ಸೆ.22ರಂದು ಸೆಲೆಬ್ರೇಷನ್ ಮೈಸೂರು ಮ್ಯಾರಥಾನ್
ಮೈಸೂರು

ಸೆ.22ರಂದು ಸೆಲೆಬ್ರೇಷನ್ ಮೈಸೂರು ಮ್ಯಾರಥಾನ್

August 30, 2019

ಮೈಸೂರು, ಆ.29(ಆರ್‍ಕೆಬಿ)- ಲೈಫ್ ಈಸ್ ಕಾಲಿಂಗ್ ಸಂಸ್ಥೆಯು ಸೆ.22 ರಂದು ಸೆಲೆಬ್ರೇಷನ್ ಮೈಸೂರು ಮ್ಯಾರ ಥಾನ್ 9ನೇ ಆವೃತ್ತಿಯನ್ನು ಹಮ್ಮಿ ಕೊಂಡಿದೆ. ಅಂದು ಮುಂಜಾನೆ 4.45 ಗಂಟೆಗೆ ಮೈಸೂರು ಅರಮನೆಯ ಬಲ ರಾಮ ಗೇಟ್ ಬಳಿ ಮ್ಯಾರಥಾನ್‍ಗೆ ಚಾಲನೆ ದೊರೆಯಲಿದೆ.

42 ಕಿ.ಮೀನ ಪೂರ್ಣ ಮ್ಯಾರಥಾನ್, 30 ಕಿ.ಮೀ. ಓಟ, 21 ಕಿ.ಮೀ. ಅರ್ಧ ಮ್ಯಾರಥಾನ್ ಹಾಗೂ 16 ಮತ್ತು ಅದ ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ 10 ಕಿ.ಮೀ. ಓಟವಿದ್ದು, 11 ವಯಸ್ಸಿನ ಮೇಲ್ಪಟ್ಟ ಓಟ ಗಾರರಿಗೆ ಕೋಟಕ್ 5 ಕಿಮೀ. ಓಟ ಏರ್ಪಡಿಸಲಾಗಿದೆ ಎಂದು ಜಿಎಸ್‍ಎಸ್ ಯೋಗ ಸಂಸ್ಥೆಯ ಶ್ರೀಹರಿ ಗುರುವಾರ ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಮ್ಯಾರಥಾನ್‍ಗೆ ದೇಶದ ವಿವಿ ಧೆಡೆಯಿಂದಲೂ ಸ್ಪರ್ಧಿಗಳನ್ನು ನಿರೀಕ್ಷಿಸ ಲಾಗಿದ್ದು, ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸುವುದರೊಂದಿಗೆ ಆರೋಗ್ಯ ಜೀವನ ದೆಡೆಗೆ ಸಾಗಲು ಸಹಾಯಕವಾಗುತ್ತದೆ. ಸೈನಿಕರಿಗೆ ನಮನ ಮತ್ತು ಹಸಿರು ಮೈಸೂರು ಪರಿಕಲ್ಪನೆಯಡಿ ಈ ಮ್ಯಾರಥಾನ್ ಏರ್ಪ ಡಿಸಲಾಗಿದೆ ಎಂದರು.

ಅಂದಿನ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮ ರಾಜ ಒಡೆಯರ್, ಖ್ಯಾತ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಖ್ಯಾತ ಅಥ್ಲೀಟ್ ರೀತ್ ಅಬ್ರಹಾಂ ಹಾಗೂ ಇನ್ನಿತರ ಗಣ್ಯ ರನ್ನು ಆಹ್ವಾನಿಸಲಾಗುವುದು ಎಂದರು.

`ಮೈಸೂರು ಮಿತ್ರ’ ಮತ್ತು `ಸ್ಟಾರ್ ಆಫ್ ಮೈಸೂರ್’, ಸೈಕಲ್ ಪ್ಯೂರ್ ಅಗರಬತ್ತಿ, ಲೆಟ್ಸ್ ಡೂ ಇಟ್ ಮೈಸೂರು, ಅಪೋಲೋ ಬಿಜಿಎಸ್ ಆಸ್ಪತ್ರೆ, ಡೆಕಥಾನ್, ಮಸ್ತ್ ಮೈಸೂರು ಡಾಟ್‍ಕಾಮ್, ಮಲ್ಟಿ ಫಿಟ್, ರೆಡ್ ಎಫ್‍ಎಂ, ಸೈಕ್ಲಿಂಗ್ ಕ್ಲಬ್, ಜಯ ನಗರ ಜಾಗ್ವಾರ್ಸ್, ಬರ್ನರ್ಸ್, ಟ್ರಯಲ್ ಬ್ಲೇಜರ್ಸ್ ಈ ಮ್ಯಾರಥಾನ್‍ನ ಭಾಗೀ ದಾರರಾಗಿದ್ದಾರೆ. ಗೋಷ್ಠಿಯಲ್ಲಿ ರನ್ನರ್ ಐಕಾನ್ ಡಾ.ಉಷಾ ಹೆಗ್ಡೆ, ಕೋಟಕ್ ಮಹೇಂದ್ರ ಬ್ಯಾಂಕ್‍ನ ಗಫಾರ್, ಥಾಟ್ ಫೋಕಸ್‍ನ ಹೇಮಂತ್, ಡಾ.ಉಷಾ ಹೆಗ್ಡೆ, ಅರಿಸ್ ಗ್ಲೋಬಲ್‍ನ ಶ್ರೀರಾಂ, ಅಪೋಲೋ ಬಿಜಿಎಸ್ ಆಸ್ಪತ್ರೆಯ ಡಾ.ಸತೀಶ್ ಇತರರು ಉಪಸ್ಥಿತರಿದ್ದರು. ಆಸಕ್ತರು ಆನ್‍ಲೈನ್‍ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದ್ದು, www.eventzalley.com, ಮೊ: 9606622006 ಸಂಪರ್ಕಿಸಬಹುದು.

Translate »