ರಫೆಲ್ ಡೀಲ್ ನಂತರ ಅನಿಲ್ ಅಂಬಾನಿ ಕಂಪನಿಯ 143.7 ಮಿಲಿಯನ್ ಯೂರೋ ತೆರಿಗೆ ಮನ್ನಾ ಮಾಡಿದ ಫ್ರಾನ್ಸ್!
ಮೈಸೂರು

ರಫೆಲ್ ಡೀಲ್ ನಂತರ ಅನಿಲ್ ಅಂಬಾನಿ ಕಂಪನಿಯ 143.7 ಮಿಲಿಯನ್ ಯೂರೋ ತೆರಿಗೆ ಮನ್ನಾ ಮಾಡಿದ ಫ್ರಾನ್ಸ್!

April 14, 2019

ನವದೆಹಲಿ: ಭಾರತ ಸರ್ಕಾರ 36 ರಫೆಲ್ ಯುದ್ಧ ವಿಮಾನ ಖರೀದಿ ಸಂಬಂಧ ಫ್ರಾನ್ಸ್ ಜತೆ ಒಪ್ಪಂದ ಮಾಡಿ ಕೊಂಡ ಕೆಲವೇ ತಿಂಗಳಲ್ಲಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್‍ನ ಫ್ರೆಂಚ್ ನೋಂದಾಯಿತ ಟೆಲಿಕಾಮ್ ಸಂಸ್ಥೆಗೆ ಫ್ರಾನ್ಸ್ 143.7 ದಶಲಕ್ಷ ಯೂರೋ ತೆರಿಗೆ ಮನ್ನಾ ಮಾಡಿದೆ ಎಂದು ಪ್ರಮುಖ ಫ್ರೆಂಚ್ ದೈನಿಕ ಲೀ ಮಾಂಡ್ ಶುಕ್ರವಾರ ವರದಿ ಮಾಡಿದೆ.

ಲೀ ಮಾಂಡ್ ವರದಿಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಕಮ್ಯುನಿಕೇಶನ್ “ನಾವೇನೂ ತಪ್ಪು ಮಾಡಿಲ್ಲ. ಕಾನೂನಿನ ಚೌಕಟ್ಟಿ ನಲ್ಲೇ ನಮ್ಮ ತೆರಿಗೆ ವಿವಾದವನ್ನು ಇತ್ಯರ್ಥಪಡಿಸಲಾಗಿದೆ ಮತ್ತು ಫ್ರಾನ್ಸ್‍ನಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲ ಕಂಪನಿಗಳಿಗೂ ಈ ಸವಲತ್ತು ಸಿಗುತ್ತಿದೆ’ ಎಂದು ಹೇಳಿದೆ.

ಫ್ರೆಂಚ್ ತೆರಿಗೆ ಸಂಸ್ಥೆ, ರಿಲಯನ್ಸ್ ಫ್ಲ್ಯಾಗ್ ಅಟ್ಲಾಂಟಿಕ್ ಫ್ರಾನ್ಸ್ ಕಂಪನಿಯಿಂದ 151 ದಶಲಕ್ಷ ಯೂರೋ ಪಾವತಿಯನ್ನು ಕೇಳಿತ್ತು. ಅಂತಿಮವಾಗಿ ಈ ತೆರಿಗೆ ವಿವಾದ ಇತ್ಯರ್ಥಗೊಳ್ಳುವಲ್ಲಿ ಅದು 7.3 ದಶಲಕ್ಷ ಯೂರೋ ಸ್ವೀಕರಿಸಿತು. ರಿಲಯನ್ಸ್ ಫ್ಯಾಗ್ ಸಂಸ್ಥೆ ಫ್ರಾನ್ಸ್‍ನಲ್ಲಿ ಟೆರೆಸ್ಟ್ರಿಯಲ್ ಕೇಬಲ್ ನೆಟ್‍ವರ್ಕ್ ಮತ್ತು ಇತರ ಟೆಲಿಕಾಂ ಮೂಲ ಸೌಕರ್ಯಗಳ ಒಡೆತನವನ್ನು ಹೊಂದಿದೆ. 2015ರ ಅಕ್ಟೋಬರ್‍ನಲ್ಲಿ ಭಾರತ ಮತ್ತು ಫ್ರಾನ್ಸ್ ಕಂಪೆನಿ ಡಸಾಲ್ಟ್ ಏವಿಯೇಷನ್ ಮಾತುಕತೆ ವ್ಯವಹಾರ ನಡೆಸುವ ಸಂದರ್ಭದಲ್ಲಿ ಅಂಬಾನಿಗೆ ಸೇರಿದ ಕಂಪನಿಯ ತೆರಿಗೆ ವಿವಾದವನ್ನು ಬಗೆಹರಿಸಲಾ ಗಿತ್ತು ಎಂದು ಲೀ ಮಾಂಡ್ ವರದಿ ಮಾಡಿದೆ. ಇದಕ್ಕೂ ಕೆಲವು ತಿಂಗಳ ಮುನ್ನ 2015ರ ಏಪ್ರಿಲ್‍ನಲ್ಲಿ ನರೇಂದ್ರ ಮೋದಿ ಫ್ರಾನ್ಸ್‍ಗೆ ಅಧಿಕೃತ ಭೇಟಿ ನೀಡಿದ ವೇಳೆ ಡಸಾಲ್ಟ್ ಏವಿಯೇಷನ್‍ನಿಂದ 36 ಯುದ್ಧ ಮಾನಗಳ ಖರೀದಿ ಒಪ್ಪಂದವನ್ನು ಪ್ರಕಟಿಸಿದ್ದರು.

Translate »