ಪ್ರತ್ಯೇಕ ಪ್ರಕರಣಗಳಲ್ಲಿ ಐವರ ದುರಂತ ಸಾವು
ಮಂಡ್ಯ

ಪ್ರತ್ಯೇಕ ಪ್ರಕರಣಗಳಲ್ಲಿ ಐವರ ದುರಂತ ಸಾವು

September 20, 2018

ಮಂಡ್ಯ: ಜಿಲ್ಲೆಯ ವಿವಿಧೆಡೆ ಬುಧವಾರ ಸಂಭವಿಸಿದ ಪ್ರತ್ಯೇಕ ಅಪಘಾತ, ಆತ್ಮಹತ್ಯೆ ಹಾಗೂ ಅನಾಹುತ ಪ್ರಕರಣ ಗಳಲ್ಲಿ ಐವರು ಸಾವನ್ನಪ್ಪಿದ್ದು, ಓರ್ವ ಗಾಯ ಗೊಂಡಿದ್ದಾನೆ. ಮಳವಳ್ಳಿ ತಾಲೂಕು ವ್ಯಾಪ್ತಿ ಯಲ್ಲಿ ನವದಂಪತಿ ಆತ್ಮಹತ್ಯೆ ಮಾಡಿ ಕೊಂಡರೆ, ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಶ್ರೀರಂಗಪಟ್ಟಣ ಹಾಗೂ ಮಂಡ್ಯ ತಾಲೂಕು ವ್ಯಾಪ್ತಿಯಲ್ಲಿ ಇಬ್ಬರು ಯುವಕರು ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಅಪಘಾತದಲ್ಲಿ ಓರ್ವ ಸಾವು: ಮಳವಳ್ಳಿ ಬಳಿ ಬೈಕ್‍ಗೆ ಕಾರು ಡಿಕ್ಕಿ ಹೊಡೆದ ಪರಿ ಣಾಮ ಶ್ರೀರಂಗಪಟ್ಟಣದ ತಾಲೂಕಿನ ತಡಗವಾಡಿಯ ಕಿರಣ್(25) ಮೃತಪಟ್ಟಿ ದ್ದಾನೆ. ಸೀಹಳ್ಳಿ ನಿವಾಸಿ ಭಾಸ್ಕರ್(27) ತೀವ್ರವಾಗಿ ಗಾಯಗೊಂಡಿದ್ದು, ಮಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಇಬ್ಬರು ಕಟ್ಟಡ ಕಾರ್ಮಿಕರಾಗಿದ್ದು ಭಾರತೀನಗರದ ಕಡೆಯಿಂದ ಮಳವಳ್ಳಿಗೆ ಬರುತ್ತಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆÉ. ಭಾಸ್ಕರ್‍ಗೆ ತೀವ್ರ ಗಾಯಗಳಾಗಿದೆ. ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನವದಂಪತಿ ಆತ್ಮಹತ್ಯೆ: ಜೀವನದಲ್ಲಿ ಜಿಗುಪ್ಸೆಗೊಂಡು ನವದಂಪತಿ ನೇಣಿಗೆ ಶರಣಾದ ಘಟನೆ ಮಳವಳ್ಳಿ ತಾಲೂಕಿನ ಅಂಚೆದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮಂಡ್ಯ ತಾಲೂಕು ಹೆಬ್ಬಕವಾಡಿ ಗ್ರಾಮದ ನವೀನ್(25) ಹಾಗೂ ಇದೇ ಗ್ರಾಮದ ಅಶ್ವಿನಿ(21) ಪರಸ್ಪರ ಪ್ರೀತಿಸಿ ಕಳೆದ 20 ದಿನಗಳ ಹಿಂದಷ್ಟೆ (ವರಮಹಾಲಕ್ಷ್ಮಿ ಹಬ್ಬದ ದಿನದಂದು) ಪೆÇೀಷಕರ ವಿರೋಧದ ನಡುವೆ ಮದುವೆಯಾಗಿದ್ದರು. ನಂತರ ಮಳವಳ್ಳಿ ತಾಲೂಕಿನ ಅಂಚೆದೊಡ್ಡಿ ಗ್ರಾಮದ ನವೀನ್ ಅವರ ಅಜ್ಜಿ ಮನೆಯಲ್ಲಿ ವಾಸವಾಗಿದ್ದರು. ಜಿಗುಪ್ಸೆಯಿಂದ ಅವರು ಬುಧವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನಮ್ಮ ಸಾವಿಗೆ ನಾವೇ ಕಾರಣವೆಂದು ಪತ್ರ ಬರೆದಿಟ್ಟು ಮನೆಯ ಸೂರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಗೆ ನವೀನ್ ಅವರ ತಾತ- ಅಜ್ಜಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಪೆÇಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕರು ನೀರು ಪಾಲು: ಗಣೇಶ ವಿಸರ್ಜನೆ ವೇಳೆ ಇಬ್ಬರು ಯುವಕರು ನೀರುಪಾಲಾಗಿದ್ದಾರೆ.
ಮಂಡ್ಯ ನಗರದ ನಿವಾಸಿ ವರುಣ್(20), ಶ್ರೀರಂಗಪಟ್ಟಣ ತಾಲೂಕಿನ ಶ್ರೀರಾಮಪುರ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದು, ಆ ಗ್ರಾಮದಲ್ಲಿ ನಡೆದ ಗಣೇಶ ಉತ್ಸವದಲ್ಲಿ ಪಾಲ್ಗೊಂಡಿದ್ದಾನೆ. ಗಣಪತಿ ವಿಸರ್ಜನೆ ವೇಳೆ ನಾಲೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಲೆಯಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿ: ಮತ್ತೊಂದು ಪ್ರಕರಣದಲ್ಲಿ ಮಂಡ್ಯ ತಾಲೂಕಿನ ಸುಂಡಹಳ್ಳಿ ಬಳಿ ವಿಶ್ವೇಶ್ವರಯ್ಯ ನಾಲೆಯಲ್ಲಿ ವಿದ್ಯಾರ್ಥಿ ಕೊಚ್ಚಿ ಹೋಗಿದ್ದಾನೆ. ಕಾವೇರಿ ಇನ್ಸಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ, ಶಿವಳ್ಳಿ ಗ್ರಾಮದ ಪ್ರಜ್ವಲ್ (23) ದುರಂತ ಸಾವಿಗೀಡಾದ ವಿದ್ಯಾರ್ಥಿ. ಕಾಲೇಜಿನಲ್ಲಿ ಸ್ಥಾಪಿಸಿದ್ದ ಗಣೇಶ ವಿಸರ್ಜನೆಗಾಗಿ ನಾಲೆಗೆ ಪ್ರಜ್ವಲ್ ತೆರಳಿದ್ಧಾಗ ಘಟನೆ ನಡೆದಿದ್ದು, ಬನ್ನೂರು ಬಳಿ ಈತನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »