ಸರೋದ್ ವಾದಕ ಪಂ.ರಾಜೀವ್ ತಾರಾನಾಥ ಅವರಿಗೆ ಸೆ.1ರಂದು ಅಭಿನಂದನಾ ಕಾರ್ಯಕ್ರಮ
ಮೈಸೂರು

ಸರೋದ್ ವಾದಕ ಪಂ.ರಾಜೀವ್ ತಾರಾನಾಥ ಅವರಿಗೆ ಸೆ.1ರಂದು ಅಭಿನಂದನಾ ಕಾರ್ಯಕ್ರಮ

August 30, 2019

ಮೈಸೂರು, ಆ.29(ಆರ್‍ಕೆಬಿ)- ಪದ್ಮಶ್ರೀ ಪುರಸ್ಕøತ ಅಂತಾ ರಾಷ್ಟ್ರೀಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಸೆ.1ರಂದು ಸಂಜೆ 5.30 ಗಂಟೆಗೆ ಮೈಸೂರಿನ ಮಾನಸ ಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗ ಣದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಂ.ರಾಜೀವ್ ತಾರಾನಾಥ್ ಅಭಿನಂದನಾ ಸಮಿತಿಯ ಟ್ರಸ್ಟಿ ಪ್ರೊ.ವಿ.ಕೆ.ನಟರಾಜ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‍ರಿಂದ ಅಭಿನಂದನಾ ನುಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತರೂ ಆಗಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅಭಿನಂದನಾ ಭಾಷಣ ಮಾಡುವರು. ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಅತಿಥಿಯಾಗಿ ಭಾಗ ವಹಿಸುವರು ಎಂದರು. ಇದೇ ಸಂದರ್ಭ ದಲ್ಲಿ ವಿದ್ವಾನ್ ಮೈಸೂರು ಎಂ.ನಾಗರಾಜ್, ವಿದ್ವಾನ್ ಮೈಸೂರು ಎಂ.ಮಂಜುನಾಥ್ ಅವರಿಂದ ಸಂಗೀತ ಕಚೇರಿ ನಡೆಸಿಕೊಡಲಿ ದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಪದಾಧಿಕಾರಿ ಗಳಾದ ಕೃಷ್ಣಾ ಮನವಲ್ಲಿ, ಎನ್.ಎಸ್.ಆನಂದ್ ಉಪಸ್ಥಿತರಿದ್ದರು.

Translate »