ಜಂಬೂಸವಾರಿಯಲ್ಲಿ ಜಾನಪದ ಕಲಾವಿದರನ್ನು ಪ್ರಾಣಿಗಳಂತೆ ನೋಡಿಕೊಂಡ ಉತ್ಸವ ಸಮಿತಿ
ಮೈಸೂರು

ಜಂಬೂಸವಾರಿಯಲ್ಲಿ ಜಾನಪದ ಕಲಾವಿದರನ್ನು ಪ್ರಾಣಿಗಳಂತೆ ನೋಡಿಕೊಂಡ ಉತ್ಸವ ಸಮಿತಿ

October 17, 2019

ಮೈಸೂರು,ಅ.16(ಆರ್‍ಕೆಬಿ)- ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗಿಯಾ ಗಿದ್ದ ಜಾನಪದ ಕಲಾವಿದರಿಗೆ ಪರಿಹಾರ ಹಾಗೂ ಸೂಕ್ತ ಮೂಲಭೂತ ಸೌಕರ್ಯ ವನ್ನು ನೀಡದೆ ಪ್ರಾಣಿಗಳಂತೆ ತಮ್ಮನ್ನು ನೋಡಲಾಗಿದೆ ಎಂದು ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲ ಸಿದ್ದರಾಜು ಆರೋಪಿಸಿದರು.

‘ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ, ದಸರಾ ಉತ್ಸವ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 900ಕ್ಕೂ ಹೆಚ್ಚು ಜಾನಪದ ಕಲಾವಿದರನ್ನು ಒಂದೆಡೆ ಕೂಡಿ ಹಾಕಿ, ಯಾವುದೇ ಮೂಲ ಭೂತ ಸೌಲಭ್ಯ ನೀಡದೆ ಪ್ರಾಣಿಗಳಂತೆ ನೋಡಲಾಗಿದೆ. ಆಹಾರ ಹೊರತಾಗಿ ನಿತ್ಯ ಕರ್ಮಗಳಿಗೆ ಸ್ಥಳಾವಕಾಶ ಇರಲಿಲ್ಲ. ಅಲ್ಲದೆ ಜಂಬೂಸವಾರಿ ದಿನದಂದು ಬೆಳಿಗ್ಗೆ 8 ಗಂಟೆಗೇ ಅರಮನೆ ಆವರಣಕ್ಕೆ ಆಗಮಿ ಸಿದ ಕಲಾವಿದರಿಗೆ ಕುಡಿಯುವ ನೀರನ್ನು ಒದಗಿಸಲಿಲ್ಲ. ಇಡೀ ದಿನ ಶೌಚಾಲಯಕ್ಕೆ ಹೋಗಲಾಗದೆ ಪ್ರದರ್ಶನ ನೀಡಿದ್ದೇವೆ. ಇಷ್ಟೆಲ್ಲ ತೊಂದರೆ ನೀಡುವುದಾದರೆ ಯಾವ ಪುರುಷಾರ್ಥಕ್ಕಾಗಿ ಕಲಾವಿದರನ್ನು ದಸರಾಗೆ ಆಹ್ವಾನಿಸಲಾಯಿತು? ಎಂದು ಕಟುವಾಗಿ ಪ್ರಶ್ನಿಸಿದರು. ನಮ್ಮ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಕನಿಷ್ಠ ನಿಗದಿಯಂತೆ ಸಂಭಾ ವನೆಯೂ ಕೈಸೇರಿಲ್ಲ. ಮುಂದಿನ ಬಾರಿಯಿಂದ ಈ ನಿರ್ಲಕ್ಷ್ಯ ಧೋರಣೆ ಬಿಟ್ಟು, ಗೌರವ ಯುತವಾಗಿ ನಡೆಸಿಕೊಳ್ಳದಿದ್ದರೆ ಕಲಾವಿ ದರು ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿ ಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮೈಸೂರು ದಸರಾ ಉತ್ಸವ ಸಮಿತಿಯ ರೂಪು ರೇಷೆಗಳನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ಜಂಬೂ ಸವಾರಿ ಯಲ್ಲಿ ಭಾಗವಹಿಸುವ ಜಾನಪದ ಕಲಾ ವಿದರ ಸಂಭಾವನೆ ದಿನವೊಂದಕ್ಕೆ ಪ್ರತಿ ಕಲಾವಿದರಿಗೆ 5 ಸಾವಿರ ನಿಗದಿಪಡಿಸ ಬೇಕು. ಕರ್ನಾಟಕ ಜಾನಪದ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಉತ್ತರ ಕರ್ನಾ ಟಕದ ಅನೇಕ ಜಿಲ್ಲೆಗಳಲ್ಲಿ ಪ್ರವಾಹದಿಂದ ನೆಲೆ ಕಳೆದುಕೊಂಡಿರುವ ಸಾವಿರಾರು ಜಾನ ಪದ ಕಲಾವಿದರಿಗೆ ನೆಲೆ ಒದಗಿಸಲು ಕ್ರಮ ಜರುಗಿಸಬೇಕು. ಕೇಂದ್ರ ಸರ್ಕಾರದ ಸಂಸ್ಕøತಿ ಮಂತ್ರಾಲಯ ವತಿಯಿಂದ ನಡೆ ಯುವ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಉತ್ಸವಗಳಿಗೆ ಕರ್ನಾಟಕದ ಜಾನಪದ ಕಲಾ ತಂಡಗಳನ್ನು ಪ್ರಾಯೋಜನೆ ಮಾಡ ಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಜಾನಪದ ಅಕಾಡೆಮಿ ಮಾಜಿ ಸದಸ್ಯ ಮಹದೇವು, ಕಲಾವಿದ ಕುಮಾರಸ್ವಾಮಿ, ರೇವಣ್ಣ, ಕಿರಾಳು ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »