ಗೌಳಿ ಬೀದಿ ತೋಡಿನಲ್ಲಿ ಹಳೇ ನಾಣ್ಯಗಳು ಪತ್ತೆ
ಕೊಡಗು

ಗೌಳಿ ಬೀದಿ ತೋಡಿನಲ್ಲಿ ಹಳೇ ನಾಣ್ಯಗಳು ಪತ್ತೆ

July 1, 2018

ಮಡಿಕೇರಿ:  ನಗರದ ಕೊಹಿ ನೂರು ರಸ್ತೆಯ ಗೌಳಿಬೀದಿ ತೋಡಿನಲ್ಲಿ ಚಲಾವಣೆಯಲ್ಲಿರದ ನಾಣ್ಯಗಳು ಪತ್ತೆಯಾಗಿವೆ. ಮಾತ್ರವಲ್ಲದೇ ದೇವಾ ಲಯದ ಹುಂಡಿಗೆ ಹಾಕುವ ಬೆಳ್ಳಿಯ ನಾಗನ ಪ್ರತಿಮೆಗಳು, ದೀಪಗಳು, ಮಾನವ ರೂಪದ ಬೆಳ್ಳಿಯ ಹಾಳೆಗಳು ಹಾಗು ಅಂದಾಜು ನಾಲ್ಕು ಕೆ.ಜಿ.ಗೂ ಹೆಚ್ಚಿನ ನಾಣ್ಯ ಗಳು ಪತ್ತೆಯಾಗಿವೆ.

ದೇವಾಲಯದ ಹುಂಡಿ ಕದ್ದಿರುವ ಕಳ್ಳರು ಹಣ ಮತ್ತು ಇತರ ವಸ್ತುಗಳನ್ನು ದೋಚಿ, ಬೆಳ್ಳಿಯ ಆಭರಣಗಳನ್ನು ತೋಡಿಗೆ ಎಸೆದಿರುವ ಕುರಿತು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ತೋಡಿನಲ್ಲಿ ಕಂಡುಬಂದಿರುವ ನಾಣ್ಯ ಮತ್ತು ಬೆಳ್ಳಿಯ ಆಭರಣಗಳು ಸುಬ್ರಹ್ಮಣ್ಯ ದೇವಾಲಯಕ್ಕೆ ಸಂಬಂಧಿ ಸಿರುವ ಕುರುಹುಗಳು ಪತ್ತೆಯಾಗಿವೆ. ಕಳೆದ ಮೂರು ದಿನಗಳ ಹಿಂದೆ ತೋಡಿನಲ್ಲಿ ಪತ್ತೆ ಯಾಗಿರುವ ನಾಣ್ಯಗಳ ಪೈಕಿ ಇತ್ತೀಚಿನ ಸ್ಟೀಲ್ ನಾಣ್ಯಗಳು ಕಂಡುಬಂದಿದೆ. 5,10,20 ಪೈಸೆಯ ಭಾರವಿಲ್ಲದ ನಾಣ್ಯಗಳು ಕೆಸರಿನ ಮೇಲೆ ಹರಡಿಕೊಂಡಿದ್ದು, 1,2,5 ಮತ್ತು 10 ರೂಪಾಯಿಗಳ ಭಾರವಿರುವ ನಾಣ್ಯ ಗಳು ಕೆಸರಿನಲ್ಲಿ ಹುದುಗಿಕೊಂಡಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ತೋಡಿನೊಳಗೆ ಅಂದಾಜು ಹತ್ತು ಅಡಿ ಉದ್ದಕ್ಕೂ ನಾಣ್ಯಗಳು ಹರಡಿಕೊಂಡಿದ್ದು, ಹಲವು ಅನುಮಾನಗಳಿಗೆ ಕಾರಣವಾ ಗಿದೆ.

