ಹಾಸನ: ಎತ್ತಿನ ಗಾಡಿ ಕೆರೆಗೆ ಉರುಳಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಹೊಳೇನರಸೀ ಪುರ ತಾಲೂಕಿನ ಉದ್ದೂರು ಹೊಸಹಳ್ಳಿಯಲ್ಲಿ ಶನಿವಾರ ನಡೆದಿದೆ.
ರಾಜೇಗೌಡ (55), ಶಾರದಮ್ಮ (45), ಹೃತಿಕ್ (6), ಕೃತಿಕ್ (5) ಮೃತರು. ನಾಲ್ವರ ಶವಗಳು ಶನಿವಾರ ಮಧ್ಯಾಹ್ನದ ವೇಳೆಗೆ ಪತ್ತೆಯಾ ದವು. ಬಿತ್ತನೆ ಮಾಡುವ ಸಲುವಾಗಿ ಎತ್ತಿನ ಗಾಡಿಯಲ್ಲಿ ಆಲೂಗಡ್ಡೆ ತುಂಬಿ ಕೊಂಡು ಹೊಲಕ್ಕೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಕೆರೆ ಏರಿ ಮೇಲೆ ಅವಘಡ ಸಂಭವಿಸಿದೆ.
ಶುಕ್ರವಾರ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಕೆರೆ ಏರಿ ಮೇಲಿನ ರಸ್ತೆ ಪೂರಾ ಕೆಸರು ಮಯವಾಗಿತ್ತು. ಅದರಿಂದಾಗಿ ಟಯರ್ ಚಕ್ರಗಳ ಗಾಡಿಯು ಜಾರಿ ದಂತಾಗಿ ಕೆರೆಗೆ ಉರುಳಿರಬಹುದು. ಕೆಲ ದಿನಗಳಿಂದ ಉತ್ತಮ ಮಳೆಯಾಗಿದ್ದ ರಿಂದ ಕೆರೆಯಲ್ಲೂ ನೀರು ತುಂಬಿದ್ದರಿಂದ ನೀರಿನಿಂದ ಮೇಲೆ ಬರಲಾಗದೇ ನಾಲ್ವರೂ ಮುಳುಗಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಒಂದೇ ಬಾರಿಗೆ ನಾಲ್ಕು ಜೀವಗಳನ್ನು ಕಳೆದು ಕೊಂಡ ಕುಟುಂಬದವರ ಆಕ್ರಂದನ ಹೇಳತೀರದಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಹಳ್ಳಿ ಮೈಸೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.