ಮೈಸೂರು ಜಯದೇವದಿಂದ 175 ಬಡ ರೋಗಿಗಳಿಗೆ ಉಚಿತ ಆಂಜಿಯೋಪ್ಲಾಸ್ಟಿ
ಮೈಸೂರು

ಮೈಸೂರು ಜಯದೇವದಿಂದ 175 ಬಡ ರೋಗಿಗಳಿಗೆ ಉಚಿತ ಆಂಜಿಯೋಪ್ಲಾಸ್ಟಿ

October 17, 2019

ಮೈಸೂರು, ಅ.16(ಎಂಟಿವೈ)- ಮೈಸೂರು ಹಾಗೂ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಬುಧವಾರ ನಡೆದ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಯಶಸ್ವಿಯಾಗಿದ್ದು, 175 ಬಡ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ. ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

ಮೈಸೂರು ಜಯದೇವ ಆಸ್ಪತ್ರೆಯಲ್ಲಿ ನಡೆದ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾ ಗಾರದಲ್ಲಿ ಮಾತನಾಡಿದ ಅವರು, ಅಮೇ ರಿಕಾದ ಡಾ.ಸುಬ್ರಹ್ಮಣಿ ಹಾರ್ಟ್ ಫೌಂಡೇ ಷನ್ ಹಾಗೂ ಮೆಡಟ್ರಾನಿಕ್ ವ್ಯಾಸ್ಕುಲರ್ ಸಂಸ್ಥೆಯ ನೆರವಿನೊಂದಿಗೆ ನಡೆಸಿದ ಕಾರ್ಯಾ ಗಾರದಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ 125, ಮೈಸೂರಿನ ಆಸ್ಪತ್ರೆಯಲ್ಲಿ 50 ರೋಗಿಗಳಿಗೆ ಉಚಿತ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ.

ಕಳೆದ 12 ವರ್ಷದಿಂದ 15 ಕೋಟಿ ರೂ. ವೆಚ್ಚದಲ್ಲಿ 2200 ರೋಗಿಗಳಿಗೆ ಉಚಿತ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ. ಭಾರತದಲ್ಲಿ ಶಿಕ್ಷಣ ಪಡೆದ ಶೇ.30ರಷ್ಟು ವೈದ್ಯರು ಅಮೇರಿಕಾದಲ್ಲಿ ನೆಲೆಸಿದ್ದಾರೆ. ಆದರೆ ತಾಯ್ನಾಡಿನ ಸೇವೆ ಮಾಡುವವರ ಸಂಖ್ಯೆ ಮಾತ್ರ ಶೇ.1ರಷ್ಟಿದೆ. ಅಂತಹ ವರಲ್ಲಿ ಅನಿವಾಸಿ ಭಾರತೀಯರಾದ ಡಾ. ಸುಬ್ರಹ್ಮಣಿ ಮತ್ತು ಡಾ.ದೇವರಾಜ್ ಅವರ ಸೇವೆ ಶ್ಲಾಘನೀಯ. ಇಂತಹ ಹೃದಯ ಶ್ರೀಮಂತಿಕೆ ಇರುವವರು ಹೆಚ್ಚಾಗಬೇಕು. ಕಳೆದ 10 ವರ್ಷಗಳಿಂದ ಅಧ್ಯಯನ ಮಾಡಿ ನೋಡಿದರೆ ಶೇ.60ರಷ್ಟು ಜನರಿಗೆ ಸಕ್ಕರೆ ಖಾಯಿಲೆ, ಶೇ.55ರಷ್ಟು ಜನರಿಗೆ ಅಧಿಕ ರಕ್ತದೊತ್ತಡ, ಶೇ.50ರಷ್ಟು ಜನರಿಗೆ ಕೊಲೆ ಸ್ಟ್ರಾಲ್ ಇರುವವರಿಗೆ ಹೃದ್ರೋಗ ಕಾಣಿಸಿ ಕೊಳ್ಳುತ್ತಿದೆ. ಇದರಲ್ಲಿ ಶೇ.70ರಷ್ಟು ಮಂದಿ ಮಾಂಸಾಹಾರಿಗಳಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಯುವಕರಲ್ಲಿ ಹೆಚ್ಚಾಗಿ ಹೃದಯಾಘಾತವಾಗುತ್ತಿರುವುದು ಆತಂಕ ಕಾರಿ ಎಂದು ವಿಷಾದಿಸಿದರು. ಈ ವೇಳೆ ಅಮೆರಿಕಾದ ಡಾ.ಸುಬ್ರಹ್ಮಣಿ, ಡಾ.ದೇವ ರಾಜ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾನಂದ್, ಆರ್.ಎಂ.ಓ. ಡಾ. ಪಾಂಡುರಂಗಯ್ಯ, ಡಾ.ಹರ್ಷಬಸಪ್ಪ, ಡಾ.ಸಂತೋಷ್, ಡಾ.ರಾಜಿತ್, ಡಾ. ಶಿರಾ ಶಂಕರ್, ಡಾ.ಭಾರತಿ, ಡಾ.ವೀಣಾ ನಂಜಪ್ಪ, ಡಾ.ಚೈತ್ರಾ, ಡಾ.ಜಯಶೀಲನ್, ಡಾ.ವಿಶ್ವ ನಾಥ್, ಡಾ.ರಂಜಿತಾ, ಡಾ.ದೇವರಾಜ್, ಡಾ.ರಶ್ಮಿ, ಡಾ.ಅಶ್ವಿನಿ, ನರ್ಸಿಂಗ್ ಅಧೀಕ್ಷಕ ಹರೀಶ್‍ಕುಮಾರ್, ಪಿಆರ್‍ಓ ವಾಣಿ ಮೋಹನ್, ಚಂಪಕಮಾಲ, ಗುರುಮೂರ್ತಿ ಇದ್ದರು.

Translate »