ಬಿರಿಯಾನಿ ಮಸಾಲೆಗೆ ಕಾಡು ಕೊತ್ತಂಬರಿ ಸೊಪ್ಪು
ಮೈಸೂರು

ಬಿರಿಯಾನಿ ಮಸಾಲೆಗೆ ಕಾಡು ಕೊತ್ತಂಬರಿ ಸೊಪ್ಪು

September 27, 2019

ಮೈಸೂರು, ಸೆ.26(ಪಿಎಂ)- ದಸರಾ ಮಹೋತ್ಸವದ ಆಹಾರ ಮೇಳದಲ್ಲಿ ಬುಡಕಟ್ಟು ಆಹಾರ ಶೈಲಿಯ ಬಂಬೂ ಬಿರಿಯಾನಿಯಲ್ಲಿ ಈ ಬಾರಿ ಕಾಡು ಕೊತ್ತಂಬರಿ ಸೊಪ್ಪಿನ ಘಮಲು ಇರಲಿದೆ. ಇದೇ ಮೊದಲ ಬಾರಿಗೆ ಬುಡಕಟ್ಟು ಆಹಾರ ಮಳಿಗೆಯಲ್ಲಿ ಆಹಾರ ಪದಾರ್ಥಗಳಿಗೆ ಕಾಡು ಕೊತ್ತಂಬರಿ ಸೊಪ್ಪು, ಕಾಡು ಕರಿಬೇವು ಬಳಕೆ ಮಾಡಲಾಗುತ್ತಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಕರ್ನಾಟಕ ಆದಿವಾಸಿ ರಕ್ಷಣಾ ಪರಿ ಷತ್ತಿನ ಅಧ್ಯಕ್ಷ ಎಂ.ಕೃಷ್ಣಯ್ಯ, ದಸರಾ ಆಹಾರ ಮೇಳದಲ್ಲಿ ಪರಿಷತ್ತಿನ ಮೂಲಕ 2014ರಿಂದ ಮಳಿಗೆ ತೆರೆದು ಆದಿವಾಸಿ ಪಾರಂಪರಿಕ ಆಹಾರ ಪದ್ಧತಿಯಲ್ಲಿ ಆಹಾರ ಪದಾರ್ಥ ಗಳನ್ನು ಒದಗಿಸಲಾಗುತ್ತಿದೆ ಎಂದರು.

ಅದೇ ರೀತಿ ಈ ಬಾರಿಯೂ ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುವ ಆಹಾರ ಮೇಳದಲ್ಲಿ ಆಲದ ಮರದ ಕೆಳಗೆ ಬುಡ ಕಟ್ಟು ಶೈಲಿಯ ಕುಟೀರ ನಿರ್ಮಿಸಲಾಗುತ್ತಿದೆ. ಇದೇ ಪ್ರಥಮ ಬಾರಿಗೆ ಕಾಡು ಕೊತ್ತಂಬರಿ ಸೊಪ್ಪು ಹಾಗೂ ಕಾಡು ಕರಿಬೇವು ಸೊಪ್ಪನ್ನು ಆಹಾರ ಪದಾರ್ಥ ಗಳಿಗೆ ಬಳಸಲಾಗುತ್ತಿದೆ ಎಂದು ತಿಳಿಸಿದರು.

`ಹಾಡಿ ಮನೆ ಊಟ’ ಶೀರ್ಷಿಕೆಯಲ್ಲಿ ಬಿದಿರು ಬಂಬಿನ ಬಿರಿಯಾನಿ (ಒಂದು ಪ್ಲೇಟಿಗೆ 180 ರೂ.) ಸೇರಿ ದಂತೆ ಬುಡಕಟ್ಟು ಸಮುದಾಯ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗು ವುದು ಎಂದರು. ಜೇನು ಮಿಶ್ರಿತ ಕಾಡು ಗೆಣಸು (ಬಟ್ಟಲಿಗೆ 50 ರೂ.), ಬೆದರಕ್ಕಿ ಪಾಯಿಸ (ಲೋಟವೊಂದಕ್ಕೆ 50 ರೂ.), ಮಾಕಳಿ ಬೇರು ಟಿ (ಲೋಟವೊಂದಕ್ಕೆ 20 ರೂ.) ಹಾಗೂ ಏಡಿ ಸಾರಿನ ರಾಗಿ ಮುದ್ದೆ ಊಟ (100 ರೂ.) ಸೇರಿದಂತೆ ಇನ್ನಿತರ ಆಹಾರ ದೊರೆ ಯಲಿದೆ. 30 ಮಂದಿ ಅಡುಗೆ ಕೆಲಸ ನಡೆಸ ಲಿದ್ದಾರೆ ಎಂದು ಹೇಳಿದರು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ.ಕಾವೇರ, ಜಂಟಿ ಕಾರ್ಯದರ್ಶಿ ಸಾವಿತ್ರಿ, ಬಂಬೂ ಬಿರಿಯಾನಿ ಅಡುಗೆ ಭಟ್ಟ ಕುಮಾರ್, ಸಹಾಯಕ ರಾಮು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Translate »