಾಚಿಕತೆ ಮೆರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುಷ್ಕರ್ಮಿಗಳ ಈ ಕೃತ್ಯದಿಂದ ಅಂಬೇ ಡ್ಕರ್ ಅವರ ಮೇರು ವ್ಯಕ್ತಿತ್ವಕ್ಕೇನು ಧಕ್ಕೆಯಾ ಗುವುದಿಲ್ಲ. ಇಂತಹ ವಿಕೃತ ಮನಸ್ಸಿನವರು ಅಂಬೇಡ್ಕರ್ ಅವರ ಬಾಹ್ಯ ಪ್ರತಿಮೆ ನಾಶ ಪಡಿಸಬಹುದೇ ಹೊರತು ಅಸಂಖ್ಯಾತ ಶೋಷಿತರ ಮನದಲ್ಲಿ ನೆಲೆಯೂರಿರುವ ಅಂಬೇಡ್ಕರ್ ಅವರನ್ನು ಎಂದೆಂದಿಗೂ ಅಳಿಸ ಲಾಗದು. ಆದಾಗ್ಯೂ ಈ ಘಟನೆಯಿಂದ ದಲಿತ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ಯುಂಟಾಗಿದೆ. ರಾಷ್ಟ್ರ ನಾಯಕರನ್ನು ಅಪ ಮಾನಿಸುವವರ ವಿರುದ್ಧ ಶಿಕ್ಷೆ ನಿಗದಿಗೊಳಿ ಸುವ ಸಂಬಂಧ ಸಂಸತ್ತಿನಲ್ಲಿ ವಿಶೇಷ ಕಾಯ್ದೆ ಮಂಡಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಇತ್ತೀಚೆಗೆ ತೆಲಂಗಾಣ ರಾಜ್ಯದ ರಂಗಾ ರೆಡ್ಡಿ ಜಿಲ್ಲೆಯ ಇಬ್ರಾಹ್ಮಿಂಪಟ್ನಂ ಮಂಡಲ ವ್ಯಾಪ್ತಿಯ ಥರ್ಕಾಗುಡ ಎಂಬಲ್ಲಿ ಉತ್ಸವ ವೊಂದರ ವೇಳೆ ಅಲ್ಲಿನ ಗ್ರಾಮ ದೇವತೆಗೆ ಪಂಚಾಯಿತಿ ಅಧ್ಯಕ್ಷರು ತೆಂಗಿನಕಾಯಿ ಅರ್ಪಿಸುವ ವಾಡಿಕೆ ಇದೆ. ಅದರಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ದಲಿತ ಸಮು ದಾಯದ ಮಹಿಳೆ ತೆಂಗಿನಕಾಯಿ ಅರ್ಪಿಸಲು ಹೋದಾಗ ಆಕೆ ಮತ್ತು ಆಕೆಯ ಪತಿ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದಾರೆ. ದೌರ್ಜನ್ಯ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲೂ ಬೆಂಗಳೂರು ದಕ್ಷಿಣ ಲೋಕ ಸಭಾ ವ್ಯಾಪ್ತಿಯಲ್ಲಿ ಶಾಲಾ ಸಿಬ್ಬಂದಿ ದಲಿತ ವರ್ಗಕ್ಕೆ ಸೇರಿದ ಶಿಕ್ಷಕಿಯನ್ನು ಶಾಲೆಯೊ ಳಗೆ ಸೇರಿಸದೇ ಅಸ್ಪøಶ್ಯತಾಚರಣೆ ಮಾಡಿ ದ್ದಾರೆ. ಅಲ್ಲದೆ, ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ಯಲ್ಲಿ ಸವರ್ಣೀಯರು ವಾಸಿಸುವ ಬೀದಿ ಯಲ್ಲಿ ಗ್ರಾಮದೇವತೆ ಹಬ್ಬವಿರುವ ಹಿನ್ನೆಲೆ ಯಲ್ಲಿ ದಲಿತ ಸಮುದಾಯದವರು ಓಡಾಡು ವಂತಿಲ್ಲ ಎಂದು ನಿರ್ಬಂಧ ಹೇರಲಾಗಿದೆ. ದೇಶಾದ್ಯಂತ ಇಂತಹ ಕಾನೂನು ಬಾಹಿರ, ಅಮಾನವೀಯ ಪ್ರಕರಣಗಳು ನಡೆಯು ತ್ತಿದ್ದು, ಕೇಂದ್ರ ಸರ್ಕಾರ ಇದನ್ನು ಗಂಭೀರ ವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾ ಯಿಸಿದರು. ಪ್ರಗತಿಪರ ಚಿಂತಕ ಪ್ರೊ. ಮಹೇಶ್ ಚಂದ್ರ ಗುರು, ಎಸ್‍ಡಿಪಿಐನ ದೇವ ನೂರು ಪುಟ್ಟನಂಜಯ್ಯ, ವಕೀಲ ಪಡು ವಾರಹಳ್ಳಿ ಎಂ.ರಾಮಕೃಷ್ಣ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಶಿವಣ್ಣ, ಜಿಲ್ಲಾ ಸಂಘಟನಾ ಸಂಚಾಲಕ ಕೆ.ವಿ.ದೇವೇಂದ್ರ, ಸಂಘಟನೆ ಮುಖಂಡರಾದ ಸಣ್ಣಯ್ಯ, ಸೋಮನಾಯಕ ಪ್ರತಿಭಟನೆಯಲ್ಲಿದ್ದರು.

Translate »