ಮೈಸೂರು, ಆ.29- ದಸರಾ ಮಹೋತ್ಸವ ಅಂಗವಾಗಿ ಆಹಾರ ಮೇಳವನ್ನು ಸೆ.29ರಿಂದ ಅ.16ರವರೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಮತ್ತು ಲಲಿತ ಮಹಲ್ ಪ್ಯಾಲೆಸ್ ಹೋಟೆಲ್ ಪಕ್ಕದ ಮುಡಾ ಮೈದಾನಗಳಲ್ಲಿ ಆಯೋಜಿಸಲಾಗಿದೆ. ಆಹಾರ ಮೇಳದಲ್ಲಿ ಸಾರ್ವಜನಿಕರ ಮನರಂಜನೆಗಾಗಿ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲು ಸ್ಥಳೀಯ ಮತ್ತು ವಿವಿಧ ಜಿಲ್ಲೆಗಳ ವಿವಿಧ ವರ್ಗಗಳ ನುರಿತ ಕಲಾವಿದ ರಿಂದ ಅರ್ಜಿ ಆಹ್ವಾನಿಸಿದೆ. ಪ್ರತಿದಿನ ಸಂಜೆ 5.30ರಿಂದ ರಾತ್ರಿ 10 ಗಂಟೆವರೆಗೆ ಕಾರ್ಯ ಕ್ರಮ ನಡೆಯಲಿದ್ದು, ಭಾಗವಹಿಸಲು ಇಚ್ಛಿಸುವ ಕಲಾವಿದರು ಪೂರ್ಣ ವಿಳಾಸ, ಅಗತ್ಯ ದಾಖಲಾತಿಗಳೊಂದಿಗೆ ಸೆ.16ರ ಸಂಜೆ 5 ಗಂಟೆಯೊಳಗೆ ಹೊಸ ಡಿಸಿ ಕಚೇರಿ ಸಂಕೀರ್ಣ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮೈಸೂರು 2ನೇ ಮಹಡಿ ರೂಂ.ನಂ 34 ರಲ್ಲಿ ವಸಂತಕುಮಾರಿ ಮತ್ತು ವಿದ್ಯಾರಮೇಶ್ ಇವರಿಗೆ ಅರ್ಜಿಯನ್ನು ಸಲ್ಲಿಸುವುದು. ಮಾಹಿತಿಗೆ ಇ-ಮೇಲ್ ಐಡಿ ddfoodmysore @gmail.com ಅಥವಾ ದೂ.ಸಂ. 0821-2422107ಗೆ ಸಂಪರ್ಕಿಸಬಹುದು.