ನೆರೆ ಸಂತ್ರಸ್ತರಿಗೆ ನೆರವಾಗಿ: ಮುಖ್ಯಮಂತ್ರಿ ಯಡಿಯೂರಪ್ಪ ಮನವಿ
ಮೈಸೂರು

ನೆರೆ ಸಂತ್ರಸ್ತರಿಗೆ ನೆರವಾಗಿ: ಮುಖ್ಯಮಂತ್ರಿ ಯಡಿಯೂರಪ್ಪ ಮನವಿ

August 10, 2019

ಬೆಂಗಳೂರು, ಆ.9(ಕೆಎಂಶಿ)-ಭಾರೀ ಮಳೆ ಮತ್ತು ನೆರೆಗೆ ಸಿಲುಕಿ ಸಂಕಷ್ಟದಲ್ಲಿ ರುವ ರಾಜ್ಯದ ರೈತರು ಮತ್ತು ಜನತೆಯ ನೆರವಿಗೆ ಉದಾರ ನೆರವು ನೀಡಿ ಎಂದು ಮುಖ್ಯಮಂತ್ರಿ. ಬಿ.ಎಸ್.ಯಡಿಯೂರಪ್ಪ, ಉದ್ಯಮಿಗಳು, ಕೈಗಾರಿಕಾ ಹಾಗೂ ಸಂಘ -ಸಂಸ್ಥೆಗಳಲ್ಲಿ ಮನವಿ ಮಾಡಿದ್ದಾರೆ.

ಕಳೆದ ಒಂದು ವಾರದಿಂದ ಬೀಳುತ್ತಿರುವ ಭಾರೀ ಮಳೆಯಿಂದ ಬಹುತೇಕ ಜಲಾ ಶಯಗಳು ಭರ್ತಿಯಾಗಿ ಮಾರಣಾಂತಿಕ ನೆರೆ ಉಂಟಾಗಿದೆ. ಅಲ್ಲದೆ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಬೀಳುತ್ತಿರುವ ಮಳೆ ಯಿಂದಾಗಿ ರಾಜ್ಯದ ಒಂದು ಭಾಗವೇ ನೀರಿನಲ್ಲಿ ಮುಳುಗಿದೆ. ಇದರಿಂದ ಲಕ್ಷಾಂ ತರ ಮಂದಿ ನಿರ್ಗತಿಕರಾಗಿದ್ದಾರೆ. ಸಾವಿ ರಾರು ಕೋಟಿ ರೂ. ಆಸ್ತಿಪಾಸ್ತಿಗೆ ನಷ್ಟವುಂ ಟಾಗಿದೆ. ಇವರ ನೆರವಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಟೊಂಕ ಕಟ್ಟಿ ನಿಂತಿದ್ದರೂ, ನಿಮ್ಮ ನೆರವಿನ ಅಗತ್ಯವಿದೆ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ದಲ್ಲೂ ಇದೇ ಪರಿಸ್ಥಿತಿ ಉಂಟಾಗಿತ್ತು. ಅಂದಿನ ದಿನ ಕೂಡಾ ನೀವು ಸರ್ಕಾರದ ಜೊತೆ ನಿಂತು, ಇವರ ನೆರವಿಗೆ ಬಂದಿರಿ. ಅದೇ ಪರಿಸ್ಥಿತಿ ಇಂದು ಕೂಡ ನಿರ್ಮಾಣವಾಗಿದೆ. ಬನ್ನಿ ನಮ್ಮ ಜೊತೆ ಕೈ ಜೋಡಿಸಿ ಎಂದಿದ್ದಾರೆ.

ಕಳೆದ 3 ದಿನಗಳಿಂದ ಏಕ ವ್ಯಕ್ತಿಯಾಗಿ ಮುಂಬೈ ಕರ್ನಾಟಕ ಭಾಗದ ನೆರೆಗೆ ತುತ್ತಾಗಿ ರುವವರ ರಕ್ಷಣೆಗೆ ನಿಂತಿರುವ ಮುಖ್ಯ ಮಂತ್ರಿಯವರು ಸಾರ್ವಜನಿಕರಲ್ಲಿ ಈ ಮನವಿ ಮಾಡಿದ್ದಾರೆ. ನಾಲ್ಕು ದಶಕಗಳ ನಂತರ ರಾಜ್ಯ ಭೀಕರ ಪ್ರವಾಹಕ್ಕೆ ಸಿಲು ಕಿದೆ. ಹತ್ತಕ್ಕೂ ಹೆಚ್ಚು ಜಿಲ್ಲೆಗಳು ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿವೆ. ಮಠ ಗಳು, ಸಂಘ-ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಉದ್ಯಮಿಗಳು, ಮಠಾಧಿಪತಿ ಗಳು ಸೇರಿದಂತೆ ದೇಣಿಗೆ ನೀಡಿ ನೊಂದ ವರ ಬಾಳಿಗೆ ಬೆಳಕಾಗಿ ಎಂದಿದ್ದಾರೆ. ಈಗಾ ಗಲೇ ಪರಿಹಾರ ಕಾರ್ಯಕ್ಕೆ 100 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ವಿದೆ. ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡಬೇ ಕೆಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ. ನಮ್ಮ ಪಕ್ಷದ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಕಾರ್ಯಕರ್ತರು, ರಾಜ್ಯ ವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಸೇರಿ ದಂತೆ ರಾಜ್ಯದ ಜನತೆ ನನ್ನ ಜೊತೆ ಇದ್ದಾರೆ. ನಾನು ಏಕಾಂಗಿ ಅಲ್ಲ. ಸಾಕಷ್ಟು ಹುರುಪಿ ನಿಂದ ಕೆಲಸ ಮಾಡುತ್ತಿದ್ದೇನೆ ಎಂದು ಪ್ರತಿ ಪಕ್ಷಗಳಿಗೆ ಸಿಎಂ ತಿರುಗೇಟು ನೀಡಿದ್ದಾರೆ.

 

Translate »