ಮೈಸೂರು ವಿವಿಧೆಡೆ ಮನೆಗಳಿಗೆ ನುಗ್ಗಿದ ನೀರು
ಮೈಸೂರು

ಮೈಸೂರು ವಿವಿಧೆಡೆ ಮನೆಗಳಿಗೆ ನುಗ್ಗಿದ ನೀರು

August 10, 2019

ಮೈಸೂರು, ಆ.9(ಎಸ್‍ಪಿಎನ್)-ಮೈಸೂರು ನಗರದಲ್ಲಿ ಎಡಬಿಡದೇ ಸುರಿ ಯುತ್ತಿರುವ ಮಳೆಗೆ ನಗರದ ವಿವಿಧ ಬಡಾ ವಣೆಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ.

ಮಂಡಿಮೊಹಲ್ಲಾದ ನಿವಾಸಿ ಅಕ್ರಂ ಪಾಷ, ಶ್ರೀರಾಂಪುರ 2ನೇ ಹಂತದ ನಿವಾಸಿ ಮಹೇಶ್, ಉದಯಗಿರಿಯ ಆದಿಲ್ ಪಾಷ, ಎನ್.ಆರ್.ಮೊಹಲ್ಲಾದ ಮಂಚಲಿಂ ಗಯ್ಯ, ಜಲಪುರಿಯ ಹರೀಶ್, ಗಾಯತ್ರಿ ಪುರಂ ನಿವಾಸಿ ನರಸಿಂಹಯ್ಯ ಅವರ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಮೈಸೂರು ನಗರಪಾಲಿಕೆ ಕಂಟ್ರೋಲ್ ರೂಂ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪಾಲಿಕೆ ಸಿಬ್ಬಂದಿ ನೆರವಿಗೆ ಧಾವಿಸಿದ್ದು, ಇವರ ಸಮಸ್ಯೆ ಬಗೆಹರಿಸಿರುವುದಾಗಿ ಕಂಟ್ರೋಲ್ ರೂಂ ಸಿಬ್ಬಂದಿ ತಿಳಿಸಿದರು.

ಬಾಯ್ತೆರೆದಿವೆ ಹೊಂಡಗಳು: ನಗರದ ವಿವಿ ಮೊಹಲ್ಲಾ, ಒಂಟಿಕೊಪ್ಪಲಿನ ಕಾಳಿ ದಾಸ ರಸ್ತೆ, ಕೆ.ಆರ್.ಎಸ್ ರಸ್ತೆ, ಜಯ ಲಕ್ಷ್ಮೀಪುರಂನ ಟೆಂಪಲ್ ರಸ್ತೆ, ನಂಜು ಮಳಿಗೆ ವೃತ್ತ, ನ್ಯೂ ಕಾಂತರಾಜೇ ಅರಸ್ ರಸ್ತೆ, ವಿಜಯನಗರ 1ನೇ ಹಂತದ ರಸ್ತೆಗಳು, ಕುವೆಂಪುನಗರದ ವಿವಿಧ ರಸ್ತೆಗಳು ಹೊಂಡ ಬಿದ್ದು, ವಾಹನ ಸವಾರರಿಗೆ ತೊಂದರೆ ಯಾಗಿದ್ದು, ಕೆಲವೆಡೆ ಹೊಂಡಗಳಲ್ಲಿ ಸಿಲುಕಿ ಮಹಿಳಾ ಸವಾರರು ಬಿದ್ದು ಗಾಯಗೊಂಡು, ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಡುಬ್ಬದ ಬಳಿ ಹೊಂಡ: ಮೈಸೂರು-ಹುಣಸೂರು ರಸ್ತೆಯ ಬಿಎಂ ಆಸ್ಪತ್ರೆ ಬಳಿ ರಸ್ತೆಗೆ ಅಡ್ಡಲಾಗಿ ಕೆರೆ ಏರಿ ರೀತಿ ಡುಬ್ಬ ಗಳನ್ನು ನಿರ್ಮಾಣ ಮಾಡಿದ್ದು, ವಾಹನ ಸವಾರರು ಇಲ್ಲಿ ಸಂಚರಿಸುವಾಗ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.