ಕೊಹಿನೂರು ರಸ್ತೆಯ ಗೌಳಿಬೀದಿ ಯಲ್ಲಿರುವ ಕೋಳಿ ಅಂಗಡಿಯ ಸಿಬ್ಬಂದಿ ಯೊಬ್ಬರು ಕಸ ಸುರಿಯಲು ತೆರಳಿದ ಸಂದರ್ಭ ಈ ದೃಶ್ಯ ಕಂಡುಬಂದಿದ್ದು, ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ತೂಕವಿಲ್ಲದ ನಾಣ್ಯಗಳು ಮತ್ತು ಬೆಳ್ಳಿಯ ಆಭರಣಗಳು ಕೊಚ್ಚಿಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತೋಡಿನಲ್ಲಿ ಪತ್ತೆಯಾಗಿರುವ ಬೆಳ್ಳಿಯ ನಾಗನ ಪ್ರತಿಮೆ, ಮಾನವ ರೂಪದ ಬೆಳ್ಳಿಯ ಆಭರಣಗಳು ನಾಗದೋಷ ಪರಿಹಾರ ಮತ್ತು ಪಿತೃದೋಷ ಪರಿಹಾರಕ್ಕೆ ಬಳಸುವ ಆಭರಣಗಳಾಗಿದ್ದು, ದೇವಾಲಯಕ್ಕೆ ಸಂಬಂಧಿಸಿದವು ಎಂಬುದಕ್ಕೆ ಸಾಕ್ಷಿ ಯಾಗಿದೆ. ತೋಡಿನ ಕೆಸರನ್ನು ಸರಿಸಿ ದಷ್ಟು ನಾಣ್ಯಗಳು ಹೊರಬರುತ್ತಿದ್ದು, ಭಾರಿ ಪ್ರಮಾಣದ ನಾಣ್ಯ ಕೆಸರಿನಲ್ಲಿ ಸಿಲುಕಿ ಕೊಂಡಿವೆ. ದೇವಾಲಯದ ಹುಂಡಿ ಕದ್ದು, ತಮಗೆ ಬೇಕಾದ ವಸ್ತುಗಳನ್ನು ಪಡೆದು ಕೊಂಡು ಉಳಿದವುಗಳನ್ನು ಈ ತೋಡಿಗೆ ಸುರಿದಿರಬಹುದೆಂದು ಶಂಕಿಸಲಾಗಿದೆ.

ಗೌಳಿಬೀದಿ ರಸ್ತೆ ಬದಿಯಲ್ಲಿರುವ ಈ ತೋಡಿಗೆ ಕೊಳಚೆ ತ್ಯಾಜ್ಯಗಳನ್ನು ಮಾತ್ರ ಹರಿಬಿಡಲಾಗುತ್ತಿದ್ದು, ಯಾವುದೇ ದೇವಾ ಲಯ ಸಮಿತಿಯವರು ಕೂಡ ದೇವಾಲ ಯಕ್ಕೆ ಸಂಬಂಧಿಸಿದ ಹಳೆನಾಣ್ಯ, ನಾಗನ ಪ್ರತಿಮೆ, ದೀಪಗಳನ್ನು ಈ ತೋಡಿನಲ್ಲಿ ವಿಸರ್ಜಿಸಲು ಸಾಧ್ಯವಿಲ್ಲ ಎಂದು ಸ್ಥಳೀ ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯ ಉದ್ದಕ್ಕೂ ವರ್ಕ್‍ಶಾಪ್ ಗಳಿದ್ದು, ಸಾಮಾನ್ಯವಾಗಿ ಗುಜರಿ ಆಯುವ ಮಂದಿ ಈ ತೋಡಿನಲ್ಲಿ ಗುಜರಿ ಹೆಕ್ಕುತ್ತಿರುತ್ತಾರೆ. ಆದರೆ ಕಳೆದ ನಾಲ್ಕು ದಿನಗಳಿಂದ ಗುಜರಿಯವರು ಇತ್ತ ಕಡೆ ಬರದಿರುವುದ ರಿಂದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪೊಲೀ ಸರು ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿ ಕೊಂಡು ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ.

Translate »