ವಿಜಯನಗರ 1ನೇ ಹಂತದಲ್ಲಿ ಫುಟ್‍ಪಾತ್ ತೆರವು ಕಾರ್ಯಾಚರಣೆ
ಮೈಸೂರು

ವಿಜಯನಗರ 1ನೇ ಹಂತದಲ್ಲಿ ಫುಟ್‍ಪಾತ್ ತೆರವು ಕಾರ್ಯಾಚರಣೆ

December 28, 2019

ಮೈಸೂರು,ಡಿ.27(ಆರ್‍ಕೆ)- ಮೈಸೂ ರಿನ ವಿಜಯನಗರ 1ನೇ ಹಂತದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ರಸ್ತೆಯ ಫುಟ್‍ಪಾತ್‍ನಲ್ಲಿ ತಲೆ ಎತ್ತಿದ್ದ ಅಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು.

ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ವಲಯ ಕಛೇರಿ-5ರ ವಲಯಾ ಧಿಕಾರಿ ನಾಗರಾಜು, ಅಭಿವೃದ್ಧಿ ಅಧಿಕಾರಿ ವೀರೇಶ್ ನೇತೃತ್ವದ ಅಭಯ ತಂಡದ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ 9 ಗಂಟೆ ಯಿಂದ ಮಧ್ಯಾಹ್ನದವರೆಗೆ ಕಾರ್ಯಾ ಚರಣೆ ನಡೆಸಿ ಜೆಸಿಬಿ ಮೂಲಕ 15ಕ್ಕೂ ಹೆಚ್ಚು ಪೆಟ್ಟಿಗೆ ಅಂಗಡಿಗಳನ್ನು ತೆರವು ಗೊಳಿಸಿದರು.

ಕೃಷಿಕ ಫೌಂಡೇಷನ್‍ನಿಂದ ಶ್ರೀ ಯೋಗಾ ನರಸಿಂಹಸ್ವಾಮಿ ದೇವಸ್ಥಾನದವರೆಗೂ ಅನಧಿಕೃತವಾಗಿ ಫುಟ್‍ಪಾತ್ ಮೇಲೆ ಅಂಗಡಿಗಳು ತಲೆ ಎತ್ತಿದ್ದರಿಂದ ಪಾದ ಚಾರಿಗಳು ಓಡಾಡಲು ತೊಂದರೆ ಉಂಟಾ ಗಿತ್ತಲ್ಲದೆ, ವಾಹನ ಸಂಚಾರಕ್ಕೂ ಅಡ್ಡಿ ಯುಂಟಾಗುತ್ತಿದೆ ಎಂದು ಸುತ್ತಲಿನ ನಿವಾಸಿಗಳು ದೂರು ನೀಡಿದ್ದರು.ತೆರವು ಕಾರ್ಯಾಚರಣೆಗೆ ವಿಜಯ ನಗರ ಠಾಣೆ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

Translate »