ಜಿಲ್ಲಾಡಳಿತದ ವಿರುದ್ಧ ಆಕ್ರೋಶ: ಪ್ರವಾ ಸೋದ್ಯಮದಲ್ಲಿ ಮೈಸೂರು ವಿಶ್ವ ಮನ್ನಣೆ ಪಡೆದಿದ್ದರೂ, ಇಲ್ಲಿನ ರಸ್ತೆಗಳು ಮಾತ್ರ ಹಾಳಾಗಿವೆ. ಇಲ್ಲಿನ ರಸ್ತೆ ನಿರ್ವಹಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗೋಕುಲಂ ನಿವಾಸಿಯೊಬ್ಬರು, ಮಳೆಗಾಲ ಆರಂಭಕ್ಕೂ ಮುನ್ನ ವೈಜ್ಞಾನಿಕವಾಗಿ ಹೊಂಡ ಗಳನ್ನು ಮುಚ್ಚುವ ಕಾರ್ಯವನ್ನು ಜಿಲ್ಲಾಡ ಳಿತ ಆರಂಭಿಸಬೇಕು. ಆ ಪ್ರವೃತ್ತಿಯನ್ನು ಇಲ್ಲಿಯವರೆಗೂ ಮೈಸೂರು ಜಿಲ್ಲಾಡಳಿತ ಮೈಗೂಡಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೂಳು ತುಂಬಿರುವ ಚರಂಡಿಗಳು: ನಗರದ ಬಹುತೇಕ ಬಡಾವಣೆಗಳ ರಸ್ತೆ ಪಕ್ಕದ ಚರಂಡಿಗಳಲ್ಲಿ ಹೂಳು ತುಂಬಿದ್ದು, ಮಳೆಗಾಲ ಆರಂಭವಾಗಿರುವುದರಿಂದ ಚರಂಡಿ ಗಳಲೂ ಮಳೆ ನೀರು ಹರಿಯದೆ ರಸ್ತೆಗೆ ನುಗ್ಗುತ್ತಿದೆ. ಇದರಿಂದ ವಾಹನ ಸವಾರ ರಿಗೂ ತೊಂದರೆಯಾಗುತ್ತಿದೆ. ಇದರ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ತಲೆಕೆಡಿಸಿ ಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

3 ಮಂದಿ ನೆರವು: ಮೈಸೂರು ಜಿಲ್ಲೆಯ ನೆರೆ ಸಂತ್ರಸ್ತರಿಗಾಗಿ ಪುರಭವನದಲ್ಲಿ ಸ್ಥಾಪಿ ಸಿರುವ ನೆರವು ಕೇಂದ್ರಕ್ಕೆ ಮೈಸೂರು ವಿಜಯ ನಗರ 3ನೇ ಹಂತದ ನಿವಾಸಿ ಸುರೇಶ್ ಬಾಬು ಎಂಬುವರು 20 ಕೆ.ಜಿ. ಅಕ್ಕಿ, ಬಿಸ್ಕತ್, ಬಟ್ಟೆಗಳು, ಅರವಿಂದ ನಗರದ ನಿವಾಸಿ ರವಿಕುಮಾರ್ ಎಂಬುವರು 7 ಬಾಕ್ಸ್ ವಾಟರ್ ಬಾಟಲ್ ಇತರೆ ಸಾಮಗ್ರಿಗಳು, ಸತ್ಯನಾರಾ ಯಣ್ ರಾವ್ 4 ಹೊದಿಕೆಗಳನ್ನು ನೀಡಿದ್ದಾರೆ ಎಂದು ನೆರವು ಕೇಂದ್ರದ ಅಧಿಕಾರಿ ಗೀತಾ `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »